ದೇಹದ ಉಷ್ಣತೆ ಕಡಿಮೆ ಮಾಡುವ ಸುಲಭ ಉಪಾಯ

ಶರೀರದಲ್ಲಿ ಉಷ್ಣತೆ ಹೆಚ್ಚಾದಾಗ ಎಷ್ಟೋ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ. ಇನ್ನು ಬೇಸಿಗೆ ಕಾಲದಲ್ಲಿ ಈ ಸಮಸ್ಯೆ ಹೆಚ್ಚಾಗಿರುತ್ತದೆ. ಶರೀರದಲ್ಲಿ ಉಷ್ಣತೆ ಹೆಚ್ಚಾಗಲು ಕಾರಣಗಳೆಂದರೆ ಮಸಾಲೆ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದರಿಂದ, ನೀರನ್ನು ಹೆಚ್ಚಾಗಿ ಕುಡಿಯದೇ ಇರುವುದರಿಂದ, ಹೆಚ್ಚಿನ ಹೊತ್ತು ಕುರ್ಚಿಯಲ್ಲಿ ಕೂರುವುದರಿಂದ ಈ ಉಷ್ಣತೆ ಅನ್ನೋದು ಹೆಚ್ಚಾಗುತ್ತೆ.

ಈ ಉಷ್ಣತೆಯಿಂದ ಹೆಚ್ಚಾಗಿ ಬರುವ ಸಮಸ್ಯೆಗಳು ಹಲವಾರು. ಮುಖದಲ್ಲಿ ಮೊಡವೆ, ಅಲ್ಸರ್ , ಬಾಯಿಯಲ್ಲಿ ಹುಣ್ಣುಗಳಾಗೋ ಸಮಸ್ಯೆ ಕಾಡುತ್ತದೆ.ಮೂರ್ತ ವಿಸರ್ಜನೆ ಸಮಯದಲ್ಲಿ ಹೆಚ್ಚಾಗಿ ನೋವು ಕಂಡು ಬರುವುದು. ಉರಿಯಾಗುವ ಸಮಸ್ಯೆಗಳು ಕಂಡುಬರುತ್ತೆ. ಉಷ್ಣತೆಗೆ ಮನೆಯಲ್ಲಿನ ಪದಾರ್ಥಗಳನ್ನ ಬಳಸಿದರೆ ಸಾಕು ಯಾವುದೇ ಮೆಡಿಸನ್ಸ್ ತೆಗೆದುಕೊಳ್ಳುವ ಅವಶ್ಯಕತೆ ಇರೋದಿಲ್ಲ. ಹಾಗಾದರೆ ಈ ಉಷ್ಣತೆ ಕಡಿಮೆ ಮಾಡಲು ಇರುವ ಟಿಪ್ಸ್ ಗಳನ್ನ ತಿಳಿಯೋಣ.

ಒಂದು ಲೋಟ ನೀರಿಗೆ ಒಂದು ಚಮಚ ಜೀರಿಗೆ, ಪುಡಿ ಮಾಡಿದ ಕಲ್ಲು ಸಕ್ಕರೆ ಹಾಕಿ.ಚೆನ್ನಾಗಿ ಕಲಕಿ ನೆನೆಸಿಡಿ. ಈ ನೀರಿನ್ನ ಪ್ರತಿದಿನ ಎರಡು ಲೋಟ ಕುಡಿಯುವುದರಿಂದ ಶರೀರದಲ್ಲಿನ ಉಷ್ಣತೆಯನ್ನು ಕಡಿಮೆ ಮಾಡಿ ದೇಹವನ್ನು ತಂಪಾಗಿಡುತ್ತದೆ.

ನೀವೂ ಪ್ರತಿ ದಿನ ಎರಡು ಮೂರು ಕ್ಲಾಸ್ ಮಜ್ಜಿಗೆ ಜೊತೆಯಲ್ಲಿ ಸ್ವಲ್ಪ ನಿಂಬೆರಸವನ್ನ ಬೇರಸಿ ಕುಡಿಯುವುದರಿಂದ ಶರೀರ ಉಷ್ಣತೆ ಬೇಗನೆ ನಿಯಂತ್ರಣವಾಗುತ್ತದೆ. ಅಷ್ಟೇ ಅಲ್ಲದೆ ಸಬ್ಜ ಬೀಜ ಒಂದು ಒಳ್ಳೆಯ ಅಂಶವಿರುವ ಪದಾರ್ಥವಾಗಿದ್ದು. ಎಲ್ಲಾ ಕಿರಣಿ ಅಂಗಡಿಗಳಲ್ಲಿ ಸಿಗುತ್ತದೆ. ಒಂದು ಲೋಟ ನೀರಿಗೆ ಒಂದು ಚಮಚ ಸಬ್ಜ ಬೀಜವನ್ನ ಹಾಕಿ ಮಿಕ್ಸಿ ಮಾಡಿ ನೆನೆಯಲು ಬಿಡಿ. ಇದು ನೆನದ ನಂತರ ಈ ನೀರಿನಲ್ಲಿ ಒಂದು ಚಮಚ ಜೇನುತುಪ್ಪ, ನಿಂಬೆರಸ ಹಾಕಿ ಕಲಕಿ ಪ್ರತಿದಿನ ಸೇವಿಸಿದರೆ ನಿಮ್ಮ ದೇಹದ ಉಷ್ಣತೆ ಜೊತೆಗೆ ತೂಕವನ್ನು ಕಡಿಮೆ ಮಾಡುತ್ತದೆ.

ನಾವು ಸೇವಿಸುವ ಆಹಾರವು ಕೂಡ ನಮ್ಮ ಉಷ್ಣತೆ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಜೀರರೈಸ್, ಎಳೆನೀರು, ಹಣ್ಣಿನ ಜ್ಯೂಸ್ ಗಳನ್ನು ಸೇವಿಸಿದರೆ ನಿಮ್ಮ ದೇಹದಲ್ಲಿ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಫ್ರಡ್ಜ್ ನಲ್ಲಿನ ನೀರು ಕುಡಿಯಬೇಡಿ ಇದರಿಂದ ಉಷ್ಣತೆ ಇನ್ನಷ್ಟು ಹೆಚ್ಚಾಗುತ್ತದೆ. ಆದಷ್ಟು ನಾರ್ಮಲ್ ಆಗಿರುವ ನೀರು ಕುಡಿಯಿರಿ. ಈ ಎಲ್ಲಾ ಟಿಪ್ಸ್ ಗಳನ್ನ ಫಾಲೋ ಮಾಡಿದರೆ ದೇಹದಲ್ಲಿನ ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳಬಹುದು.

Leave a Comment