ಆರೋಗ್ಯ ಮತ್ತು ಸೌಂದರ್ಯದ ಬಗ್ಗೆ ಯಾರಿಗೆ ತಾನೆ ಕಾಳಜಿ ಇರಲ್ಲ ಅದರಲ್ಲೂ ಹೆಂಗಳೆಯರು ತಮ್ಮ ಸೌಂದರ್ಯದ ಬಗ್ಗೆ ಅತಿಯಾಗಿ ಪ್ರಾಮುಖ್ಯತೆ ನೀಡುತ್ತಾರೆ ಈಗಿನ ಕಾಲದಲ್ಲಿ ಕತ್ತಿನ ಸುತ್ತಲೂ ಕಪ್ಪಗಿರುವ ಕಲೆಗಳು ಆಗುವುದು ಸ್ತ್ರೀ-ಪುರುಷ ಇಬ್ಬರಲ್ಲೂ ಸಹ ಸರ್ವೇಸಾಮಾನ್ಯ. ಕಪ್ಪಗಿನ ಕಲೆಗಳಿಗೆ ಕಾರಣ ಏನು ಅದು ಯಾವುದರಿಂದ ಉಂಟಾಗುತ್ತದೆ ಮತ್ತು ಸುಲಭವಾಗಿ ಸರಳವಾಗಿ ಮನೆಯಲ್ಲಿಯೇ ಅದರ ನಿವಾರಣೆ ಹೇಗೆ ಅನ್ನೋದನ್ನು ನೋಡೋಣ.
ಮೊದಲಿಗೆ ಕುತ್ತಿಗೆಯ ಸುತ್ತಲೂ ಈ ಕಪ್ಪಗಿನ ಕಲೆಗಳ ಆಗೋದಕ್ಕೆ ಕಾರಣ ಏನು ಅಂದ್ರೆ ಓವರ್ ವೇಯ್ಟ್, ಹೇರೆಡಿಟಿ, ಕತ್ತಿನ ಸುತ್ತಲೂ ಸ್ಕಾರ್ಫ್ ಗಳನ್ನು ಕಟ್ಟುವುದರಿಂದ ಬೆವರಿನಿಂದ ಇನ್ಫೆಕ್ಷನ್ ಉಂಟಾಗಿ ಅದರಿಂದಲೂ ಕಪ್ಪಾಗುತ್ತದೆ. ಇನ್ನು ಹೆಣ್ಣುಮಕ್ಕಳಲ್ಲಿ ಒಡವೆಗಳನ್ನು ಧರಿಸುವುದರಿಂದ ಕುತ್ತಿಗೆಯ ಸುತ್ತಲೂ ಕೊರೆದ ಗಾಯಗಳಾಗಿ ಅದರಿಂದಲೂ ಸಹ ಕಪ್ಪಗಿನ ಕಲೆಗಳು ಉಂಟಾಗುತ್ತವೆ. ಕಪ್ಪಗಿನ ಕಲೆಗಳನ್ನು ತೊಲಗಿಸಲು ಸುಲಭವಾದ ಮನೆಮದ್ದುಗಳನ್ನು ನೋಡೋಣ.
ಮೊದಲನೆಯದಾಗಿ ಹಸಿ ಹಾಲನ್ನು ತೆಗೆದುಕೊಂಡು ಅದರಲ್ಲಿ ಹತ್ತಿಯ ಉಂಡೆಯನ್ನು ಅದ್ದಿ ಅದನ್ನು ಸ್ಕ್ರಬ್ ಮಾಡಿಕೊಳ್ಳಬೇಕು ಅನಂತರ ಅಂದು ಕಾಟನ್ ಬಟ್ಟೆಯನ್ನು ಬಿಸಿನೀರಿನಲ್ಲಿ ಅದ್ದಿಕೊಂಡು ಅದರಿಂದ ಕಪ್ಪಾದ ಕುತ್ತಿಗೆ ಸುತ್ತಲೂ ಸ್ಟೀಮ್ ಕೊಡಬೇಕು ಇದನ್ನು ಮೂರು ನಿಮಿಷದಂತೆ ಎರಡು-ಮೂರು ಸಲ ಮಾಡಬಹುದು. ನಂತರ 1 ಸ್ಪೂನ್ ಅಕ್ಕಿಹಿಟ್ಟಿಗೆ ಲಿಂಬೆ ಹಣ್ಣಿನ ರಸವನ್ನು ಹಿಂಡಿ ಅದನ್ನು ಪೇಸ್ಟ್ ಮಾಡಿಕೊಂಡು ಆರಲು ಬಿಡಬೇಕು (ನಿಂಬೆ ಹಣ್ಣು ಆಗದೆ ಇರುವವರು ರೋಸ್ ವಾಟರ್ ಬಳಸಬಹುದು) ನಂತರ ಒಂದು ಆಲೂಗಡ್ಡೆಯನ್ನು ಅರ್ಧ ಕಟ್ ಮಾಡಿಕೊಂಡು ಫೋರ್ಕ್ ಸಹಾಯದಿಂದ ಅದನ್ನು ಚುಚ್ಚಿಕೊಂಡು ರಸವನ್ನು ಹೊರಬರುವಂತೆ ಮಾಡಿ ಅದರ ಆಲೂಗಡ್ಡೆಯಿಂದ ಸ್ಕ್ರಬ್ ಮಾಡಿದ ಜಾಗಕ್ಕೆ ಮತ್ತೆ ಹತ್ತರಿಂದ ಹದಿನೈದು ನಿಮಿಷ ಮಸಾಜ್ ಮಾಡಬೇಕು. ಹೀಗೆ ಮಾಡುವುದರಿಂದ ಕುತ್ತಿಗೆಯ ಸುತ್ತಲಿನ ಕಪ್ಪಗಿನ ಕಲೆಗಳು ನಿಧಾನವಾಗಿ ಮಾಯ ಆಗುತ್ತದೆ.
ಇನ್ನೊಂದು ಮನೆ ಮದ್ದು ಏನು ಅಂದ್ರೆ, ಒಂದು ಸ್ಪೂನ್ ಕಡಲೆ ಹಿಟ್ಟು ಅರ್ಧ ಸ್ಪೂನ್ ಅರಿಶಿನ ಅರ್ಧ ಸ್ಪೂನ್ ಜೇನುತುಪ್ಪ ಹಾಗೂ ಹಸಿ ಹಾಲು ಅಥವಾ ಮೊಸರು ಬಳಸಿ ಪೇಸ್ಟ್ ಮಾಡಿಕೊಂಡು ಅದನ್ನು ಕುತ್ತಿಗೆ ಸುತ್ತಲೂ ಹಚ್ಚಿ ಸ್ಕ್ರಬ್ ಮಾಡಿ. ಬರಿ ಕುತ್ತಿಗೆ ಭಾಗಕ್ಕೆ ಅಲ್ಲದೆ ಮೊಣ ಕೈ ಕಾಲಿಗೆ ಕೂಡ ಹಚ್ಚಬಹುದು. ನಂತರ ಇದು ಒಣಗಿದ ಮೇಲೆ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದು ನಂತರ ಮಾಯ್ಶ್ಚರಾಯ್ಸರ್ ಅಥವಾ ಆಲೋವೇರಾ ಜಲ್ ಕೂಡ ಹಚ್ಚಬಹುದು. ಇದನ್ನು ಮಾಡುವುದರಿಂದಲೂ ಕೂಡ ಕುತ್ತಿಗೆಯ ಕಪ್ಪಗಿನ ಕಲೆಗಳು ಗುಣವಾಗುತ್ತದೆ.
ಇನ್ನು ಬಿಸಿಲಿನಲ್ಲಿ ಹೋಗುವಾಗ ಮುಖಕ್ಕೆ ಅಷ್ಟೆ ಅಲ್ಲದೆ ಕತ್ತಿನ ಭಾಗಕ್ಕೂ ಕೂಡ ಮಾಯ್ಶ್ಚರಾಯ್ಸರ್ ಕ್ರೀಮ್ ಗಳು ಹಚ್ಚಿ, ಆದಷ್ಟು ಕತ್ತು ಮುಚ್ಚುವ ಬಟ್ಟೆ ಧರಿಸುವುದು ಒಳಿತು , ಹೆಣ್ಣು ಮಕ್ಕಳು ಮಲಗುವಾಗ ಒಡವೆಗಳನ್ನು ತೆಗೆದಿಟ್ಟು ಮಲಗುವುದರಿಂದ ಆದಷ್ಟು ಕತ್ತಿನ ಸುತ್ತ ಕಪ್ಪಗಿನ ಕಲೆಗಳು ಆಗುವುದನ್ನು ತಡೆಯ ಬಹುದು.