ಸ್ವಂತ ಮನೆ ಕಟ್ಟಬೇಕು ಅನ್ನೋ ಆಸೆ ಹಿಡೇರಿಸುವ ಭೂ ವರಾಹ ಸ್ವಾಮಿಯ ಪವಾಡ

ಎಲ್ಲರಿಗೂ ತಮ್ಮ ಸ್ವಂತ ಮನೆ ಕಟ್ಟಬೇಕು ಎನ್ನುವ ಆಸೆ ಇದ್ದೆ ಇರುತ್ತದೆ. ಇದಕ್ಕಾಗಿ ತಮ್ಮ ಜೀವನ ಪೂರ್ತಿ ದುಡಿದು ಉಳಿತಾಯ ಮಾಡುತ್ತಾರೆ . ಇನ್ನು ಕೆಲವರಿಗೆ ಹಣ ಹೊಂದಿಸಲು ಆಗದೇ ಮನೆ ಕಟ್ಟುವ ಕನಸು ಕನಸಾಗೇ ಉಳಿದುಬಿಡುತ್ತದೆ. ಇದೆಲ್ಲವನ್ನು ನನಸು ಮಾಡುವ ಒಬ್ಬ ದೇವರಿದ್ದಾನೆ ಎಂಬುದನ್ನು ನೀವು ನಂಬಲೇಬೇಕು.ಹೌದು ನಮ್ಮ ಕರ್ನಾಟಕದಲ್ಲೇ ಪುರಾಣ ಪ್ರಸಿದ್ದ ದೇವಾಲಯವಿದೆ. ಶಕ್ತಿಶಾಲಿ ದೇವರು ಶ್ರೀ ವರಹ ಸ್ವಾಮಿ ಇಲ್ಲಿ ನೆಲೆಸಿದ್ದಾನೆ. ಪವಾಡಗಳನ್ನು ಸೃಷ್ಟಿ ಸುತ್ತಿದ್ದಾನೆ.

ಇಲ್ಲಿನ ದೇವರಿಗೆ ಭೂ ವರಾಹ ಸ್ವಾಮಿ ಎಂದು ಕರೆಯುತ್ತಾರೆ. ಯಾವುದೇ ಭೂ ವಿವಾದ, ಮನೆ ಕಟ್ಟಿಸುವ ಆಸೆ ಇದ್ದರೆ ಈ ದೇಗುಲಕ್ಕೆ ಒಮ್ಮೆ ಬಂದರೆ ಸಾಕು ನಿಮ್ಮ ಕನಸು ನನಸಾಗುವುದು ಖಚಿತ.
ಇಲ್ಲಿ ನೂರಾರು ಭಕ್ತರು ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡು ಹೋಗುತ್ತಾರೆ. ಇಲ್ಲಿರುವ ಭೂದೇವಿ ವರಾಹ ಸ್ವಾಮಿಯನ್ನು ಹೊಯ್ಸಳರ ಕಾಲದಲ್ಲಿ ಹೇಮಾವತಿ ದಂಡೆಯ ಮೇಲೆ ನಿರ್ಮಿಸಲಾದ ಒಂದು ಗುಡಿಯಲ್ಲಿ ಕ್ರಿ.ಶ.1334ರಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ ಎಂದು ನಮ್ಮ ಹಿರಿಯರು ಹೇಳುತ್ತಾರೆ.

ಹೊಯ್ಸಳರ ಕಾಲದ ಮುಮ್ಮಡಿ ಬಲ್ಲಾಳನ ಕಾಲದಲ್ಲಿ ಇಲ್ಲಿರುವ ಭೂ ವರಾಹಸ್ವಾಮಿಯನ್ನು ಕೆತ್ತಿಸಲಾಗಿದೆ. ಈ ವಿಗ್ರಹವು ಸುಮಾರು 15 ಅಡಿ ಎತ್ತರವಾಗಿದೆ.ತೊಡೆಯ ಭೂದೇವಿ ಕೂರಿಸಿಕೊಂಡು ಭೂ ವರಾಹಸ್ವಾಮಿ ನೆಲೆಸಿದ್ದಾನೆ. ಭೂ ವರಾಹಸ್ವಾಮಿಯ ವಿಗ್ರಹಯು ಕೃಷ ವರ್ಣದ ಸಾಲಿಗ್ರಾಮ ಶಿಲೆ ಯಾಗಿದೆ. ಇಲ್ಲಿರುವ ಭೂ ವರಾಹ ಸ್ವಾಮಿಗೆ ಹರಕೆ ಮಾಡಿಕೊಂಡು ಭಕ್ತಿಯಿಂದ ಬೇಡಿಕೊಂಡರೆ ಸಾಕು ಭೂಮಿಗೆ ಸಂಬಂಧಿಸಿದ ಯಾವುದೇ ವಿವಾದಗಳು ಶೀಘ್ರ ಇತ್ಯರ್ಥ ವಾಗುತ್ತದೆ ಎಂಬ ಪ್ರತೀತಿ ಇದೆ.

ಮರಳು ಮತ್ತು ಇಟ್ಟಿಗೆಯನ್ನು ಪೂಜೆಮಾಡಿಸಿ ಮನೆ ಕಟ್ಟಿವಾಗ ಬಳಸಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿದೆ.ಇಲ್ಲಿನ ದೇವರಿಗೆ ಪ್ರತಿ ಶನಿವಾರ ವಿಶೇಷವಾದ ಪೂಜೆಗಳು ನಡೆಯುತ್ತವೆ. ಜೀವನದಲ್ಲಿ ಕಷ್ಟ ಎನ್ನುವವರು ಇಲ್ಲಿಗೆ ಬಂದು ಒಳಿತನ್ನು ಕಂಡಿದ್ದಾರೆ. ಈ ದೇವಾಲಯದ ಸಮಯ ಬೆಳಗ್ಗೆ 8 ರಿಂದ ಮಧ್ಯಾಹ್ನ 2 ರವರೆಗೆ,ಸಂಜೆ 4 ರಿಂದ 7 ರ ತನಕ ದೇವಾಲಯವು ತೆರೆದಿರುತ್ತದೆ. ಆಲ್ಲದೆ ಭಾನುವಾರವೂ ತೆರೆದಿರುತ್ತದೆ.

ಈ ದೇಗುಲದ ವಿಳಾಸ ಮಂಡ್ಯ ಜಿಲ್ಲೆ ಕೃಷ್ಣರಾಜ ಪೇಟೆಯಿಂದ 18 ಕಿ.ಲೋ.ದೂರದಲ್ಲಿರುವ ಊರು ಕಲ್ಲಹಳ್ಳಿಯ ದೇವಾಲಪುರ ಗ್ರಾಮದಲ್ಲಿ ಈ ವಿಶೇಷವಾದ ದೇವಸ್ಥಾನವಿದೆ.ನಿಮ್ಮ ಜೀವನದಲ್ಲೂ ಸಹ ಮನೆ ಕಟ್ಟುವ ಆಸೆ ಇದ್ದರೆ ಈ ಕ್ಷೇತ್ರಕ್ಕೆ ಬಂದು ಪೂಜೆ ಮಾಡಿಸಿಕೊಂಡು ಹೋಗಿ. ನಿಮ್ಮ ಇಡೇರಿಕೆಗಳು ಫಲಿಸುವುದು ಖಚಿತ.

Leave a Comment