ಬಿಳಿ ಎಕ್ಕದ ಗಿಡದಿಂದ ಸಕಲ ಸಮಸ್ಯೆ ಪರಿಹರಿಸೋ ಶಕ್ತಿ ಇದೆ. ಪೂಜಾ ಕೆಲಸ ಕಾರ್ಯಗಳಲ್ಲಿ ಬಿಳಿ ಎಕ್ಕದ ಗಿಡದ ಹೂವನ್ನ ಬಳಸಲಾಗುತ್ತದೆ. ಬಿಳಿ ಎಕ್ಕದ ಗಿಡವು ಭಾರತದ ಎಲ್ಲಾ ಪ್ರದೇಶಗಳಲ್ಲಿ ದೊರೆಯುತ್ತದೆ. ಆದರೆ ಪುರಾತನವಾದ ಗಿಡವು ಸಿಗುವುದು ತೀರಾ ವಿರಳ. ಗುಲಾಬಿ, ನೀಲಿ ಬಣ್ಣದ ಎಕ್ಕದ ಗಿಡ ಎಲ್ಲಾ ಕಡೆ ಸಿಗುತ್ತದೆ ಆದರೆ ಬಿಳಿ ಬಣ್ಣದ ಎಕ್ಕದ ಗಿಡ ಸಿಗುವುದು ಕಡಿಮೆ. ಇದನ್ನ ಶ್ವೇತರ್ಕವೆಂದೂ ಕರೆಯಲಾಗುತ್ತದೆ. ಈ ಗಿಡವು 6 ರಿಂದ 7 ಅಡಿ ಎತ್ತರವಾಗಿ , 4 ರಿಂದ 5 ಅಡಿ ವಿಸ್ತಾರವನ್ನ ಹೊಂದಿರುತ್ತದೆ.
ಕನಿಷ್ಟವೆಂದ್ರೂ 27 ವರ್ಷಗಳಷ್ಟು ಹಳೆಯದಾದ ಎಕ್ಕ ಗಿಡಕ್ಕೆ ತಾಂತ್ರಿಕ ಪ್ರಯೋಗದಲ್ಲಿ ಅತ್ಯಂತ ಮಹತ್ವವಿರುವುದು. ಭಾರತೀಯ ಸನಾತನ ಕುಟುಂಬಗಳು ಮನೆಯ ಮುಂದೆ ಎಕ್ಕದ ಗಿಡವನ್ನು ಬೆಳಸಿ ನಿತ್ಯ ಪೂಜೆ ಮಾಡುತ್ತಾರೆ. ಈ ಗಿಡದ ಎಲೆ, ಕಾಂಡ, ಹೂ ಎಲ್ಲವೂ ಔಷಧೀಯ ಗುಣ ಹೊಂದಿರುತ್ತವೆ. ಎಕ್ಕದ ಗಿಡದ ಬಗ್ಗೆ ಋಷಿಮುನಿಗಳು ಸಾಕಷ್ಟು ಮಾಹಿತಿಯನ್ನ ತಿಳಿಸಿರುತ್ತಾರೆ. ಎಕ್ಕದ ಗಿಡವು 64 ಔಷಧೀಯ ಗುಣಗಳನ್ನು ಹೊಂದಿದೆ ಎಂಬ ಬಗ್ಗೆ ಹಲವಾರು ಉಲ್ಲೇಖಗಳಿವೆ.
ಬಿಳಿ ಎಕ್ಕದ ಗಿಡದಿಂದ ಪ್ರಮುಖವಾಗಿ ಆಂಜನೇಯ, ಗಣಪತಿ,ಯಂತಹ ದೇವರುಗಳನ್ನು ಪೂಜೆಮಾಡಲಾಗುತ್ತದೆ. ಎಕ್ಕದ ಗಿಡದಿಂದ ಹಾರಮಾಡಿ ಶನಿದೇವನಿಗೆ ಅರ್ಪಿಸಿದರೆ ನಿಮ್ಮ ಶನಿಕಾಟ ನಿವಾರಣೆ ಯಾಗುತ್ತದೆ. ಮನೆಯ ಮುಂಭಾಗ ಹಾಗೂ ದೇವರ ಮನೆಯ ಮುಂಭಾಗ ಎಕ್ಕದ ಗಿಡದ ತೋರಣ ಕಟ್ಟಿದರೆ ನಿಮಗೆ ಒಳ್ಳೆಯದಾಗುತ್ತದೆ.
ಎಕ್ಕದ ಗಿಡವನ್ನು ನಿಮ್ಮ ಮನೆಯ ಬಲಭಾಗದಲ್ಲಿ ಬೆಳೆಸಿದರೆ ನಿಮ್ಮ ಮನೆಯ ವಾಸ್ತು ದೋಷ ನಿವಾರಣೆಯಾಗುತ್ತದೆ. ಈ ಗಿಡದ ಶಕ್ತಿಯಿಂದ ಯಾವುದೇ ಮಾಟ ಮಂತ್ರ ನಿಮಗೆ ತಟ್ಟುವುದಿಲ್ಲ. ಶಿವನಿಗೆ ಎಕ್ಕದ ಹೂ ಅತ್ಯಂತ ಪ್ರಿಯವಾಗಿದ್ದು, ಪಾರ್ವತಿಯು ಎಕ್ಕದ ಹೂ ನೀಡಿ ಶಿವನನ್ನು ವರಿಸಿದಳು ಎಂಬ ಬಗ್ಗೆ ಪುರಾಣಗಳಲ್ಲಿ ಉಲ್ಲೇಖಗಳಿವೆ.
ಪ್ರತಿದಿನ ನೀವೂ ಗಣಪತಿಯನ್ನು ಎಕ್ಕದ ಹೂವಿನಿಂದ ಪೂಜೆಸಿದರೆ ವಿಘ್ನೇಶನ ಕೃಪೆಗೆ ಪಾತ್ರರಾಗುತ್ತೀರ. ನಿಮ್ಮ ಮನೆಯಲ್ಲಿ ಸುಖ, ಶಾಂತಿ ನೆಲೆಸಲು ಹಾಗೂ ಮಕ್ಕಳ ವಿದ್ಯಾಭ್ಯಾಸ ಉತ್ತಮವಾಗಿರಲು ಪ್ರತಿದಿನ ಭಕ್ತಿಯಿಂದ ಎಕ್ಕದ ಗಿಡದಿಂದ ಪೂಜೆಮಾಡಿ. ನಿಮ್ಮ ಎಲ್ಲಾ ಕಷ್ಟಗಳನ್ನು ಪರಿಹರಿಸಿಕೊಳ್ಳಿ