ಪುತ್ರಿಯ ಮದುವೆಗೆ ತನ್ನ ಕ್ಷೇತ್ರದ ಮತದಾರರಿಗೆ ಡ್ಕ ಶಿವಕುಮಾತ್ ಕೊಟ್ಟ ಗಿಫ್ಟ್ ಏನು ಗೊತ್ತೇ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಪುತ್ರಿ ವಿವಾಹ ಹಿನ್ನೆಲೆ ಕನಕಪುರ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಭರ್ಜರಿ ಉಡುಗೊರೆ ನೀಡಿ, ವಧು-ವರರಿಗೆ ಆಶೀರ್ವಾದ ಮಾಡುವಂತೆ ಮನವಿ ಮಾಡಿದ್ದರು.

ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಎಲ್ಲರನ್ನು ಕರೆದು ಮದುವೆ ಮಾಡುವ ಹುಮ್ಮಸ್ಸಿನಲ್ಲಿದ್ದ ಡಿಕೆಶಿ ಕೊರೊನಾ ಕಾರಣದಿಂದ ಮದುವೆಯನ್ನು ಕುಟಂಬ ಸದಸ್ಯರು ಮತ್ತು ಬಂದು ಬಳಗಕ್ಕೆ ಸೀಮಿತಗೊಳಿಸಿದ್ದಾರೆ. ಆದರೆ, ಮದುವೆ ಸಂಬಂಧ ತಾಲೂಕಿನ ಮತದಾರರಿಗೆ ಬಟ್ಟೆಯ ಉಡುಗೊರೆ ನೀಡಿದ್ದಾರೆ. ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯಾ ಹಾಗೂ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಮೊಮ್ಮಗ, ಕಾಫಿ ಡೇ ಮಾಲೀಕರಾಗಿದ್ದ ದಿವಂಗತ ಸಿದ್ದಾರ್ಥ್​ ಹೆಗ್ಡೆ ಅವರ ಮಗ ಅಮರ್ತ್ಯ ಹೆಗ್ಡೆ ಇಬ್ಬರೂ ಫೆಬ್ರವರಿ 14 ರಂದು ಸಪ್ತಪದಿ ತುಳಿದಿದ್ದಾರೆ. ಪುತ್ರಿಯ ವಿವಾಹದ ಹಿನ್ನೆಲೆಯಲ್ಲಿ ಕನಕಪುರ ಕ್ಷೇತ್ರದ ಮತದಾರರಿಗೆ ಡಿ.ಕೆ.ಶಿವಕುಮಾರ್ ಬಟ್ಟೆ ಹಾಗೂ ಸ್ವೀಟ್ ಬಾಕ್ಸ್ ಉಡುಗೊರೆ ನೀಡಿದ್ದಾರೆ. ಜಿಲ್ಲೆಯ ಕನಕಪುರ ವಿಧಾನಸಭಾ ಕ್ಷೇತ್ರದ ಪ್ರತಿ ಗ್ರಾಮಗಳಲ್ಲಿ ಮಹಿಳಾ ಮತದಾರರಿಗೆ ರೇಷ್ಮೆ ಸೀರೆ ಹಾಗೂ ಪುರುಷ ಮತದಾರರಿಗೆ ಶರ್ಟ್ ಹಾಗೂ ಪ್ಯಾಂಟ್ ಪೀಸ್ ಜೊತೆಗೆ ಸ್ವೀಟ್ ಬಾಕ್ಸ್ ನೀಡಿದ್ದಾರೆ.

ಕನಕಪುರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರತಿ ಗ್ರಾಮ, ಪ್ರತಿ ಬೂತ್‌ ಮತದಾರರ ಪಟ್ಟಿಯಂತೆ ಮತದಾರರಾದವರಿಗೆ ಬಟ್ಟೆ ವಿತರಣೆ ಮಾಡಿದ್ದು, ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಮುಖಂಡರ ಮೂಲಕ ಮನೆ ಬಾಗಿಲಿಗೆ ತೆರಳಿ ಹಂಚಿಕೆ ಮಾಡಿದ್ದಾರೆ.
ಕನಕಪುರ ಕ್ಷೇತ್ರದ ಎಲ್ಲರನ್ನು ಕರೆದು ಮದುವೆ ಮಾಡುವ ಹುಮ್ಮಸ್ಸಿನಲ್ಲಿ ಇದ್ದ ಡಿ.ಕೆ.ಶಿವಕುಮಾರ್ ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಕುಟುಂಬಸ್ಥರು, ಸಂಬಂಧಿಕರು, ಸ್ನೇಹಿತರು ಹಾಗೂ ರಾಜಕೀಯ ಮುಖಂಡರಿಗೆ ಮಾತ್ರ ಸೀಮಿತ ಮಾಡಿ ತಮ್ಮ ಪುತ್ರಿ ವಿವಾಹ ನೆರವೇರಿಸಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಕನಕಪುರ ಕ್ಷೇತ್ರದಲ್ಲಿ ಆರತಕ್ಷತೆ ನೆರವೇರಿಸಿ ಕ್ಷೇತ್ರದ ಮತದಾರರಿಗೆ ಸಿಹಿ ಊಟ ಹಾಕಿಸಲು ಮುಂದಾಗಿದ್ದಾರೆ. ಕಳೆದ ಎರಡು ದಿನಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿ ಮನೆಗಳಿಗೂ ಉಡುಗೊರೆಯನ್ನು ನೀಡಿದ್ದಾರೆ.

ಕನಕಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2 ಲಕ್ಷದ 20 ಸಾವಿರ ಮತದಾರರಿದ್ದು ಎಲ್ಲರಿಗೂ ಉಡುಗೊರೆ ನೀಡಿ ಅಲ್ಲಿಂದಲೇ ಆಶೀರ್ವಾದ ನೀಡುವಂತೆ ಮನವಿ ಮಾಡಿದ್ದಾರೆ. ಈಗಾಗಲೇ 2.50 ಲಕ್ಷಕ್ಕೂ ಹೆಚ್ಚು ಜನರಿಗೆ ಮದುವೆ ಉಡುಗೊರೆ ತಲುಪಿದ್ದು ಸೀರೆಗೆ 3500 ಯಿಂದ 5000 ಸಾವಿರ ಎಂದು ಅಂದಾಜಿಸಲಾಗಿದೆ. ಪ್ಯಾಂಟ್, ಶರ್ಟ್ ಗೆ 3 ರಿಂದ 4.500 ಸಾವಿರ ಎಂದು ಹೇಳಲಾಗುತ್ತಿದೆ. ಪುರುಷರಿಗೆ ಡ್ ಅಂಡ್ ಟೇಲರ್ ಕಂಪನಿಯ ಪ್ಯಾಂಟ್ ಶರ್ಟ್ ಹಾಗೂ ಮಹಿಳೆಯರಿಗೆ ಬನ್ನಾರಸ್ ಕಂಪನಿಯ ದುಬಾರಿ ಸೀರೆಹಾಲನ್ನು ಉಡುಗೊರೆ ನೀಡಲಾಗಿದೆ. ಡಿಕೆ ಶಿವಕುಮಾರ್ ಮಗಳ ಮದುವೆ ನೆಪದಲ್ಲಿ ಕನಕಪುರ ವಿಧಾನಸಭಾ ಕ್ಷೇತ್ರದ ಜನತೆಗೆ ಹೊಸ ಬಟ್ಟೆಯ ಉಡುಗೊರೆ ಲಭಿಸಿದ್ದು, ಕೊರೊನಾ ಸಂದರ್ಭದಲ್ಲಿ ಮುಂದಿನ ಯುಗಾದಿ ಸೇರಿದಂತೆ ಮುಂಬರುವ ಹಬ್ಬಗಳಲ್ಲಿ ಬಟ್ಟೆ ಖರೀದಿಯ ಭಾರವನ್ನು ತಗ್ಗಿಸಿದ್ದಾರೆ. ಮತದಾರರು ಹೊಸ ಬಟ್ಟೆ ಪಡೆದು ಋುಷಿ ಪಟ್ಟಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

Leave a Comment