ನಟ ದರ್ಶನ್ ಅವರು ಮತ್ತು ನಟ ವಿನೋದ್ ಪ್ರಭಾಕರ್ ಅವರು ಇಬ್ಬರು ಕೂಡ ಕುಚುಕು ಗೆಳೆಯರು. ಪ್ರೀತಿಯಿಂದ ವಿನೋದ್ ಪ್ರಭಾಕರ್ ಅವರನ್ನು ದರ್ಶನ್ ಅವರು ಟೈಗರ್ ಎಂದೇ ಕರೆಯುತ್ತಾರೆ. ನಟ ವಿನೋದ್ ಪ್ರಭಾಕರ್ ಮತ್ತು ದರ್ಶನ್ ಅವರು ಕನ್ನಡದ ಖ್ಯಾತ ವಿಲನ್ ಗಳಾಗಿದ್ದ ಟೈಗರ್ ಪ್ರಭಾಕರ್ ಮತ್ತು ತೂಗುದೀಪ ಶ್ರೀನಿವಾಸ್ ಅವರ ಮಕ್ಕಳು. ತೂಗುದೀಪ ಶ್ರೀನಿವಾಸ್ ಮತ್ತು ಟೈಗರ್ ಪ್ರಭಾಕರ್ ಅವರು ಕೂಡ ತುಂಬಾ ಒಳ್ಳೆಯ ಸ್ನೇಹಿತರಾಗಿದ್ದರು.
ಡಿ ಬಾಸ್ ಅವರು ವಿನೋದ್ ಪ್ರಭಾಕರ್ ಅವರನ್ನು ಇಂದಿಗೂ ವಿನೋದ್ ಎಂದು ಕರೆಯುವುದಿಲ್ಲ ಟೈಗರ್ ಎಂದೇ ಕರೆಯುತ್ತಾರೆ. ಡಿ ಬಾಸ್ ಅವರು ವಿನೋದ್ ಪ್ರಭಾಕರ್ ಅವರ ಎಲ್ಲಾ ಸಿನಿಮಾಗಳಿಗೂ ಸಪೋರ್ಟ್ ಮಾಡುತ್ತಾರೆ ಮತ್ತು ಬೆಂಬಲ ನೀಡುತ್ತಾರೆ. ಇದೀಗ ವಿನೋದ್ ಪ್ರಭಾಕರ್ ರವರು ಹೊಸದಾದ ಜರ್ನಿಯನ್ನು ಶುರು ಮಾಡಲಿದ್ದಾರೆ ವಿನೋದ್ ಪ್ರಭಾಕರ್ ಅವರು ತಮ್ಮದೇ ಆದ ನಿರ್ಮಾಣ ಸಂಸ್ಥೆಯನ್ನು ಶುರು ಮಾಡಿದ್ದಾರೆ ಟೈಗರ್ ಟಾಕೀಸ್ ಎಂಬ ಪ್ರೊಡಕ್ಷನ್ ಹೌಸ್ ಅನ್ನು ವಿನೋದ್ ಪ್ರಭಾಕರ್ ಸೃಷ್ಟಿ ಮಾಡಿದ್ದಾರೆ.
ನಟ ದರ್ಶನ್ ಅವರ ಕೈಯಿಂದಲೇ ಇವನ್ನು ಪ್ರೊಡಕ್ಷನ್ ಹೌಸ್ ಅನ್ನು ಉದ್ಘಾಟನೆ ಮಾಡಿಸಿದ್ದಾರೆ. ದರ್ಶನ್ ಅವರ ಮನೆಗೆ ಹೋಗಿ ನಟ ವಿನೋದ್ ಪ್ರಭಾಕರ್ ಅವರು ಪ್ರೊಡಕ್ಷನ್ಸ್ ಸಂಸ್ಥೆಯ ಲಾಂಚ್ ಮಾಡಿದ್ದಾರೆ. ನಟ ವಿನೋದ್ ಪ್ರಭಾಕರ್ ಅವರು ದರ್ಶನ್ ಅವರ ಮನೆಗೆ ಹೋದಾಗ ದರ್ಶನ್ ಅವರು ಖುಷಿಯಿಂದ ವಿನೋದ್ ಪ್ರಭಾಕರ್ ಅವರ ಪ್ರೊಡಕ್ಷನ್ ಕಂಪೆನಿಯನ್ನು ಲಾಂಚ್ ಮಾಡಿ ಕೊಟ್ಟಿದ್ದಾರೆ. ಆದರೆ ತಮ್ಮಿಬ್ಬರ ವೈಯಕ್ತಿಕ ಜೀವನದ ಕೆಲವು ವಿಷಯಗಳನ್ನು ಕೂಡ ಹಂಚಿಕೊಂಡಿದ್ದಾರೆ.
ಡಿ ಬಾಸ್ ಅವರ ತಂದೆ ತೂಗುದೀಪ ಶ್ರೀನಿವಾಸ್ ಅವರು ತೀರಿಕೊಂಡಿದ್ದಾಗ ಟೈಗರ್ ಪ್ರಭಾಕರ್ ಅವರು ದರ್ಶನ್ ಅವರ ಫ್ಯಾಮಿಲಿಗೆ ಬೆಂಬಲವಾಗಿ ನಿಂತಿದ್ದರು ಬೆಳಿಗ್ಗೆಯಿಂದ ಸಂಜೆವರೆಗೆ ಎಲ್ಲಾ ಅಂತಿಮ ಕಾರ್ಯಗಳನ್ನು ಮುಗಿಸಿ ಕೊಡುವ ಜವಾಬ್ದಾರಿಯನ್ನು ಟೈಗರ್ ಪ್ರಭಾಕರ್ ಹೊತ್ತುಕೊಂಡಿದ್ದರು.ಟೈಗರ್ ಪ್ರಭಾಕರ್ ಅವರ ಆ ಸಹಾಯವನ್ನು ನಾನು ಎಂದಿಗೂ ಮರೆಯಲ್ಲ ಎಂದು ಡಿ ಬಾಸ್ ಹೇಳಿದರು. ವಿನೋದ್ ಪ್ರಭಾಕರ್ ರವರು ಮದುವೆಯಾಗಿತ್ತು ಜುಲೈ2 2014 ರಂದು. ಮದುವೆಯಾಗಿ 8 ವರ್ಷ ಕಳೆದರೂ ವಿನೋದ್ ಪ್ರಭಾಕರ್ ಮತ್ತು ಪತ್ನಿ ನಿಶಾಗೆ ಮಕ್ಕಳು ಆಗಿಲ್ಲ. ದರ್ಶನ್ ಅವರು ಯಾವಾಗ ಮರಿ ಟೈಗರ್ ಬರುತ್ತೆ ಬೇಗ ಒಂದು ಮಗು ಬರಲಿ ಎಂದು ವಿನೋದ್ ಪ್ರಭಾಕರ್ ಬಳಿ ತಮಾಷೆ ಮಾಡಿದ್ದಾರೆ.