ಕಣ್ಣಿನ ಸುತ್ತಲೂ ಆಗುವಂತ ಕಪ್ಪು ನಿವಾರಿಸುವ ಸುಲಭ ಉಪಾಯ

ಸಾಮಾನ್ಯವಾಗಿ ಕೆಲವರಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಇದಕ್ಕೆ ಕಾರಣವೇನು ಹಾಗು ಒಂದಿಷ್ಟು ಪರಿಹಾರ ಮರಗಗಳು ಯಾವುವು ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳೋಣ. ಕಣ್ಣಿನ ಸುತ್ತಲೂ ಕಪ್ಪು ಆಗುವುದಕ್ಕೆ ಕಾರಣವೇನು ಅನ್ನೋದನ್ನ ತಿಳಿಯುವುದಾದರೆ, ಕಣ್ಣಿನ ಸುತ್ತಲೂ ಕಪ್ಪು ಉಂಟಾಗಲು ಕಾರಣ ಹೈಪರ್ ಪಿಗ್ ಮೆಂಟೇಷನ್. ಕಪ್ಪು ಕಲೆ ಅನ್ನೋದು ರೋಗವಲ್ಲದಿದ್ದರು ಕೂಡ ಸುಂದರವಾದ ಕಣ್ಣುಗಳಿಗೆ ಕುಂದು ಉಂಟುಮಾಡುತ್ತದೆ, ಇದರಿಂದ ಯಾವುದೇ ಹಾನಿಯಾಗದಿದ್ದರು ಕಪ್ಪು ಛಾಯೆ ಕಣ್ಣಿನ ಸುತ್ತ ಎದ್ದು ಕಾಣುವುದರಿಂದ ಮುಖದ ಸೌಂದರ್ಯಕ್ಕೆ ದಕ್ಕೆ ಉಂಟಾಗುತ್ತದೆ.

ಇದಕ್ಕೆ ಪ್ರಮುಖ ಕಾರಣಗಳು: ಕಣ್ಣುಗಳಿಗೆ ಅತಿಯಾದ ಆಯಾಸವಾಗುವದು, ನಿದ್ರೆ ಇಲ್ಲದಿರುವುದು ಪೌಷ್ಟಿಕಾಂಶ ಆಹಾರದ ಕೊರತೆ, ಜೀವಸತ್ವ ಈ,ಬಿ, ಮತ್ತು ಈ ಕೊರತೆ ಕಣ್ಣಿನ ಸುತ್ತ ಇರುವ ಚರ್ಮ ಬಹಳ ಮೃದುವಾಗಿರುತ್ತದೆ. ಪದೇ ಪದೇ ಮುಖ ಅತಿಯಾದ ಸೂರ್ಯನ ಶಾಖಕ್ಕೆ ಕಪ್ಪು ಕಲೆ ಉಂಟಾಗುವುದು.

ಕಣ್ಣಿನ ಸುತ್ತಲೂ ಇರುವಂತ ಕಪ್ಪು ಕಲೆ ನಿವಾರಣೆಗೆ ಪರಿಹಾರ ಮಾರ್ಗಗಳು: ರಾತ್ರಿ ಮಲಗಿದಾಗ ಕಣ್ಣಿನ ಮೇಲೆ ಗುಂಡಾಗಿ ಕತ್ತರಿಸಿದ ಸೌತೆಕಾಯಿಯನ್ನು ಇಟ್ಟುಕೊಳ್ಳುವುದರಿಂದ ಕಪ್ಪು ನಿವಾರಣೆಯಾಗುತ್ತದೆ. ಇನ್ನು ನಿತ್ಯ ಆಹಾರದಲ್ಲಿ ಹಸಿರು ತರಕಾರಿ, ಕಾಯಿ ಪಲ್ಯ ಇವುಗಳನ್ನು ಬಳಸಿ ಆಹಾರಗಳನ್ನು ತಯಾರಿಸಿ ಸೇವನೆ ಮಾಡುವುದರಿಂದ ಆ ಪೌಷ್ಟಿಕಾಂಶದ ಕೊರತೆ ಇರೋದಿಲ್ಲ. ಇನ್ನು ಪ್ರತಿದಿನ ಮುಖವನ್ನು ಸ್ವಚ್ಛವಾಗಿ ಶುದ್ಧ ನೀರಿನಿಂದ ತೊಳೆಯಬೇಕು. ಹೀಗೆ ಮಾಡುವುದರಿಂದ ದೇಹಕ್ಕೆ ಉತ್ತಮ ಅರೋಗ್ಯ ವೃದ್ಧಿಯಾಗುವುದರ ಜೊತೆಗೆ ಕಣ್ಣಿನ ಸುತ್ತಲೂ ಇರುವಂತ ಕಪ್ಪು ನಿವಾರಣೆಯಾಗುತ್ತದೆ.

Leave a Comment