ಬಿಂದು ಜೀರ ಎಂದು ಕರೆಯಲ್ಪಡುವ ಈ ಪಾನೀಯದ ರುಚಿಯನ್ನು ನೋಡದ ಜನರೇ ಇಲ್ಲವೇನೋ….ಅಷ್ಟರ ಮಟ್ಟಿಗೆ ಇದು ಜನಪ್ರಿಯತೆಯನ್ನು ಪಡೆದಿದೆ. ಈ ಬಿಂದುವಿನ ಉತ್ಪಾದನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಒಂದು ಸಣ್ಣ ಹಳ್ಳಿಯಿಂದ ಬಂದಿದೆ ಎಂದರೆ ಅದು ಅಚ್ಚರಿಯ ವಿಷಯ . ಬಿಂದುವಿನ ತಯಾರಕರ ಹೆಸರು ಸತ್ಯಶಂಕರ್. ಇವರು ಪುತ್ತೂರಿನ ಸಮೀಪದ ಬೆಳ್ಳಾರಿ ಎಂಬಲಿ ಜನಿಸಿದ್ದಾರೆ. ಪಿಯುಸಿ ಮುಗಿಸಿದ ಬಳಿಕ ಸತ್ಯಶಂಕರ ಅವರು ಉದ್ಯೋಗ ಮಾಡುವ ವಿಚಾರ ಬಂದಾಗ ಇವರ ಬಳಿ ಸ್ವಂತ ಹಣವಿರಲಿಲ್ಲ ಹಾಗಾಗಿ ಕೇಂದ್ರ ಸರಕಾರದ ಉದ್ಯೋಗ ಯೋಜನೆಗೆ ಸಹಿ ಹಾಕಿ ಅದರ ಸಹಾಯದಿಂದ ಸ್ವಂತ ಆಟೋವನ್ನು ಖರೀದಿಸಿ ಹಾಗೆ ವಿಜಯ ಬ್ಯಾಂಕ್ ಇಂದ ಸಾಲವನ್ನು ಪಡೆದು ತಮ್ಮ ಕಠಿಣ ಪರಿಶ್ರಮದಿಂದ ದುಡಿದು ಆಟೋ ಮಾರಿ ಡೀಸೆಲ್ ಕಾರನ್ನು ಕೊಂಡುಕೊಳ್ಳುತ್ತಾರೆ. ಸ್ಪೇರ್ ಪಾರ್ಟ್ಸ್ ಮತ್ತು ಟೈಯರ್ ಗಳನ್ನು ಮಾರುವ ಅಂಗಡಿಯನ್ನು ಸಹ ಇಡುತ್ತಾರೆ. ನಂತರ ೧೯೯೪ ರಲ್ಲಿ ಸೆಕೆಂಡ್ ಹ್ಯಾಂಡ್ ಗಾಡಿಗಳಿಗೆ ಸಾಲ ಕೊಡಲು ಆರಂಭಿಸುತ್ತಾರೆ. ಈ ಮೂಲಕ ಪ್ರವೀಣ್ ಕ್ಯಾಪಿಟಲ್ ಎಂಬ ಕಂಪನಿಯನ್ನು ಸಹ ಹುಟ್ಟಿ ಹಾಕುತ್ತಾರೆ. ಕ್ರಿಯಾಶೀಲ ಹಾಗೂ ಬೆಳವಣಿಗೆಗೆ ಪೂರಕವಾದ ಘಟಕವನ್ನು ಪುತ್ತೂರಿನಲ್ಲಿ ಆರಂಭ ಮಾಡಿದರೆ ಅದು ಎಷ್ಟೊ ಜನರಿಗೆ ಉದ್ಯೋಗ ಸಿಗುತ್ತದೆ ಎಂದು ಸತ್ಯಶಂಕರ್ ನಿರ್ಧರಿಸುತ್ತಾರೆ.
ಪುತ್ತೂರು ಒಂದು ಗುಡ್ಡಗಾಡು ಪ್ರದೇಶ ಆಗಿದೆ. ಇಲ್ಲಿ ಧಾರಾಳವಾಗಿ ನೀರು ಲಭ್ಯವಿರುತ್ತದೆ. ಹಾಗಾಗಿ ಇಲ್ಲಿ ಒಂದು ನೀರಿನ ಘಟಕವನ್ನು ಸ್ಥಾಪಿಸಬೇಕು ಎಂದು ದೃಢ ನಿರ್ಧಾರವನ್ನು ಮಾಡುತ್ತಾರೆ. ಇದಾದ ಎರಡು ವರ್ಷಗಳ ಬಳಿಕ ಬಿಂದು ಸಾಫ್ಟ್ ಡ್ರಿಂಕನ್ನು ತಯಾರಿಸುವುದಕ್ಕೆ ಹೊಸ ಮಾದರಿಯ ದೇಶಿಯ ಸ್ವಾದಗಳ ಜೀರಾ ಮಸಾಲವನ್ನು ಸೇರಿಸುತ್ತಾರೆ ಹೀಗೆ ಮಾರುಕಟ್ಟೆಯಲ್ಲಿ ಇತರ ಉತ್ಪನ್ನಗಳ ಉತ್ಪಾದನಾ ಘಟಕಗಳನ್ನು ಸಹ ಸ್ಥಾಪನೆ ಮಾಡುತ್ತಾರೆ. ಸಧ್ಯ ಇವರ ಕಂಪನಿಯ ಬಂದು ನಾಲ್ಕು ನೂರು ಕೋಟಿಯನ್ನು ದಾಟಿದೆ. ೨೦೨೦ಕ್ಕೆ ಇವರ ಕಂಪನಿಯ ವಹಿವಾಟು ಸಾವಿರವನ್ನು ದಾಟಬೇಕು ಎಂಬುದು ಸತ್ಯ ಶಂಕರ್ ಅವರ ಗುರಿಯಾಗಿದೆ. ಕರ್ನಾಟಕ ರಾಜ್ಯದ ಗಡಿಯನ್ನು ದಾಟಿ ಇಂದಿಗೆ ಬಿಂದು ಮಸಾಲ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಪುಟ್ಟ ಹಳ್ಳಿಯಲ್ಲಿ ಆರಂಭವಾಗಿ ದೇಶದ ತುಂಬಾ ತನ್ನ ಕಂಪನ್ನು ಹರಡುತ್ತಿದೆ.