ದರ್ಶನ್ ಕ್ರಾಂತಿ ಸಿನಿಮಾಕ್ಕೆ ಪಡೆದ ಸಂಭಾವನೆ ಎಷ್ಟು ಕೋಟಿ ಗೊತ್ತಾ? ಕ್ರಾಂತಿ ಸಿನಿಮಾದ ಒಟ್ಟು ಬಜೆಟ್ ಎಷ್ಟು ಇಲ್ಲಿದೆ ನೋಡಿ

ಕೋರೋನ ಸಮಯದಲ್ಲಿ ಯಾರು ಚಿತ್ರೀಕರಣ ನಡೆಸುತ್ತ ಇರಲಿಲ್ಲ ಎಲ್ಲರೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಗಮನ ಹರಿಸಿದ್ದರು ಹಾಗೂ ಕೋರೋನದ ಮಹಾಮಾರಿ ಇಂದಾಗಿ ಲಾಕ್ ಡೌನ್ ಆದ ಸಮಯದಲ್ಲಂತು ಜೀವನ ಕಷ್ಟಕರ ಆಗಿತ್ತು. ಲಾಕ್ ಟೈಂ ಮುಗಿದ ನಂತರ ಕೆಲವರು ತಮ್ಮ ಕೆಲಸದ ಕಡೆ ಮುಖ ಮಾಡುತ್ತಾರೆ .

ಸಹಸ್ರಾರು ಅಭಿಮಾನಿಗಳ ಬಳಗಳವನ್ನು ಹೊಂದಿರುವ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಗಾಂಭೀರ್ಯ ಹಾಗೂ ಗತ್ತನ್ನು ಹೊಂದಿರುವ ನಟ ಇವರು ಇಂದಿಗೂ ಇವರ ಬಗ್ಗೆ ಹೇಳಲು ಹೋದರೆ ಪದಗಳೇ ಸಾಲದು ಅಷ್ಟು ಒಳ್ಳೆಯ ಮನುಗುಣ ಹಾಗೂ ಸರಳತೆ ಹೊಂದಿದವರು ಇವರನ್ನು ಎಲ್ಲರೂ ಪ್ರೀತಿಯಿಂದ ಡಿ ಬಾಸ್ ಎಂದೇ ಕರೆಯುತ್ತಾರೆ .ಇವರು ತನ್ನ ಸ್ವತಃ ಪರಿಶ್ರಮ ಹಾಗೂ ತನ್ನ ವೈಯಕ್ತಿಕ ಸಾಧನೆಯಿಂದ ಚಿತ್ರರಂಗದಲ್ಲಿ ಮೇಲೆ ಬಂದವರು ಇವರು

ಒಂದು ಕಾಲದಲ್ಲಿ ಲೈಟ್ ಬಾಯ್ ಆಗಿ ಕೆಲಸವನ್ನು ಮಾಡಿ ಮೆಜೆಸ್ಟಿಕ್ ಸಿನಿಮಾದ ಮೂಲಕ ಪರಿಪೂರ್ಣ ನಾಯಕ ನಟನಾಗಿ ಬೆಳ್ಳಿ ತೆರೆಯ ಮೇಲೆ ಮಿಂಚಿ ಬಾಕ್ಸ್ ಆಫೀಸ್ ಅಲ್ಲಿ ಒಳ್ಳೆಯ ಹೆಸರು ಮಾಡಿದ್ದುನಂತರ ಪ್ರೇಮ್ ನಿರ್ದೇಶನದ ಕರಿಯ ಚಿತ್ರದಲ್ಲಿ ನಟಿಸಿ ಅದು ಕೂಡ 800 ದಿನಕ್ಕಿಂತ ಹೆಚ್ಚು ಪ್ರದರ್ಶನ ಕಾಣುವುದು ಆಮೇಲೆ ದರ್ಶನ್ ಮತ್ತು ರಕ್ಷಿತಾ ಅವರ ಜೋಡಿ ಅಲ್ಲಿ ಕಲಾಸಿಪಾಳ್ಯ ಮೂಡಿ ಬರುತ್ತದೆ.ಆ ಚಿತ್ರದ ನಂತರ ಅವರಿಬ್ಬರ ಜೋಡಿ ಎಲ್ಲರ ಕಣ್ಮನ ಸೆಳೆಯುತ್ತದೆ. ಅದು ಕೂಡ ಸುಮಾರು 250 ಹೆಚ್ಚು ದಿನಗಳು ಪ್ರದರ್ಶನ ಕಾಣುತ್ತದೆ. ಇವರಿಬ್ಬರ ಜೋಡಿಯಲ್ಲಿ ಹಲವಾರು ಸಿನಿಮಾಗಳು ತೆರೆ ಮೇಲೆ ಕಾಣಿಸಿಕೊಂಡಿದ್ದವು.

ತದನಂತರ ಉಪೇಂದ್ರ ಅವರ ಜೊತೆಯಲ್ಲಿ ಅನಾಥರು, ಸಾಹಸಸಿಂಹ ವಿಷ್ಣುವರ್ಧನ್ ಅವರ ಜೊತೆ ಪುತ್ರನ ಪಾತ್ರದಲ್ಲಿ ಈ ಬಂಧನ ಸಿನಿಮಾದಲ್ಲಿ ನಟಿಸಿದ್ದಾರೆ. ಅಂಬಿ ಮತ್ತು ವಿಷ್ಣು ಅವರ ಜೊತೆಗೆ ಪುತ್ರನ ಪಾತ್ರದಲ್ಲಿ ನಟಿಸಿದ ಮೊದಲ ಹಾಗೂ ಏಕೈಕ ನಟ ದರ್ಶನ್ ಎಂಬ ಹೆಗ್ಗಳಿಕೆ ಇವರದ್ದು. ಹೀಗೆಯೇ ಅಯ್ಯಾ ,ಬುಲ್ ಬುಲ್, ಮಂಡ್ಯ, ಗಜ ,ಸಾರಥಿ ,ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ನವಗ್ರಹ, ಬೃಂದಾವನ, ಕುರುಕ್ಷೇತ್ರ, ರಾಬರ್ಟ್ ಮುಂತಾದ ಸಿನಿಮಾಗಳಲ್ಲಿ ನಾಯಕನಾಗಿ ಅಭಿನಯಿಸಿ ಸೈ ಎನಿಸಿ ಕೊಳ್ಳುವುದರ ಜೊತೆಗೆ ಸಹ ನಟರ ಕಷ್ಟಗಳಿಗೆ ನೆರವು ನೀಡುತ್ತ ಜನರ ಮನದಲ್ಲಿ ಅಚ್ಚಳಿಯದ ನಾಯಕ ನಟನಾಗಿ ಬೇರೂರಿದ್ದಾರೆ.

ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ್ ಅವರ ಜೊತೆ ಸೇರಿ ತಮ್ಮದೇ ಆದ ಪ್ರೊಡಕ್ಷನ್ಸ್ ಸಂಸ್ಥೆಯನ್ನು ಅನಾವರಣಗೊಳಿಸಿದ್ದು ಈ ಸಂಸ್ಥೆಗೆ ತೂಗುದೀಪ್ ಪ್ರೊಡಕ್ಷನ್ಸ್ ಎಂದು ಹೆಸರಿಟ್ಟಿದ್ದಾರೆ. ಈ ಸಂಸ್ಥೆಯಿಂದ ಬುಲ್ ಬುಲ್, ಜೊತೆ ಜೊತೆಯಲ್ಲಿ , ಮದುವೆಯ ಮಮತೆಯ ಕರೆಯೋಲೆ, ನವಗ್ರಹ, ಬೃಂದಾವನ, ಒಗ್ಗರಣೆ, ಜಯಲಲಿತಾ, ಉಗ್ರಂ ಮುಂತಾದ ಸಿನೆಮಾಗಳು ಈ ಸಂಸ್ಥೆಯಿಂದ ವಿತರಣೆಗೊಂಡಿದ್ದಾವೆ.

ರಾಬರ್ಟ್ ಚಿತ್ರದ ಯಶಸ್ಸಿನ ಬಳಿಕ ದರ್ಶನ್ ಅವರು ಶೈಲಜಾ ನಾಗ್ ಅವರು ನಿರ್ಮಾಪಕರು ಆಗಿರುವ ಕ್ರಾಂತಿ ಸಿನಿಮಾ ಅಲ್ಲಿ ನಾಯಕ ನಟನಾಗಿ ದರ್ಶನ್ ಅವರು ನಟಿಸಲಿದ್ದಾರೆ ಹಾಗೂ ಈ ಸಿನಿಮಾ ಪಾನ್ ಇಂಡಿಯಾ ಅಲ್ಲಿ ಒಂದಾಗಿದೆ. ಇದರ ಚಿತ್ರೀಕರಣ ಮುಗಿಯುವ ಹಂತದಲ್ಲಿ ಇದ್ದು ಶೈಲಜಾ ನಾಗ್ ಅವರು ಯಜಮಾನ ಸಿನಿಮಾ ಬಳಿಕ ದರ್ಶನ್ ಅವರ ಕ್ರಾಂತಿ ಸಿನಿಮಾಕ್ಕೆ ನಿರ್ಮಾಪಕರು ಆಗಿದ್ದಾರೆ. ಇನ್ನು ಈ ಸಿನಿಮಾ ಒಂದು ಕಾದಂಬರಿ ಆಧಾರಿತ ಚಿತ್ರ ಆಗಿದ್ದು ಕಲಾವಿದರು ಸಹ ತಮ್ಮ ಪ್ರೇಕ್ಷಕರಿಗೆ ಮನೋರಂಜನೆ ನೀಡುವ ಗುರಿ ಹೊಂದಿದ್ದು, ಈ ಸಿನಿಮಾ ಅಲ್ಲಿ ಒಳ್ಳೆಯ ಶಿಕ್ಷಣ ಹಾಗೂ ಒಂದು ಮನೋರಂಜನೆ ಇದೆ ಏನು ಹೇಳಿದ್ದಾರೆ.

ಯಜಮಾನ ಸಿನಿಮಾ ಅಲ್ಲಿ ನಟಿಸಿದ್ದ ತಾರಾಗಣದ ಜೊತೆಗೆ ಕ್ರಾಂತಿ ಸಿನಿಮಾ ಚಿತ್ರೀಕರಿಸಿದ್ದು , ಬುಲ್ ಬುಲ್ ನಾಯಕಿ ರಚಿತ ರಾಮ್ ಇಲ್ಲಿ ನಾಯಕಿಯ ಪಾತ್ರವನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾರೆ. ಇನ್ನು ವಿ ಹರಿಕೃಷ್ಣ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ ರಚಿತ ರಾಮ್, ಸುಮಲತಾ ಅಂಬರೀಶ್, ಯಶಸ್ಸು ,ಸೂರ್ಯ ,ರಂಗಾಯಣ ರಘು, ಚಿಕ್ಕಣ್ಣ ಹಾಗೂ ಸಾಧು ಕೋಕಿಲ ಸೇರಿದಂತೆ ಹಲವಾರು ತಾರಾಗಣ ಈ ಚಿತ್ರದಲ್ಲಿ ತಮ್ಮ ಅಮೋಘ ಅಭಿನಯ ಮಾಡಿದ್ದಾರೆ.

ಕ್ರಾಂತಿ ಸಿನಿಮಾದ ಒಟ್ಟು ಬಜೆಟ್ 75 ಕೋಟಿ ಆಗಿದ್ದು ಶೈಲಜಾ ನಾಗ್ ಮತ್ತು ಬಿ ಸುರೇಶ್ ಅವರು ದರ್ಶನ ಅವರಿಗೆ ಅಂತಾನೆ ಇಷ್ಟು ದೊಡ್ಡ ಬಜೆಟ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಹಿಂದೆ ರಾಬರ್ಟ್ ಸಿನಿಮಾ ಅನ್ನು ಉಮಾಪತಿ ನಿರ್ಮಾಪಕ ಆಗಿದ್ದು ಸುಮಾರು 50 ಕೋಟಿ ಬಜೆಟ್ ಅಲ್ಲಿ ನಿರ್ಮಾಣ ಆಗಿತ್ತು ಹಾಗೂ ದರ್ಶನ್ ಅವರು ಈ ಸಿನಿಮಾಗಾಗಿ ಪಡೆದ ಸಂಭಾವನೆ 10 ಕೋಟಿ ಸ್ಯಾಂಡಲ್ ವುಡ್ ಅಲ್ಲಿ ಯಶ್ ಅವರು ಅಧಿಕ ಸಂಭಾವನೆ ಪಡೆದ ನಟ ಇವರು ಕೆಜಎಫ್ 2 ಸಿನಿಮಾ ಬರೋಬ್ಬರಿ 25 ಕೋಟಿ ಸಂಭಾವನೆ ಪಡೆದಿದ್ದು ಕನ್ನಡ ಚಿತ್ರರಂಗ ಅಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಾಯಕ ನಟ ಅಲ್ಲಿ ಮೊದಲಿಗರು ಆಗಿದ್ದಾರೆ. ಇನ್ನು ದರ್ಶನ್ ಅವರು ಕ್ರಾಂತಿ ಸಿನಿಮಾಕ್ಕೆ 20 ಕೋಟಿ ಸಂಭಾವನೆ ಪಡೆದಿದ್ದು ಎರಡನೇ ಸ್ಥಾನವನ್ನು ಅಲಂಕರಿಸಿದ ನಾಯಕ ನಟ ಇವರದ್ದು.

ಕಳೆದ ಒಂದು ವರೆ ವರುಷದಿಂದ ದರ್ಶನ್ ಅವರ ಸಿನಿಮಾ ಬಗ್ಗೆ ಯಾವುದೇ ಮಾದ್ಯಮಗಳಲ್ಲಿ ಮಾಹಿತಿ ಹಾಗೂ ಪ್ರಚಾರ ಇಲ್ಲ. ಇದರ ಬಗ್ಗೆ ಸ್ವತಃ ಟ್ವೀಟ್ ಮೂಲಕ ಅಭಿಮಾನಿಗಳು ನನ್ನ ಬಗ್ಗೆ ತುಂಬಾ ಪ್ರೀತಿಯಿಂದ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ್ದಾರೆ ಅದು ಯಾವುದೇ ಮಾದ್ಯಮ ಇಲ್ಲದೇನೆ ಹಾಗಾಗಿ ನನಗೆ ಯಾವುದೇ ಮಾದ್ಯಮಗಳ ಅವಶ್ಯಕತೆ ಇಲ್ಲ . ಅಭಿಮಾನಿಗಳೇ ನನ್ನ ಸಿನಿಮ ಪ್ರಮೋಷನ್ ಮಾಡುತ್ತಾರೆ ಹಾಗೂ ಅಭಿಮಾನಿಗಳೇ ನನ್ನ ನಿಜವಾದ ದೇವರು ಎಂದು ಕಡಕ್ ಆಗಿ ಹೇಳಿದ್ದಾರೆ .

ಎಲ್ಲವೂ ಸುಸೂತ್ರವಾಗಿ ನೆರವೇರಿದೆ ಆದಲ್ಲಿ ಇದೇ October ತಿಂಗಳಿನಲ್ಲಿ ಕ್ರಾಂತಿ ಸಿನಿಮಾ ಬಿಡುಗಡೆ ಆಗುವುದರಲ್ಲಿ ಯಾವುದೇ ಮಾತಿಲ್ಲ ಹಾಗೂ ದರ್ಶನ್ ಅಭಿಮಾನಿಗಳು ಕೂಡ ಅವರ ಕ್ರಾಂತಿ ಸಿನಿಮಾಕ್ಕೆ ಕೈಜೋಡಿಸಿದ್ದು ಎಲ್ಲಾ ಕಡೆ ಕ್ರಾಂತಿ ಸಿನಿಮ ಪೋಸ್ಟರ್ ಗಳನ್ನು ಇಟ್ಟು ಪೂಜೆ ಸಲ್ಲಿಸಿ ತಮ್ಮ ವೈಯಕ್ತಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ನಮ್ಮ ಬಾಸ್ ಸಿನಿಮಾಕ್ಕೆ ಯಾವುದೇ ಮಾದ್ಯಮದ ಪ್ರಚಾರ ಅಗತ್ಯ ಇಲ್ಲ ನಾವೇ ಪ್ರಚಾರ ಮಾಡಿ ಸಿನಿಮಾಲನ್ನು ಉತ್ತುಂಗಕ್ಕೆ ಏರಿಸಿ ಶತದಿನ ಆಚರಿಸಲು ನಾವು ಒಗ್ಗಟ್ಟಾಗಿ ಧೈರ್ಯದಿಂದ ಇರುತ್ತೇವೆ ಎಂದು ಹೇಳಿಕೊಂಡಿದ್ದಾರೆ .ಏನೇ ಆಗಲಿ ದರ್ಶನ್ ಅವರ ಸಿನಿಮ ಬಿಡುಗಡೆ ಆಗಿ ಒಳ್ಳೆಯ ಯಶಸ್ಸು ಹಾಗೂ ಕೀರ್ತಿ ಪತಾಕೆಯನ್ನು ಹಾರಿಸಲಿ ಎಂದು ಹಾರೈಸೋಣ.

Leave a Comment