ಶುದ್ಧವಾದ ನೀರು ಕುಡಿಯುವುದರಿಂದ ಏನೆಲ್ಲಾ ಆಗುತ್ತೆ ಓದಿ

ಮನುಷ್ಯನ ದೇಹಕ್ಕೆ ಶುದ್ಧವಾದ ನೀರು ಎಷ್ಟೆಲ್ಲ ಪ್ರಯೋಜನಕಾರಿಯಾಗಿ ಕೆಲಸ ಮಾಡುತ್ತೆ, ಹಾಗೂ ಪ್ರತಿದಿನ ಶುದ್ಧವಾದ ನೀರು ಕುಡಿಯುವುದರಿಂದ ಹೇಗೆಲ್ಲ ಪ್ರಯೋಜನವನ್ನು ಪಡೆದುಕೊಳ್ಳಬಹುದು ಅನ್ನೋದನ್ನ ಈ ಮೂಲಕ ತಿಳಿಯೋಣ. ಒಳ್ಳೆಯ ಆರೋಗ್ಯಕ್ಕಾಗಿ ದಿನಕ್ಕೆ ೬ ರಿಂದ ೮ ಲೋಟ ಶುದ್ಧವಾದ ನೀರನ್ನು ಕುಡಿಯಬೇಕು. ನಮ್ಮ ದೇಹವು ೭೦ % ನೀರಿನಿಂದ ಆಗಿದೆ ದೇಹದ ಪ್ರತಿಯೊಂದು ಕೆಲಸಕ್ಕೂ ನೀರು ಅತ್ಯಂತ ಅವಶ್ಯಕ. ನೀರನ್ನು ಜೀವಜಲ ಎಂದೇ ಕರೆಯಲಾಗುತ್ತದೆ.

ಹೆಚ್ಚು ನೀರನ್ನು ಕುಡಿಯುವುದರಿಂದ ರೋಗಗಳಿಂದ ದೂರ ಉಳಿಯಬಹುದು ಎಂಬುದಾಗಿ ವೈದ್ಯರೇ ಹೇಳುತ್ತಾರೆ, ವಿಷ್ಯಕ್ಕೆ ಬರೋಣ ಶುದ್ಧವಾದ ನೀರನ್ನು ಕುಡಿಯುವುದರಿಂದ ಅರೋಗ್ಯ ಹೇಗೆಲ್ಲ ವೃದಿಯಾಗುತ್ತೆ ಅನ್ನೋದನ್ನ ತಿಳಿಯುವುದಾದರೆ, ಶುದ್ಧವಾದ ನೀರನ್ನು ಕುಡಿಯುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹದು. ಈ ನೀರು ಜೀರ್ಣಕ್ರಿಯೆಗೆ ಸಹಕಾರಿ ನೀರನ್ನು ಕುಡಿಯುವುದರಿಂದ ಅಕಾಲದಲ್ಲಿ ಉಂಟಾಗುವಂತ ಹಸಿವು ಸಹ ಕಡಿಮೆಯಾಗುತ್ತದೆ.

ಇನ್ನು ಪ್ರತಿದಿನ ಸಾಕಷ್ಟು ನೀರು ಕುಡಿಯುವುದರಿಂದ ಒಣ ಚರ್ಮ ಒಣ ತ್ವಚೆ ಸಮಸ್ಯೆ ಇರೋದಿಲ್ಲ, ಚರ್ಮಕ್ಕೆ ಸಾಕಷ್ಟು ತೇವಾಂಶ ದೊರೆಯುತ್ತದೆ. ಚರ್ಮ ಸುಕ್ಕುಗಟ್ಟುವುದಿಲ್ಲ. ಅಷ್ಟೇ ಅಲ್ಲದೆ ಅತಿ ಹೆಚ್ಚಿನ ನೀರಿನ ಸೇವನೆಯಿಂದ ದೇಹಕ್ಕೆ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಸಾಮಾನ್ಯವಾಗಿ ಕಾಡುವಂತ ದೈಹಿಕ ಸಮಸ್ಯೆಗಳು ಸಹ ಹೆಚ್ಚಾಗಿ ಕಾಡೋದಿಲ್ಲ.

ಇನ್ನು ಈ ನೀರಿನಿಂದ ದೇಹಕ್ಕೆ ಬೇಡವಾದ ಪದಾರ್ಥಗಳನ್ನು ಹೊರಹಾಕುವಲ್ಲಿ ಹೆಚ್ಚು ಸಹಕಾರಿಯಾಗಿದೆ ಈ ಶುದ್ಧವಾದ ನೀರು. ಈ ನೀರನ್ನು ಸಾಕಷ್ಟು ಕುಡಿಯದಿದ್ದರೆ ಹೃದಯದಲ್ಲಿ ರಕ್ತವು ಹೆಪ್ಪುಗಟ್ಟಿ ಹೃದಯ ತೊಂದರೆ ಉಂಟು ಮಾಡಬಹದು ಸಾಕಷ್ಟು ನೀರು ಕುಡಿಯುವುದರಿಂದ ರಕ್ತವು ತೆಳುವಾಗುತ್ತದೆ, ಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಗಟ್ಟುತ್ತದೆ. ಇದರಿಂದ ಹೃದಯ ಸಂಬಂದಿ ರೋಗಗಳಿಂದ ದೂರ ಉಳಿಯಬಹುದು.

ಹೆಚ್ಚಾಗಿ ನೀರನ್ನು ಕುಡಿಯುವುದರಿಂದ ಕೀಲುಗಳಲ್ಲಿ ತೇವಾಂಶ ಕಾಯ್ದುಕೊಳ್ಳಲ್ಪಟ್ಟು ಮಂಡಿನೋವು ಮೊದಲಾದ ಕೀಳು ನೋವುಗಳು ನಿವಾರಣೆಯಾಗುತ್ತದೆ. ಇನ್ನು ಹೆಚ್ಚಾಗಿ ನೀರು ಕುಡಿಯುವುದರಿಂದ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳಿಂದ ದೂರ ಉಳಿಯಬಹದು. ಹೀಗೆ ಹತ್ತಾರು ಪ್ರಯೋಜನಕಾರಿ ಲಾಭಗಳನ್ನು ದೇಹಕ್ಕೆ ಶುದ್ಧನೀರಿನಿಂದ ಪಡೆಯಬಹುದಾಗಿದೆ. ನಿಮ್ಮ ಆತ್ಮೀಯಯರಿಗೂ ಕೂಡ ಇದನ್ನು ಹಂಚಿಕೊಳ್ಳಿ ಈ ನೀರಿನ ಅಗತ್ಯ ಎಷ್ಟಿದೆ ಅನ್ನೋದನ್ನ ತಿಳಿದು ಇದರ ಉಪಯೋಗವನ್ನು ಪಡೆದುಕೊಳ್ಳಲಿ.

Leave a Comment