ಸಾಮಾನ್ಯವಾಗಿ ಶೀತ ನೆಗಡಿ ಅನ್ನೋದು ಎಲ್ಲರಲ್ಲಿಯೂ ಕಾಡುವಂತ ಸಾಮಾನ್ಯ ದೈಹಿಕ ಸಮಸ್ಯೆಯಾಗಿದೆ, ಇದು ಒಂದೇ ಕಾರಣಗಳಿಂದ ಬರುತ್ತದೆ ಎಂಬುದಾಗಿ ಹೇಳಲು ಸಾಧ್ಯವಿಲ್ಲ ಹತ್ತಾರು ಕಾರಣಗಳಿಂದ ಬರಬಹುದು ಕೆಲವು ಬಗೆಯ ಅಲರ್ಜಿಗಳಿಂದ ಕೆಲವು ಔಷಧಿಗಳಿಂದ ಹಾಗೂ ಕೆಲವೊಮ್ಮೆ ಗರ್ಬಿಣಿ ಮಹಿಳೆಯರಿಗೆ ಬಹುಬೇಗನೆ ಶೀತ ಆವರಿಸಿಕೊಳ್ಳುತ್ತದೆ ಕಾರಣ ಅವರು ಗರ್ಭಿಣಿಯಾಗಿರುವುದರಿಂದ. ಹೌದು ಇಂತಹ ಸಾಮಾನ್ಯ ಶೀತ ನೆಗಡಿ ನಿವಾರಿಸಿಕೊಳ್ಳಲು ಇರುವಂತ ಒಂದಿಷ್ಟು ಮನೆ ಮದ್ದುಗಳನ್ನು ಈ ಮೂಲಕ ತಿಳಿದುಕೊಳ್ಳೋಣ ನಿಮಗೆ ಈ ಉಪಯುಕ್ತ ವಿಚಾರ ಇಷ್ಟವಾದರೆ ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಲು ಮರೆಯದಿರಿ.
ಮೊದಲನೆಯದಾಗಿ ಮನೆಯಲ್ಲಿಯೇ ನೀವುಗಳು ಶೀತ ನೆಗಡಿ ನಿಯಂತ್ರಿಸಿಕೊಳ್ಳಲು ಅನುಕೂಲ ಆಗುವಂತ ಒಂದಿಷ್ಟು ಸಲಹೆಗಳನ್ನು ತಿಳಿದುಕೊಳ್ಳಿ, ಹಬೆ ಹಿಡಿಯಿರಿ ನೆಗಡಿಗೆ ಅತ್ಯಂತ ಪರಿಣಾಮಕಾರಿ ಹಾಗೂ ತ್ವರಿತ ಉಪಶಮನವೆಂದರೆ ಬಿಸಿ ನೀರಿನಲ್ಲಿ ನೀಲಗಿರಿ ತೈಲ ಬೆರಸಿ ಅದರ ಹಬೆಯನ್ನು ಉಸಿರೊಳಗೆ ಎಳೆದುಕೊಳ್ಳುವುದು ನಂತರ ಆ ನೀರಿನಲ್ಲಿ ಸ್ನಾನ ಮಾಡುವದು ಸ್ನಾನದ ನಂತರ ಸ್ನಾನದ ಕೊಣೆಯಲ್ಲಿ ಹಬೆಯು ಇರೋವರೆಗೂ ಸ್ವಲ್ಪ ಹೊತ್ತು ಅಲ್ಲೇ ನಿಲ್ಲಿ. ಇದು ನೆಗಡಿಯಿಂದ ಆರಾಮ ನೀಡುತ್ತದೆ.
ಎರಡನೆಯದಾಗಿ ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವುದು, ಹೌದು ಉಪ್ಪು ನೀರು ನೆಗಡಿಯಿಂದ ಮುಕ್ತರಾಗಲು ಸಹಕಾರಿ ಒಂದು ಬಟ್ಟಲಿನಲ್ಲಿ ಬಿಸಿನೀರನ್ನು ತಗೆದುಕೊಳ್ಳಿ ಅದಕ್ಕೆ ಒಂದು ಚಿಟಿಕೆ ಉಪ್ಪು ಬೆರಸಿ ಸ್ವಲ್ಪ ನೀರನ್ನು ಬಾಯಿಗೆ ಹಾಕಿಕೊಂಡು ಕೆಲವು ನಿಮಿಷಗಳವರೆಗೆ ಗಂಟಲು ಸ್ವಚ್ಛವಾಗುವಂತೆ ಮುಕ್ಕಳಿಸಿ ನಂತರ ಉಳಿದ ಬಿಸಿನೀರಿನ ದ್ರಾವಣದಿಂದ ಮೂಗಿನ ಹೊಳ್ಳೆಗಳಮ್ಮ ಶುಭ್ರಗೊಳಿಸಿಕೊಳ್ಳಿ. ಹೀಗೆ ಮಾಡುವುದರಿಂದ ವಿಷ ಪದಾರ್ಥಗಳು ಹೊರಹಾಕಲ್ಪಡುತ್ತವೆ ಇದೆ ರೀತಿ ದಿನದಲ್ಲಿ ಹಲವಾರು ಬಾರಿ ಮಾಡುತ್ತೀರಿ.
ಸಾಸುವೆ ಎಣ್ಣೆ: ಅರ್ಧ ಕಪ್ಪು ಕುಡಿಯುವ ನೀರಿಗೆ ಎರಡು ಚಮಚ ಸಾಸುವೆ ಎಣ್ಣೆ ಬೆರಸಿ ಅದರಿಂದ ಬರುತ್ತಿರುವ ಹಬೆಯನ್ನು ದೀರ್ಘವಾದ ಉಸಿರಿನೊಂದಿಗೆ ಒಳಗೆ ಎಳೆದುಕೊಳ್ಳಿ ಇದನ್ನು ದಿನವಿಡೀ ಅನೇಕ ಬಾರಿ ಪುನರಾವರ್ತಿಸಿ. ಇದು ಒಂದು ವಿಧಾನ ಆದರೆ ಮತ್ತೊಂದು ವಿಧಾನ ಹಸಿ ಶುಂಠಿಯನ್ನು ಅಗೆಯುವದು ಹೌದು ಹಸಿಶುಂಠಿಯನ್ನು ಅಗಿಯುವುದರಿಂದ ನೆಗಡಿಯು ಅತ್ಯಂತ ಬೇಗ ಉಪಶಮನವಾಗುತ್ತದೆ, ತಾಜಾ ಶುಂಠಿಯನ್ನು ಜಜ್ಜಿ ಅದಕ್ಕೆ ಉಪ್ಪುನ್ನು ಬೆರೆಸಿ ಅಗೆಯುತ್ತೀರಿ.
ಜೇನಿನೊಂದಿಗೆ ದಾಲ್ಚಿನ್ನಿ ಚಕ್ಕೆ: ಎರಡು ಚಮಚ ಜೇನುತುಪ್ಪಕ್ಕೆ ಒಂದು ಚಿಟಿಕೆ ದಾಲ್ಚಿನ್ನಿ ಬೆರಸಿ ಅದಕ್ಕೆ ಕಾಲು ಚಮಚದಷ್ಟು ನಿಂಬೆರಸವನ್ನು ಬೆರಸಿ ಯಾಕೆಂದರೆ ನಿಂಬೆಹಣ್ಣಿನಲ್ಲಿ ಅತ್ಯಂತ ಹೆಚ್ಚಾಗಿ ಸಿ ವಿಟಮಿನ್ ಹಾಗೂ ಬ್ಯಾಕ್ಟೀರಿಯಾ ಹರಣ ಪದಾರ್ಥಗಳು ತುಂಬಿರುವದರಿಂದ ನೆಗಡಿಗೆ ಇದು ಅತ್ಯಂತ ಉತ್ತಮ ಪರಿಣಾಮಕಾರಿ.
ಶೀತದಿಂದ ಕಫ ಆಗಿದ್ದರೆ ಇದನ್ನು ನಿಯಂತ್ರಿಸಲು: ಶುಂಠಿ ತುಳಸಿ ದಾಲ್ಚಿನ್ನಿ ಚಕ್ಕೆ ಅತಿಮಧುರ ಕರಿಮೆಣಸು ಲವಂಗ ಇವುಗಳು ಕಫವನ್ನು ನಿಯಂತ್ರಿಸಬಲ್ಲದು, ಇವುಗಳಲ್ಲಿ ಯಾವುದಾದರು ಒಂದನ್ನು ಚನ್ನಾಗಿ ಪುಡಿ ಮಾಡಿ ಒಂದು ಚಮಚ ಪುಡಿಯನ್ನು ಒಂದು ಲೋಟ ಬಿಸಿನೀರಿಗೆ ಹತ್ತು ನಿಮಿಷಗಳ ನಂತರ ಸೇವಿಸಿದಲ್ಲಿ ಶೀತ ನೆಗಡಿ ಕಫ ನಿವಾರಣೆಯಾಗುವುದು.