ಕೂದಲು ಉದುರುವ ಸಮಸ್ಯೆಗೆ ಪರಿಹಾರ ನೀಡುವ ಜೊತೆಗೆ ಹತ್ತಾರು ಲಾಭಗಳನ್ನು ನೀಡುವ ದಾಸವಾಳ

ದಾಸವಾಳ ಹೂವಿನಲ್ಲಿ ಹತ್ತಾರು ಗುಣಗಳು ಇವೆ ಅಂತಾ ಸುಮಾರು ಜನರಿಗೆ ಗೊತ್ತಿರೋದಿಲ್ಲ. ದಾಸವಾಳದ ಹೂವು ಕೂದಲ ಪೋಷಣೆಗೆ ಒಳ್ಳೆಯದು ಅಂತ ಎಲ್ಲರಿಗೂ ಗೊತ್ತಿದೆ. ದಾಸವಾಳ ಹೂವಿನಲ್ಲಿ ಆಂಟಿಆಕ್ಸಿಡೆಂಟ್ ಅಂಶಗಳು ಅಧಿಕ ಪ್ರಮಾಣದಲ್ಲಿರುತ್ತವೆ. ದಾಳವಾಳ ಹೂವಿನಲ್ಲಿರುವ ಅಚ್ಚರಿಯ ಪ್ರಯೋಜನಗಳ ಬಗ್ಗೆ ತಿಳಿಯೋಣ.

ದಾಸವಾಳ ಹೂ ವನ್ನು ತಿನ್ನುವುದರಿಂದ ಅಥವಾ ಇದರಿಂದ ಟೀ ಮಾಡಿ ಕುಡಿದರೆ ಶೀತ, ಕೆಮ್ಮಿನಂತಹ ಸಾಮಾನ್ಯ ರೋಗಗಳು ಮಾಯವಾಗುತ್ತದೆ. ದಾಸವಳದಲ್ಲಿನ ಆಂಟಿ ಆಕ್ಸಿಡೆಂಟ್ ಗಳು ನಮ್ಮ ದೇಹದಲ್ಲಿನ ಕಲ್ಮಶಗಳನ್ನು ಹೊರಹಾಕುತ್ತವೆ.

ಮಹಿಳೆಯರಿಗೆ ಮೋನೋಪ್ಲಾಸ್ ಆಗುವ ಸಂದರ್ಭದಲ್ಲಿ ಆರ್ಟ್ ಪ್ಲ್ಯಾಸ್ಟಿಕ್ ಸಮಸ್ಯೆ ಕಂಡುಬರುತ್ತದೆ.ತುಂಬಾ ಶೇಕೆ ಅನ್ನಿಸುತ್ತೆ, ಬೆವರು ಬರುತ್ತೆ ಇಂತಹ ಸಮಸ್ಯೆಗಳಿದ್ದಾಗ ಬಿಳಿ ಅಥವಾ ಕೆಂಪು ದಾಸವಾಳವನ್ನು ತಿನ್ನುವುದು ಅಥವಾ ಟೀ ಮಾಡಿ ಕುಡಿಯುವುದರಿಂದ ಉತ್ತಮ ಪರಿಹಾರ ಕಂಡುಕೊಳ್ಳಬಹುದು.

ವಯಸ್ಸು ಹೆಚ್ಚಾಗಿ ಸೌಂದರ್ಯ ಕಡಿಮೆ ಆಗೋದನ್ನ ಯಾರು ಒಪ್ಪಲ್ಲ.ಆದರೆ ನಾವು ಸತ್ಯವನ್ನ ಒಪ್ಪಿಕೊಳ್ಳಲೇಬೇಕಾಗುತ್ತದೆ.ಯೌವ್ವನದ ಚಲುವು ಹಾಗೆ ಇರಬೇಕು ಎಂದರೆ ದಾಸವಾಳದ ಟೀ ಮಾಡಿ ಬೇಕು. ಇನ್ನು ಮೊಡವೆಗಳನ್ನು ಒಡಿಸಲು ದಿನವೂ ದುಬಾರಿ ಚಿಕಿತ್ಸೆಯ ಮೊರೆ ಹೋಗಬೇಕಾತ್ತದೆ. ಇದರ ಪರಿಹಾರಕ್ಕೆ ದಾಸವಾಳ ಹೂವಿನ ಜ್ಯೂಸ್ ಕುಡಿಯುವುದು ಸೂಕ್ತದಾಯಕ.

ದಾಸವಾಳ ಹೂ ದೇಹದಲ್ಲಿ ನೀರಿನಾಂಶ ಕಡಿಮೆ ಆಗದಂತೆ ನೋಡಿಕೊಳ್ಳತ್ತೆ. ಕೆಲವರಿಗೆ ಬೇಗನೆ ಹಸಿವು ಆಗೋದಿಲ್ಲ, ಹಸಿವು ಉಂಟಾಗದೆ ದೇಹದಲ್ಲಿ ನಿಶಕ್ತಿ ಉಂಟಾಗುತ್ತದೆ ಇಂತಹ ಸಮಸ್ಯೆಗೆ ದಾವವಾಳ ತಿನ್ನುವುದು ಉತ್ತಮವಾದ ಮಾರ್ಗ.

ಕೂದಲು ಉದುರುವಿಕೆ ಸಮಸ್ಯೆಗೆ ದಾಳವಾಳ ಉತ್ತಮ ಮನೆಮದ್ದು. ಕೊಬ್ಬರಿ ಎಣ್ಣೆ ಯಲ್ಲಿ ದಾಳವಾಳ ಹೂ ಹಾಕಿ ಕುದಿಸಬೇಕು. ಆ ಎಣ್ಣೆಯನ್ನು ಕೂದಲಿಗೆ ಹಚ್ಚಿದರೆ ಕೂದಲು ಉದುರುವುದರಿಂದ ಮುಕ್ತಿ ಪಡೆಯಬಹುದು.

ಕೋಲೆ ಸ್ಟ್ರಾಲ್ ಸಮಸ್ಯೆ ಕಡಿಮೆ ಮಾಡಿಕೊಳ್ಳಬೇಕಾದ್ರೆ ಪ್ರತಿದಿನ ಎರಡೂ ದಾಸವಾಳದ ಎಲೆಗಳನ್ನು ತಿಂದರೆ ಸಾಕು ಸಮಸ್ಯೆಗೆ ಪರಿಹಾರ ಸಿಗುತ್ತದೆ. ಅಷ್ಟೇ ಅಲ್ಲದೆ ಕ್ಯಾನ್ಸರ್ ಕಣಗಳ ವಿರುದ್ಥ ಹೋರಾಡಲು ದಾಸವಾಳ ಹೂ ಸಹಕಾರಿಯಾಗುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿಯಾಗಿ ದಾಸವಾಳ ಹೂ ಕೆಲಸ ಮಾಡುತ್ತದೆ.

ಹೃದಯ ಸಂಬಂಧಿತ ಕಾಯಿಲೆಗಳನ್ನು ನಿವಾರಿಸಲು ದಾಸವಾಳದ ಹೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಅಲ್ಲದೆ ದೇಹದಲ್ಲಿನ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಮಧುಮೇಹ ಹಾಗೂ ಕಿಡ್ನಿ ಸಮಸ್ಯೆಗಳಿಗೆ ದಾಸವಾಳದ ರಸ ಕುಡಿದರೆ ಉತ್ತಮ ಫಲಿತಾಂಶ ಕಂಡುಕೊಳ್ಳಬಹುದು.ರಕ್ತ ಹೀನತೆ ಯಿಂದ ಬಳಲುವವರಿಗೆ ದಾಳವಾಳದ ಹೂ ಒಂದು ಉತ್ತಮ ಔಷಧಿ.

ದಾಸವಾಳ ಹೂವಿನ ತೈಲದಿಂದ ಚರ್ಮದ ಹೊಳಪನ್ನು ಹೆಚ್ಚಿಸಬಹುದು. ಜೀರ್ಣ ಕ್ರಿಯೆ ಸರಾಗವಾಗಲು ದಾಸವಾಳ ತಿನ್ನುವುದು ಒಳ್ಳೆಯದು.ಹೀಗಾಗಿ ಹವಾಯಿ ದೇಶದ ಜನರು ದಾಸವಾಳದ ಎಲೆಗಳನ್ನು ತಿನ್ನುವ ಪದ್ಧತಿಯನ್ನು ರೂಢಿಸಿಕೊಂಡಿದ್ದಾರೆ.

ದಾಸವಾಳದ ಕಾಂಡದಲ್ಲಿ ಫೈಬರ್ ಅಂಶವಿದ್ದು, ಇದನ್ನು ಕಾಗದ ತಯಾರಿಕೆಗೆ ಬಳಸುತ್ತಾರೆ. ದಾಸವಾಳ ಸಸ್ಯದ ಬೇರುಗಳನ್ನು ನೀರಿನಲ್ಲಿ ಹಾಕಿ ಆವಿ ಆಗುವವರೆಗೆ ಕುದಿಸಿ, ಎಣ್ಣೆಯೊಂದಿಗೆ ಗಾಯಗಳಿಗೆ ಹಚ್ಚಿದರೆ ಗುಣವಾಗುತ್ತದೆ.

Leave a Comment