ಒಬ್ಬ ವ್ಯಕ್ತಿ ಯೋಗ ಅಥವಾ ಯಾವುದೇ ವ್ಯಾಯಾಮ ಮಾಡುವಾಗ ಅದರ ಸರಿಯಾದ ವಿಧಾನವನ್ನು ತಿಳಿದಿರಬೇಕು. ಇಲ್ಲವಾದರೆ ಅದು ಆ ವ್ಯಕ್ತಿಯ ಆರೋಗ್ಯದ ಮೇಲೆ ಅಡ್ಡ ಪರಿಣಾಮವನ್ನು ಉಂಟು ಮಾಡುತ್ತದೆ. ಹಾಗೆ ಮಲಗುವುದಕ್ಕೆ ಸಹ ಇಂದು ವಿಧಾನವಿದೆ. ರಾತ್ರಿ ಮಲಗುವಾಗ ನಾವು ಹೇಗ್ ಹೇಗೋ ಮಲಗುತ್ತೇವೆ. ನಾವು ಮಲಗುವ ಭಂಗಿಯಿಂದ ನಮ್ಮ ಮೆದುಳು ಮತ್ತು ಹೊಟ್ಟೆಯ ಮೇಲೆ ಹಲವು ರೀತಿಯ ಪರಿಣಾಮಗಳೂ ಉಂಟಾಗುತ್ತವೆ ಅವು ಒಳ್ಳೆಯ ಪರಿಣಾಮವು ಆಗಿರಬಹುದು ಇಲ್ಲ ಕೆಟ್ಟ ಪರಿಣಾಮವು ಆಗಿರಬಹುದು.
ನಮಗೆಲ್ಲ ತಿಳಿದಿರುವಂತೆ ಹೆಚ್ಚಿನ ಗಾಢ ನಿದ್ರೆಯಲ್ಲಿ ಇದ್ದಾಗ ನಮ್ಮ ದೇಹ ಹೆಚ್ಚು ಎನರ್ಜಿಯನ್ನು ಹೊಂದಿರುತ್ತದೆ. ಹಾಗೂ ನಮ್ಮ ದಿನನಿತ್ಯದ ಕೆಲಸಗಳನ್ನ ಸುಲಭವಾಗಿ ಮತ್ತು ಅತಿ ವೇಗವಾಗಿ ಮಾಡಲು ಸಹಾಯ ಮಾಡುತ್ತದೆ. ಗಾಢವಾದ ನಿದ್ರೆ ನಮ್ಮ ದೇಹಕ್ಕೆ ಹೇಗೆ ಶಕ್ತಿಯನ್ನು ನೀಡುತ್ತದೆಯೋ ಹಾಗೆ ನಾವು ಮಲಗುವ ಭಂಗಿ ಅಥವಾ ರೀತಿ ಕೂಡಾ ಅಷ್ಟೆ ಮುಖ್ಯವಾದದ್ದು. ನಮ್ಮಲ್ಲಿ ಸುಮಾರು ಎಪ್ಪತ್ತರಷ್ಟು ಜನರಿಗೆ ಸರಿಯಾಗಿ ಮಲಗುವ ವಿಧಾನ ಗೊತ್ತಿರುವುದಿಲ್ಲ. ಹಾಗಾಗಿ ಸರಿಯಾದ ಭಂಗಿಯಲ್ಲಿ ಮಲಗದ ಕಾರಣ ಸರಿಯಾದ ಸಮಯಕ್ಕೆ ನಿದ್ದೆ ಬಾರದೆ ಇರುವುದು, ನಿದ್ದೆಯಲ್ಲಿ ಪದೇ ಪದೇ ಎಚ್ಚರ ಆಗುತ್ತಲೇ ಇರುವುದು ಹೀಗೆ ಸರಿಯಾಗಿ ನಿದ್ದೆ ಇಲ್ಲದ ಕಾರಣದಿಂದಾಗಿ ಕಣ್ಣು ಉರಿಯುವುದು, ಮೈ ಕೈ ನೋವು, ಹೊಟ್ಟೆ ಸರಿಯಾಗಿ ಇಲ್ಲದೆ ಇರುವುದು, ಬೆಳಿಗ್ಗೆ ಮಲ ವಿಸರ್ಜನೆ ಸರಿಯಾಗಿ ಆಗದೇ ಇರುವುದು, ಮೈ ಕೈ ನೋವು, ರಕ್ತದ ಒತ್ತಡ ಹೆಚ್ಚಾಗುವುದು, ತ್ವಚೆಯಲ್ಲಿ ಗುಳ್ಳೆಗಳು ಆಗುವುದು ಚರ್ಮ ಸುಕ್ಕು ಗಟ್ಟುವುದು, ಕಣ್ಣಿನ ಸುತ್ತಲೂ ಕಪ್ಪು ಕಲೆಗಳು ಆಗುವುದು ಹಾಗೂ ಕೂದಲು ಉದುರುವುದು ಹೀಗೆ ಹಲವಾರು ಸಮಸ್ಸ್ಯೆಗಳು ಆಗುತ್ತವೆ.
ಮಲಗುವಾಗ ಬರೀ ಎಡ ಅಥವಾ ಬಲ ಭಾಗವಾಗಿ ಮಲಗುತ್ತಾರೆ ಇನ್ನೂ ಕೆಲವರು ಬೆನ್ನ ಮೇಲೆ ಅಥವಾ ಹೊಟ್ಟೆಯ ಮೇಲೆ ಮಲಗುತ್ತಾರೆ. ಇವುಗಳೆಲ್ಲ ನಮ್ಮ ದೇಹದ ಮೇಲೆ ಬೇರೆ ಬೇರೆ ರೀತಿಯ ಪರಿಣಾಮಗಳನ್ನು ಬೀರುತ್ತವೆ. ಹಿತೆಯ ಮೇಲೆ ಮಲಗುವುದರಿಂದ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಹೀಗೆ ಮಲಗುವುದು ತುಂಬಾ ಹಾನಿಕಾರಕ. ಹೊಟ್ಟೆಯ ಮೇಲೆ ಮಲಗುವುದರಿಂದ ನಮ್ಮ ಬೆನ್ನು ಮತ್ತು ಕುತ್ತಿಗೆಯ ಭಾಗಕ್ಕೆ ಹೆಚ್ಚು ಒತ್ತಡ ಬೀಳುತ್ತದೆ ಹಾಗೂ ಉಸಿರಾಟದ ಸಮಸ್ಯೆ ಆಗಿ ಅಸ್ಥಮದಂತಹ ಖಾಯಿಲೆಗಳು ಬರುತ್ತವೆ. ಹಾಗೆ ಹೊಟ್ಟೆಯ ಮೇಲೆ ಮಲಾಗುವವರಿಗೆ ಕ್ರಮೇಣವಾಗಿ ಬೆನ್ನು ನೋವು ಸೊಂಟ ನೋವು ಕಾಣಿಸಿಕೊಳ್ಳುತ್ತದೆ. ಇವೆಲ್ಲಕ್ಕಿಂತ ಮುಖ್ಯವಾಗಿ ನಮ್ಮ ದೇಹದ ಜೀರ್ಣ ಕ್ರಿಯೆಗೆ ತೊಂದರೆ ಆಗುತ್ತದೆ.
ಬಲ ಭಾಗಕ್ಕೆ ತಿರುಗಿ ಮಲಗುವುದು ಕೂಡಾ ದೇಹಕ್ಕೆ ಅಷ್ಟು ಒಳ್ಳೆಯದಲ್ಲ. ಹಾಗೂ ಇದು ಸರಿಯಾದ ವಿಧಾನ ಕೂಡ ಅಲ್ಲ. ನಾವು ನಮ್ಮ ದೇಹದ ಪ್ರತಿಕ್ರಿಯೆಯನ್ನು ತಿಳಿದಿದ್ದರೆ, ನಮ್ಮ ಹೊಟ್ಟೆ ಮತ್ತು ಹೃದಯ ಇವೆರಡೂ ದೇಹದ ಎಡ ಭಾಗದಲ್ಲಿ ಇರುತ್ತವೆ. ಬಲ ಭಾಗದಲ್ಲಿ ಮಲಗುವುದರಿಂದ ಭೂಮಿಯ ಗುರುತ್ವಾಕರ್ಷಣ ಬಲದಿಂದ ನಮ್ಮ ದೇಹದ ಹೃದಯ ಮತ್ತು ಹೊಟ್ಟೆ ವಿರುದ್ಧ ದಿಕ್ಕಿನಲ್ಲಿ ಕಾರ್ಯ ನಿರ್ವಹಿಸುತ್ತವೆ. ಇದರಿಂದ ಹೊಟ್ಟೆಯಲ್ಲಿ ಆಸಿಡಿಟಿ, ತೂಕ ಹೆಚ್ಚಳ, ಎದೆಯಲ್ಲಿ ಉರಿ, ಮಲ ವಿಸರ್ಜನೆಗೆ ತೊಂದರೆ ಹೀಗೆ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಎಡ ಭಾಗದಲ್ಲಿ ತಿರುಗಿ ಮಲಗುವುದೇ ಸರಿಯಾದ ಕ್ರಮವಾಗಿದೆ. ನಾವೆಲ್ಲಾ ತುಂಬಾ ಕಡೆ ಕೆಳಿರುವಂತೆ, ಆಯುರ್ವೇದ ಮತ್ತು ಇಂಗ್ಲಿಷ್ ಚಿಕಿತ್ಸಾ ಪದ್ಧತಿಯಲ್ಲಿ ಎಡ ಭಾಗದಲ್ಲಿ ತಿರುಗಿ ಮಲಗುವಂತೆ ತಿಳಿಸುತ್ತಾರೆ. ಎಡ ಭಾಗಕ್ಕೆ ತಿರುಗಿ ಮಲಗುವುದರಿಂದ ಜೀರ್ಣ ಕ್ರಿಯೆಗೆ ಸಹಾಯಕಾರಿ ಆಗುತ್ತದೆ. ಎಡ ಭಾಗಕ್ಕೆ ತಿರುಗಿ ಮಲಗುವುದು ನಮ್ಮ ದೇಹದ ಪ್ರತಿಯೊಂದು ಅಂಗಾಂಗಕ್ಕೂ ತುಂಬಾ ಒಳ್ಳೆಯದು. ಹೀಗೆ ಎಡ ಭಾಗಕ್ಕೆ ತಿರುಗಿ ಮಲಗುವುದರಿಂದ ನಮ್ಮ ದೇಹದ ಎಷ್ಟೋ ಅನಾರೋಗ್ಯಗಳು ನಮಗೆ ತಿಳಿಯದಂತೆ ಗುಣ ಆಗುತ್ತವೆ.
ಎಡ ಭಾಗಕ್ಕೆ ತಿರುಗಿ ಮಲಗುವುದರಿಂದ ಏನೆಲ್ಲಾ ಲಾಭಗಳು ಇವೆ ಅಂತ ಅಂದ್ರೆ, ನಾವು ಸೇವಿಸಿದ ಆಹಾರ ಬೇಗ ಜೀರ್ಣ ಆಗುತ್ತದೆ ಹಾಗೂ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರ ಹಾಕಲು ಸಹ ಈ ಒಂದು ಕ್ರಮ ಉತ್ತಮ ಆದುದ್ದು. ಎಡ ಭಾಗದಲ್ಲಿ ಮಲಗಿದಾಗ ಸೇವಿಸಿದ ಆಹಾರ ದೊಡ್ಡ ಕರುಳಿನಿಂದ ಸಣ್ಣ ಕರುಳಿಗೆ ಸುಲಭವಾಗಿ ಚಲಿಸುತ್ತದೆ ಇದರಿಂದ ಬೆಳಿಗ್ಗೆ ಎದ್ದ ಸ್ವಲ್ಪ ಸಮಯದಲ್ಲೇ ಮಲ ವಿಸರ್ಜನೆ ಆಗುವಂತೆ ಇದು ಸಹಾಯ ಮಾಡುತ್ತದೆ. ನಮ್ಮ ಹೃದಯ ದೇಹದ ಎಡ ಭಾಗದಲ್ಲಿ ಇರುವುದರಿಂದ ನಮ್ಮ ಹೃದಯಕ್ಕೆ ಸುಲಭವಾಗಿ ರಕ್ತ ಸಂಚಾರ ಆಗುತ್ತದೆ. ಗೊರಕೆ ಹೊಡೆಯುವವರು ಎಡ ಭಾಗಕ್ಕೆ ತಿರುಗಿ ಮಲಗಿದರೆ ಹೊರಕೆ ಹೊಡೆಯುವುದು ನಿಲ್ಲುತ್ತದೆ. ಎಡ ಭಾಗಕ್ಕೆ ತಿರುಗಿ ಮಲಗುವುದು ಗರ್ಭಿಣಿಯರಿಗೆ ಬಹಳ ಒಳ್ಳೆಯದು. ಎಲ್ಲ ಡಾಕ್ಟರ್ ಗಳು ಸಹ ಗರ್ಭಿಣಿಯರಿಗೆ ಎಡ ಭಾಗಕ್ಕೆ ತಿರುಗಿ ಮಲಗಲು ಸೂಚಿಸುತ್ತಾರೆ. ಒಟ್ಟಿನಲ್ಲಿ ಎಡ ಭಾಗಕ್ಕೆ ತಿರುಗಿ ಮಲಗುವುದು ಎಲ್ಲ ದೃಷ್ಟಿಯಿಂದಲೂ ಸಹ ನಮ್ಮ ದೇಹಕ್ಕೆ ಒಳ್ಳೆಯದು ಹಲವಾರು ಸಂಶೋಧನೆಗಳು ತಿಳಿಸಿವೆ.