ಶೀತ ಹಾಗೂ ನೆಗಡಿಗೆ ಕಾರಣವೇನು? ಇದು ಹೇಗೆ ಹರಡುತ್ತೆ ಗೊತ್ತೇ

ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಬರಿ ಈ ಶೀತ ನೆಗಡಿ ಸಮಸ್ಯೆ ಅನ್ನೋದು ಕಾಡುತ್ತಲೇ ಇರುತ್ತದೆ, ಬಹಳಷ್ಟು ಜನಕ್ಕೆ ಇದರ ಬಗ್ಗೆ ಗೊತ್ತಿಲ್ಲ ಶೀತ ನೆಗಡಿ ಏನಕ್ಕೆ ಆಗುತ್ತದೆ ಹಾಗೂ ಈ ಶೀತ ಹೇಗೆ ಹರಡುತ್ತದೆ ಎಂಬುದಾಗಿ. ಇದರ ಬಗ್ಗೆ ಚಿಕ್ಕದಾಗಿ ತಿಳಿಯುವ ಪ್ರಯತ್ನ ಮಾಡೋಣ. ನಿಮಗೆ ಈ ಆರೋಗ್ಯಕರ ವಿಚಾರ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ.

ಕೆಲವೊಮ್ಮೆ ವಾತಾವರಣದಲ್ಲಿ ಉಂಟಾಗುವಂತ ದಿಡೀರ್ ವ್ಯತ್ಯಾಸದಿಂದ ಶೀತ ಉಂಟಾಗಬಹುದು ಅಥವಾ ಮಳೆಯಲ್ಲಿ ನೆನೆಯುವುದರಿಂದ, ಶೀತಕಾಲದಲ್ಲಿ ಕೆಲ ಶೀತ ಪದಾರ್ಥಗಳನ್ನು ತಿನ್ನುವುದರಿಂದಲೂ ಶೀತ ಹಾಗೂ ನೆಗಡಿ ಉಂಟಾಗಬಹುದು, ಇನ್ನು ಶೀತಕ್ಕೆ ಮುಖ್ಯ ಕಾರಣವೇನು ಅಂದರೆ ಕೀಟಾಣುಗಳು ಹಾಗೂ ವೈರಸ್ ಗಳು. ಇವುಗಳು ಶೀತಕಾಲದಲ್ಲಿ ಅಂದರೆ ಚಳಿಗಾಲದಲ್ಲಿ ಹಾಗೂ ಮಳೆಗಾಲದಲ್ಲಿ ಅತಿ ಹೆಚ್ಚಾಗುತ್ತವೆ, ಆದ್ದರಿಂದಲೇ ಈ ದಿನಗಲ್ಲಿ ಬಹಳಷ್ಟು ಜನ ಶೀತ ನೆಗಡಿ ಸಮಸ್ಯೆ ಅನುಭವಿಸುತ್ತಾರೆ. ಆದ್ದರಿಂದ ಇದರಿಂದ ದೂರ ಉಳಿಯಲು ಮನೆಯಲ್ಲಿಯೇ ಈ ವಿಧಾನವನ್ನು ಮಾಡುವುದು ಉತ್ತಮ. ಅದೇನು ಅಂದರೆ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಹಾಗೂ ಚನ್ನಾಗಿ ಕುದಿಸಿ ಆರಿಸಿದ ನೀರನ್ನೇ ಕುಡಿಯಬೇಕು.

ಶೀತ ನೆಗಡಿ ಹೇಗೆ ಉಂಟಾಗುತ್ತದೆ? ಅನ್ನೋದನ್ನ ತಿಳಿಯುವುದಾದರೆ ಮೂಗು ಹಾಗೂ ಗಂಟಲಿನ ಒಳಪದರಗಳನ್ನು ವೈರಸ್ ಗಳು ಆಕ್ರಮಿಸಿದಾಗ ಶೀತ ಉಂಟಾಗುತ್ತದೆ. ವೈರಸ್ ನ ಅಕ್ರಮಣಕ್ಕೊಳಗಾದ ಮೂಗು ಹಾಗೂ ಗಂಟಲಿನ ಒಳಪದರಗಳು ಹೆಚ್ಚಾಗಿ ಶ್ಲೇಷ್ಮವನ್ನು ಉತ್ಪಾದಿಸುತ್ತವೆ, ಇದರಿಂದ ನೆಗಡಿ ಮತ್ತು ಸೀನುಗಳು ಕಾಣಿಸಿಕೊಳ್ಳುತ್ತವೆ. ೨೦೦ ಕ್ಕೂ ಹೆಚ್ಚು ವೈರಸ್ ಗಳು ಶೀತ ನೆಗಡಿ ಬರುವ ಹಾಗೆ ಮಾಡಬಲ್ಲವು. ಅವುಗಳಲ್ಲಿ ಎರಡು ಬಗೆಯನ್ನು ಕಾಣಬಹುದು ಒಂದು ರೈನೋ ಮತ್ತೊಂದು ಕರೋನ ವೈರಸ್ಗಳು, ಅನೇಕ ಬಗೆಯ ವೈರಸ್ಗಳು ಶೀತವನ್ನು ಉಂಟು ಮಾಡಬಲ್ಲವು ಆದ್ದರಿಂದ ತಂಡದ ಮೇಲೆ ಒಂದರಂತೆ ಅನೇಕ ಬಗೆಯ ಶೀತಕ್ಕೆ ಒಳಗಾಗುವ ಸಾಧ್ಯತೆಗಳಾಗಿರುತ್ತವೆ.

ಶೀತ ಹೇಗೆ ಹರಡುತ್ತೆ (ಕರೋನ ವೈರಸ್ ಕೂಡ)
ಮೊದಲನೆಯದಾಗಿ ನೇರ ಸಂಪರ್ಕದಿಂದ: ನಾವು ಸೀನಿದಾಗ ಅಥವಾ ಕೆಮ್ಮಿದಾಗ ಶೀತವನ್ನುಂಟು ಮದುಅವನತ ವೈರಸ್ಗಳನ್ನು ಒಳಗೊಂಡ ಚಿಕ್ಕ ಚಿಕ್ಕ ದ್ರವದ ಹನಿಗಳು ಗಾಳಿಯಲ್ಲಿ ಬೆರೆಯುತ್ತವೆ. ಅದನ್ನು ಮತ್ತೊಬ್ಬರು ಉಸಿರಾಡಿದಾಗ ಆ ವೈರಸ್ಗಳು ಅವರನ್ನು ಪ್ರವೇಶಿಸಿ ಅವರಲ್ಲಿ ಶೀತ, ನಗಾಡಿಗಳನ್ನು ಉಂಟು ಮಾಡುತ್ತವೆ.

ಪರೋಕ್ಷ ಸಂಪರ್ಕದಿಂದ: ನಾವು ಮತ್ತೊಂದು ವಸ್ತುವಿನ ಮೇಲೆ ಉದಾಹರಣೆಗೆ ಬಾಗಿಲ ಹಿಡಿಯ ಮೇಲೆ ಸೀನಿದಾಗ, ಕೆಲವು ನಿಮಿಷಗಳ ನಂತರ ಮತ್ತೊಬ್ಬರು ಆ ಹಿಡಿಯನ್ನು ಮುಟ್ಟಿ ಅದೇ ಕೈಯಿಂದ ತಮ್ಮ ಬಾಯಿ ಹಾಗೂ ಮೂಗುಗಳನ್ನು ಮುತ್ತಿಕೊಂಡರೆ ಶೀತದ ವೈರಸ್ಗಳು ಅವರಲ್ಲಿ ಪ್ರವೇಶಿಸುತ್ತವೆ. ಆದ್ದರಿಂದ ಆರೋಗ್ಯದ ವಿಚಾರದಲ್ಲಿ ಹೆಚ್ಚು ಕಾಳಜಿವಹಿಸಬೇಕು.

Leave a Comment