ಮೈ ಕೈ ನೋವು ನಿವಾರಣೆಗೆ ಹರಳೆಣ್ಣೆ ಮದ್ದು

ಮೈ ಕೈ ನೋವು ಅನ್ನೋದು ಪ್ರತಿ ಮನುಷ್ಯನಿಗೆ ಕಾಡುವಂತ ಸಾಮಾನ್ಯ ಸಮಸ್ಯೆ ಆಗಿದೆ, ಈ ಮೈ ಕೈ ನೋವು ಬರಲು ಕಾರಣ ಹೆಚ್ಚು ಭಾರವಿರುವ ವಸ್ತುಗಳನ್ನು ಪದೇ ಪದೇ ಎತ್ತುವುದರಿಂದ ಮೈ ಕೈ ನೋವು ಉಂಟಾಗುತ್ತದೆ. ಹೆಚ್ಚಾಗಿ ಒತ್ತುವಿಕೆಯಿಂದಲೂ, ತಟ್ಟುವಿಕೆಯಿಂದಲೂ ಮೈ ಕೈ ನೋವು ಬರುತ್ತದೆ ಇದಕ್ಕೆ ಪರಿಹಾರ ಮಾರ್ಗಗಳು ಯಾವುವು ಅನ್ನೋದನ್ನ ಈ ಮೂಲಕ ತಿಳಿಯೋಣ ನಿಮಗೆ ಈ ಉಪಯುಕ್ತ ವಿಚಾರ ಇಷ್ಟವಾಗಿದ್ದರೆ ತಪ್ಪದೆ ನಿಮ್ಮ ಆತ್ಮೀಯ ಸ್ನೇಹಿತರಿಗೂ ಹಂಚಿಕೊಳ್ಳಿ.

ಮೈ ಕೈಗೆ ಪರಿಹಾರ ಮಾರ್ಗಗಳಿವು: ಮೊದಲನೆಯದಾಗಿ ಹರಳೆಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಶರೀರಕ್ಕೆ ಚನ್ನಾಗಿ ಹಚ್ಚಿಕೊಂಡು ೧೦ ರಿಂದ ೧೫ ನಿಮಿಷಗಳ ನಂತರ ಸ್ನಾನ ಮಾಡಿದರೆ ಮೈ ಕೈ ನೋವು ನಿವಾರಣೆಯಾಗಿ ದೇಹ ರಿಲೀಫ್ ಆಗುತ್ತದೆ. ಇನ್ನು ಕೊಬ್ಬರಿ ಎಣ್ಣೆಯಲ್ಲಿ ಓಮ್ ಕಾಳುಗಳನ್ನು ಚನ್ನಾಗಿ ಪುಡಿಮಾಡಿ ಬೆರಸಿ ಸ್ವಲ್ಪ ಬಿಸಿಮಾಡಿ ಮೈಗೆ ಹಚ್ಚಿಕೊಂಡರೆ ನೋವು ನಿವಾರಣೆಯಾಗುತ್ತದೆ.

ಕೀಲುನೋವು ಹೆಚ್ಚಾಗಿದ್ದರೆ ಜೇನುತುಪ್ಪಕ್ಕೆ ಸ್ವಲ್ಪ ಸುಣ್ಣ ಬೆರಸಿ ಲೇಪಿಸಿದರೆ ನೋವು ನಿವಾರಣೆಯಾಗುತ್ತದೆ. ಅಷ್ಟೇ ಅಲ್ದೆ ಎಳ್ಳೆಣ್ಣೆಯನ್ನು ಚನ್ನಾಗಿ ದೇಹಕ್ಕೆಲ್ಲ ಹಚ್ಚಿಕೊಂಡು ೨೦ ರಿಂದ ೩೦ ನಿಮಿಷ ನೆನೆದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದರಿಂದ ನೋವು ಕಡಿಮೆಯಾಗುತ್ತದೆ.

ಬೇವಿನ ಹೂವುಗಳನ್ನು ನೀರಿನಲ್ಲಿ ನೆನೆಹಾಕಿ ಮಾರನೆಯ ದಿನ ಅದನ್ನು ಚನ್ನಾಗಿ ಕಲೆಸಿ ಮಿಶ್ರಣವನ್ನು ೩ ಬಾರಿಯಂತೆ ಸೇವಿಸಿದರೆ ಮೈ ಕೈ ನೋವು ಕಡಿಮೆಯಾಗುತ್ತದೆ. ಈ ಕ್ರಮವನ್ನು ನಿರಂತರವಾಗಿ ೪ ರಿಂದ ೫ ದಿನಗಳವರೆಗೆ ಮಾಡಿದರೆ ಉತ್ತಮ. ಈ ಮೇಲೆ ತಿಳಿಸಿದ ಪರಿಹಾರ ಮಾರ್ಗಗಳಲ್ಲಿ ನಿಮಗೆ ಯಾವುದು ಸುಲಭವೋ ಅದನ್ನು ಮಾಡಿ ಮೈ ಕೈ ನೋವು ನಿವಾರಣೆ ಮಾಡಿಕೊಳ್ಳಬಹುದಾಗಿದೆ.

Leave a Comment