ಇತ್ತೀಚಿಗಷ್ಟೇ ಸೋಶಿಯಲ್ ಮೀಡಿಯಾದಲ್ಲಿ ಧ್ರುವ ಸರ್ಜಾ ಅವರು ಪೋಸ್ಟ್ ಮಾಡುವ ಮೂಲಕ ತಾವು ಅತಿ ಶೀಘ್ರದಲ್ಲೇ ತಂದೆಯಾಗುತ್ತಿದ್ದೇನೆ ಎನ್ನುವ ಸಿಹಿ ಸುದ್ದಿಯನ್ನು ಅಧಿಕೃತವಾಗಿ ಹಂಚಿಕೊಂಡಿದ್ದಾರೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಪತ್ನಿ ಆಗಿರುವ ಪ್ರೇರಣಾ ಶಂಕರ್ ಎಂಟು ತಿಂಗಳನ್ನು ಪೂರೈಸಿ ಈಗಾಗಲೇ 9ನೇ ತಿಂಗಳಿನಲ್ಲಿ ಇದ್ದಾರೆ. ಅತಿ ಶೀಘ್ರದಲ್ಲೇ ಸರ್ಜಾ ಮನೆತನಕ್ಕೆ ಮತ್ತೊಂದು ಕುಡಿಯ ಆಗಮನವಾಗಲಿದೆ ಎಂಬುದು ಸಿಹಿ ಸುದ್ದಿಯಾಗಿದೆ.
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ರವರು ಸದ್ಯಕ್ಕೆ ಮಾರ್ಟಿನ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ. ಹೀಗಿದ್ದರೂ ಕೂಡ ತಮ್ಮ ಪತ್ನಿ ಆಗಿರುವ ಪ್ರೇರಣ ಶಂಕರ್ ಅವರ ಸೀಮಂತ ಅನ್ನು ಅದ್ದೂರಿಯಾಗಿ ಹಾಗೂ ಶಾಸ್ತ್ರೋಕ್ತವಾಗಿ ಆಚರಿಸಬೇಕು ಎನ್ನುವ ಮಹಾದಾಸಿಯನ್ನು ಹೊಂದಿದ್ದಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಇದಕ್ಕಾಗಿ ಭರ್ಜರಿಯಾಗಿ ತಯಾರಿಯನ್ನು ಕೂಡ ಮಾಡಿಕೊಂಡಿದ್ದಾರೆ.
ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡಿದ್ದ ಕುಟುಂಬಕ್ಕೆ ಕೊಂಚಮಟ್ಟಿಗೆ ನೆಮ್ಮದಿಯನ್ನು ತಂದಿದ್ದು ಮೇಘನಾ ರಾಜ್ ಅವರ ಪುತ್ರ ರಾಯನ್ ರಾಜ್ ಸರ್ಜಾ. ಈಗ ಜೂನಿಯರ್ ಚಿರು ಸರ್ಜಾ ನಂತರ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಮಗು ಕೂಡ ಸರ್ಜಾ ಮನೆತನಕ್ಕೆ ಮತ್ತಷ್ಟು ಸಂತೋಷದ ಹೊನಲನ್ನು ತರಲು ಸಜ್ಜಾಗಿ ನಿಂತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಮ್ಮ ಪತ್ನಿಯ ಸೀಮಂತ ಶಾಸ್ತ್ರವನ್ನು ನಡೆಸಲು ರೂಪಿಸಿರುವ ಯೋಜನೆ ಕೇಳಿದರೆ ಪ್ರತಿಯೊಬ್ಬರೂ ಕೂಡ ಆಶ್ಚರ್ಯ ಪಡುವುದು ಗ್ಯಾರಂಟಿ.
ಹೌದು ತಮ್ಮ ಪತ್ನಿಯ ಸೀಮಂತ ಶಾಸ್ತ್ರವನ್ನು ಕೇವಲ ಮನೆಯವರ ಸಮ್ಮುಖದಲ್ಲಿ ಮಾತ್ರವಲ್ಲದೆ ಚಿತ್ರರಂಗದ ದೊಡ್ಡ ದೊಡ್ಡ ಗಣ್ಯಾತಿ ಗಣ್ಯ ನಟರು ಕೂಡ ಬಂದು ಆಶೀರ್ವದಿಸುವಂತೆ ಹಾಗೂ ಈ ಅದ್ದೂರಿ ಕಾರ್ಯಕ್ರಮಕ್ಕೆ ಸಾಕ್ಷಿಯಾಗುವಂತೆ ಮಾಡಬೇಕು ಎನ್ನುವುದೇ ಧ್ರುವ ಸರ್ಜಾ ಅವರ ಮಹದಾಯಿಸೆಯಾಗಿದೆ ಹಾಗೂ ಆ ಯೋಜನೆಯತ್ತ ಕಾರ್ಯ ಪ್ರವೃತ್ತರಾಗಿದ್ದಾರೆ ಎಂಬುದಾಗಿ ಕೂಡ ತಿಳಿದು ಬಂದಿದೆ. ಒಟ್ಟಾರಿಯಾಗಿ ಮೊದಲ ಮಗುವಿನ ಆಗಮನವನ್ನು ಅದ್ದೂರಿಯಾಗಿ ಮುನ್ನವೇ ಆಚರಿಸುವ ತಯಾರಿಯಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇದ್ದಾರೆ ಎಂದು ಹೇಳಬಹುದಾಗಿದೆ.