ಕರಿಬೇವು ಎಲ್ಲರ ಮನೇಲೂ ಅಡುಗೆಗೆ ಬಳಸಿಯೇ ಬಳಸುತ್ತೇವೆ. ಕರಿಬೇವು ಅಡಗೆಯಲ್ಲಿ ಬಳಸಿದಾಗ ಬರೋ ರುಚಿನೆ ಬೇರೆ ಅದರ ಘಮ ಪರಿಮಳ ಬೇರೆ ರೀತಿಯ ರುಚಿ ನೀಡುತ್ತೆ. ಹಾಗಾಗಿ ಕರಿಬೇವು ಯಾರಿಗೂ ನು ಅಪರಿಚಿತ ಏನು ಅಲ್ಲ ಎಲ್ಲರೂ ಇದರ ಬಗ್ಗೆ ತಿಳಿದೇ ಇರುತ್ತಾರೆ. ಈ ಕರಿಬೇವು ಬರೇ ಅಡುಗೆಮನೆಗೆ ಸೀಮಿತವಾಗಿರದೆ ಇದರಲ್ಲಿ ಕೆಲವು ಆರೋಗ್ಯಕರ ಔಷಧೀಯ ಗುಣಗಳು ಸಹ ಇವೆ. ಹಾಗಾದ್ರೆ ಈ ಕರಿಬೇವಿನಿಂದ ನಮ್ಮ ಆರೋಗ್ಯಕ್ಕೆ ಏನು ಲಾಭ ಆಗುತ್ತೆ ಇದನ್ನು ಬಳಸುವುದು ಹೇಗೆ ಅದರಿಂದ ಆಗುವ ಪ್ರಯೋಜನಗಳು ಏನು ಇದರ ಬಗ್ಗೆ ತಿಳಿದುಕೊಳ್ಳೋಣ.
ಹತ್ತರಿಂದ ಹದಿನೈದು ಕರಿಬೇವಿನ ಎಲೆಗಳು ಮತ್ತು ನಮ್ಮ ಮೂರು ಬೆರಳಲ್ಲಿ ಬರುವಷ್ಟು ಜೀರಿಗೆ ಇವೆರಡನ್ನು ಬೆಳಗ್ಗೆ ಎದ್ದ ತಕ್ಷಣ ತಿನ್ನುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ. ದೃಷ್ಟಿ ದೋಷ ನಿವಾರಣೆ ಆಗುತ್ತದೆ. ದೇಹದಲ್ಲಿ ನಿಶ್ಯಕ್ತಿ ಉಂಟಾದಾಗ ರೋಗನಿರೋಧಕ ಶಕ್ತಿ ಕಡಿಮೆಯಾದಾಗ ಸಂಬಂಧಿ ಕಾಯಿಲೆಗಳು ಬಂದಾಗ ಆ ಕಾಯಿಲೆಗಳನ್ನು ಇದು ದೂರಮಾಡುತ್ತದೆ.
ಸಕ್ಕರೆ ಕಾಯಿಲೆಗಳು ಬಂದಾಗ ಮತ್ತು ಬರುವ ಪೂರ್ವದಲ್ಲಿ ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಮೂಳೆಗಳ ಸವೆತ ವನ್ನು ಸಹ ತಡೆದು ದೇಹಕ್ಕೆ ಬೇಕಾದಂತಹ ಕ್ಯಾಲ್ಸಿಯಂ ಅನ್ನು ಒದಗಿಸುತ್ತದೆ. ನಮ್ಮ ಮನೆಯಲ್ಲೇ ಸುಲಭವಾಗಿ ದೊರಕುವ ಪದಾರ್ಥಗಳನ್ನು ಬಳಸಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳೋಣ