ಮೊಸರಿನಲ್ಲಿ ಸ್ವಲ್ಪ ಜೀರಿಗೆ ಬೆರಸಿ ತಿನ್ನುವುದರಿಂದ ಆಗುವ ಉಪಯೋಗ

ಸಾಮಾನ್ಯವಾಗಿ ಮೊಸರು ಸೇವನೆ ಅಭ್ಯಾಸ ಕೆಲವರಲ್ಲಿ ಇದ್ದೆ ಇರುತ್ತದೆ ಆದ್ರೆ, ಬಹಳಷ್ಟು ಜನ ಮೊಸರು ಸೇವನೆ ಮಾಡುತ್ತಾರೆ ಆದ್ರೆ ಅದರಿಂದ ಎಷ್ಟೆಲ್ಲ ಆರೋಗ್ಯಕಾರಿ ಲಾಭಗಳನ್ನು ಪಡೆದುಕೊಳ್ಳಬಹುದು ಅನ್ನೋದನ್ನ ತಿಳಿದುಕೊಂಡಿರೋದಿಲ್ಲ. ಈ ಮೂಲಕ ಮೊಸರು ಹೇಗೆ ಉಪಯೋಗಕಾರಿ ಅನ್ನೋದನ್ನ ತಿಳಿಯೋಣ ನಿಮಗೆ ಈ ಮಾಹಿತಿ ಇಷ್ಟವಾಗಿದ್ದರೆ ನಿಮ್ಮ ಆತ್ಮೀಯ ಸ್ನೇಹಿತರಿಗೂ ಮೊಸರಿನ ಉಪಯೋಗಗಳನ್ನು ಹಂಚಿಕೊಳ್ಳಿ.

ಮೊದಲನೆಯದಾಗಿ ಮಲಬದ್ಧತೆ ಹಾಗೂ ಅಜೀರ್ಣತೆ ನಿವಾರಿಸಲು ಮೊಸರು ಸಹಕಾರಿ ಹೇಗೆ ಬಳಸಬೇಕು ಅನ್ನೋದಾದರೆ, ಒಂದು ಕಪ್ಪು ಮೊಸರು ಜೊತೆ ಸ್ವಲ್ಪ ಕಪ್ಪು ಮೆಣಸಿನ ಪುಡಿ ಅನ್ನು ಬೆರೆಸಿ ತಿನ್ನಬೇಕು. ಹೀಗೆ ತಿನ್ನುವುದರಿಂದ ದೇಹದಲ್ಲಿ ಅಜೀರ್ಣತೆ ಸಮಸ್ಯೆ ಕಾಡೋದಿಲ್ಲ.

ಇನ್ನು ಮೊಸರನ್ನು ಈ ರೀತಿಯಾಗಿ ತಿಂದಿದ್ದೆಯಾದಲ್ಲಿ ದೇಹಕ್ಕೆ ಎನರ್ಜಿಯನ್ನು ಪಡೆಯುವುದರ ಜೊತೆಗೆ ಮಾಂಸ ಖಂಡಗಳ ಶಕ್ತಿಗೆ ಮೊಸರು ಪೂರಕವಾಗಿ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲದೆ ಮೊಸರಿನಲ್ಲಿ ಸ್ವಲ್ಪ ಓಟ್ಸ್ ಬೆರಸಿ ತಿನ್ನುವುದರಿಂದ ದೇಹದಕ್ಕೆ ಸ್ನಾಯುಗಳಿಗೆ ಶಕ್ತಿ ವೃದ್ಧಿಯಾಗುವುದು.

ಹಣ್ಣಗಳು ದೇಹದ ಅರೋಗ್ಯ ವೃದ್ಧಿಸುತ್ತವೆ ಹಾಗಾಗಿ ಶುದ್ಧವಾದ ಹಣ್ಣಗಳನ್ನು ಕಟ್ ಮಾಡಿಕೊಂಡು ಮೊಸರಿನಲ್ಲಿ ಹಾಕಿಕೊಂಡು ತಿನ್ನುವುದರಿಂದ ದೇಹಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಯಾವುದೇ ರೀತಿಯ ರೋಗಗಳು ಬೇಗನೆ ಅಂಟೋದಿಲ್ಲ. ಇನ್ನು ಮೊಸರಿನಲ್ಲಿ ಸ್ವಲ್ಪ ಮಟ್ಟಿಗೆ ಅರಿಶಿನ ಪುಡಿಯನ್ನು ಹಾಕಿಕೊಂಡು ಅದಕ್ಕೆ ಇನ್ನು ಸ್ವಲ್ಪ ಶುಂಠಿ ಬೆರಸಿ ಸೇವನೆ ಮಾಡುವುದರಿಂದ ದೇಹಕ್ಕೆ ಪೊಲಿಡ್ ಅಸಿಡಿ ಅಂಶ ದೊರೆಯುತ್ತದೆ ಇದರಿಂದ ಚಿಕ್ಕ ಮಕ್ಕಳಿಗೆ ಹಾಗೂ ಗರ್ಭಿಣಿ ಮಹಿಳೆಯರಿಗೆ ಉತ್ತಮವದ ಅರೋಗ್ಯ ವೃದ್ಧಿಯಾಗುವುದು.

ವಿಟಮಿನ್ ಸಿ ಅಂಶವನ್ನು ಹೊಂದಿರುವಂತ ಅರೇಂಜ್, ಇದರ ಜ್ಯುಸ್ ಅನ್ನು ಮೊಸರಿನಲ್ಲಿ ಹಾಕಿಕೊಂಡು ಸೇವನೆ ಮಾಡುವುದರಿಂದ ದೇಹಕ್ಕೆ ವಿಟಮಿನ್ ಅಂಶಗಳು ಹೇರಳವಾಗಿ ವೃದ್ಧಿಯಾಗುತ್ತದೆ ಅಲ್ಲದೆ ವೃದ್ಯಾಪ್ಯ ಸಮಸ್ಯೆ ದೂರವಾಗುತ್ತದೆ. ಇನ್ನು ಸ್ವಲ್ಪ ಜೀರಿಗೆ ಪುಡಿಯನ್ನು ಮೊಸರಿನಲ್ಲಿ ಹಾಕಿಕೊಂಡು ಸೇವನೆ ಮಾಡುವುದರಿಂದ ಬೇಗನೆ ದೇಹದ ತೂಕವನ್ನು ಇಳಿಸಿಕೊಳ್ಳಬಹುದು ಎಂಬುದಾಗಿ ಹೇಳಲಾಗುತ್ತದೆ.

ಇನ್ನು ಅಜೀರ್ಣತೆಗೆ ಸಂಬಂಧಿಸಿದ ಸಮಸ್ಯೆ ನಿಯಂತ್ರಣಕ್ಕೆ ಸ್ವಲ್ಪ ಕಪ್ಪು ಉಪ್ಪನ್ನು ಅರೆದುಕೊಂಡು ಅದು ನುಣ್ಣಗೆ ಆದ ನಂತರ ಒಂದು ಕಪ್ ಮೊಸರಿನಲ್ಲಿ ಬೆರಸಿಕೊಂಡು ಕುಡಿಯಬೇಕು ಇದರಿಂದ ಜೀರ್ಣ ಸಂಬಂದಿ ಸಮಸ್ಯೆಗಳು ದೂರವಾಗುತ್ತದೆ. ಅದರಲ್ಲೂ ಮುಖ್ಯವಾಗಿ ಗ್ಯಾಸ್ಟ್ರಿಕ್ ಅಸಿಡಿಟಿ ನಿವಾರಣೆಯಾಗುವುದು. ಹೀಗೆ ಹತ್ತಾರು ಲಾಭಗಳನ್ನು ಮೊಸರಿನಿಂದ ಪಡೆಯಬಹುದಾಗಿದೆ.

Leave a Comment