ತಲೆಹೊಟ್ಟು ತಲೆತುರಿಕೆಯಿಂದ ಕೂಡಲೇ ಪರಾಗಬೇಕೆ? ಮೊಸರು ಉಪಯೋಗಕಾರಿ

ಮೊಸರು ಹತ್ತಾರು ಲಾಭಗಳನ್ನು ಹೊಂದಿರುವಂತ ಆಹಾರವಾಗಿದೆ ಮೊಸರಿನಲ್ಲಿ ಕ್ಯಾಲ್ಶಿಯಂ, ಪ್ರೊಟೀನ್, ಪೊಟ್ಯಾಶಿಯಂ ಹಾಗೂ ವಿಟಮಿನ್ ಬಿ ಮೊಸರಿನಲ್ಲಿ ಸಮೃದ್ಧವಾಗಿದೆ. ಈ ಮೊಸರು ಯಾವೆಲ್ಲ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಿ ಕೊಡುತ್ತದೆ ಅನ್ನೋದನ್ನ ಈ ಮೂಲಕ ತಿಳಿಯೋಣ. ತಲೆಹೊಟ್ಟು ತಲೆತುರಿಕೆಯಿಂದ ಕೊಡಲೇ ಪರಾಗಬೇಕೆ? ಹಾಗಾದರೆ ಸದಾ ಕೂದಲ ಬುಡಕ್ಕೆ ಮಸಾಜ್ ಮಾಡಿ ೨೦ ನಿಮಿಷಗಳ ಬಳಿಕ ತೊಳಿಯಿರಿ.

ಇನ್ನು ಚರ್ಮಕ್ಕೆ ಸಂಬಂಧಿಸಿದ ಯಾವುದೇ ಕಿರಿಕಿರಿಗಳಿಗೆ ದಪ್ಪ ಮೊಸರಿನ ಲೇಪ ಒಳ್ಳೆಯ ಮನೆಮದ್ದು. ಇನ್ನು ಮೊಟ್ಟೆಯ ಬಿಳಿಭಾಗ ಮುಲ್ತಾನಿ ಮಿಟ್ಟಿ ಹಾಗೂ ಜೇನಿನೊಂದಿಗೆ ಮೊಸರನ್ನು ಚನ್ನಾಗಿ ಕಲಸಿ ಮುಖ ಕಟ್ಟುಗಳಿಗೆ ಹಚ್ಚಿ ತ್ವಚೆಯನ್ನು ಸ್ವಚ್ಛಗೊಳಿಸುವುದರೊಂದಿಗೆ ಬೇಕಾದ ಪೋಷಕಾಂಶಗಳನ್ನು ಪೂರೈಸಿ ಚರ್ಮದ ಅದ್ರರ್ತೆಯನ್ನುಹೆಚ್ಚಿಸುವ ಹಾಗೂ ಚರ್ಮವನ್ನು ಬಿಗಿಗೊಳಿಸುವ ಕೆಲಸವನ್ನು ಇದು ಮಾಡುತ್ತದೆ.

ಇನ್ನು ಮೊಸರಿನಿಂದ ದೇಹಕ್ಕೆ ಎಷ್ಟೊಂದು ಲಾಭವಿದೆ ಅನ್ನೋದನ್ನ ನೋಡುವುದಾದರೆ, ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬಾಯಿಹುಣ್ಣು ಬಾಯಿಯೊಳಗಿನ ಗಯಾ, ಬಾಯಿ ಉರಿಗಳನ್ನು ಶಮನಗೊಳಿಸುತ್ತದೆ. ಬ್ಯಾಕ್ಟರೀಯಾ ನಿರೋಧಕ ಹಾಗೂ ಕ್ಯಾನ್ಸರ್ ನಿರೋಧಕವಾಗಿ ಕೆಲಸ ಮಾಡುತ್ತದೆ.

ಶೀತ ಹಾಗೂ ಶ್ವಾಸಕೋಶಗಳ ಸೋಂಕನ್ನು ಕಡಿಮೆ ಮಾಡುತ್ತದೆ, ಅಷ್ಟೇ ಅಲ್ಲದೆ ಅತಿಸಾರ ಹಾಗೂ ಮಲಬದ್ದತೆಯನ್ನು ನಿವಾರಿಸುತ್ತದೆ, ಮೊಸರು ಸೇವನೆ ಯಿಂದ ಆಯಸ್ಸು ವೃದ್ಧಿಯಾಗುವುದು ಇನ್ನು ಹಾಲಿನ ಉತ್ಪನ್ನಗಳಲ್ಲಿ ಕೊಬ್ಬಿನಂಶ ಕಡಿಮೆ ಪ್ರಮಾಣದಲ್ಲಿರುತ್ತದೆ. ಜೀರ್ಣಕ್ರಿಯೆಯ ಏರುಪೇರುಗಳನ್ನು ನಿವಾರಿಸುತ್ತದೆ, ಅಜೀರ್ಣತೆ ಅನಿಯಮಿತ ಮಲ ವಿಸರ್ಜನೆಯಂಥ ಸಮಸ್ಯೆಗಳಿದ್ದರೆ ದಿನಕೊಂದು ಕಪ್ ಮೊಸರು ತಿನ್ನಿ. ಹೀಗೆ ಹತ್ತಾರು ಲಾಭಗಳನ್ನು ಮೊಸರಿನಿಂದ ಪಡೆದುಕೊಳ್ಳಬಹುದಾಗಿದೆ.

Leave a Comment