ಸಿಲಿಕಾನ್ ಸಿಟಿ ಕರ್ನಾಟಕದ ರಾಜಧಾನಿ ಬೆಂಗಳೂರು ಎಂದು ಕರೆಸಿಕೊಳ್ಳುವ ಇಲ್ಲಿ ಬರಿ ವ್ಯಾವಹಾರಿಕ ಕಟ್ಟಡಗಳು ಅಷ್ಟೇ ಅಲ್ಲದೆ ಪ್ರಮುಖ ಸ್ಥಳಗಳು ಹಾಗೂ ಸುಪ್ರಸಿದ್ದ ದೇವಾಲಯಗಳನ್ನು ಇಲ್ಲಿ ಕಾಣಬಹುದಾಗಿದೆ. ಅಷ್ಟಕ್ಕೂ ಇಲ್ಲಿ ಇರುವಂತ ಪ್ರಮುಖ ದೇವಾಲಯಗಳು ಹಾಗೂ ಇದರ ವಿಶೇಷತೆಯನ್ನು ಈ ಮೂಲಕ ತಿಳಿದುಕೊಳ್ಳೋಣ ಬನ್ನಿ.
ಮೊದಲನೆಯದಾಗಿ ದೊಡ್ಡಗಣಪತಿ ದೇವಸ್ಥಾನ: ಕೆಂಪೇಗೌಡರ ಕಾಲದ ಏಕ ಶಿಲೆಯ 18 ಅಡಿ ಎತ್ತರ 16 ಅಡಿ ಅಗಲದ ಚತುರ್ಭುಜ ಗಣಪತಿ. ಕೇವಲ ದೇವರ ವಿಗ್ರಹವಷ್ಟೇ ಆಗಿರದೇ ಶಿಲ್ಪಕಲೆಯ ಅದ್ಭುತ ರಚನೆಯಾಗಿ ಈ ಗಣಪತಿ ವಿಗ್ರಹ ಸಾಕ್ಷಿ ಹೇಳುತ್ತದೆ. ಸ್ಥಳ: ಬುಲ್ ಟೆಂಪಲ್ ರಸ್ತೆ, ಬಸವನಗುಡಿ, ಬೆಂಗಳೂರು.
2)ಬೃಹತ್ ನಂದಿ ದೇವಾಲಯ: ಇದು ಜಗತ್ತಿನ ಏಕೈಕ ನಂದಿ ದೇವಸ್ಥಾನ. ಈ ಸ್ಥಳಕ್ಕೆ ಬಸವನಗುಡಿ ಎಂದು ಹೆಸರು ಬರಲು ಕಾರಣವೇ ಈ ದೇವಸ್ಥಾನ. ಈ ಶಿಲಾನಂದಿ ಪ್ರತೀವರ್ಷ ಬೆಳೆಯುತ್ತಿರುವುದು ನಿಸರ್ಗದ ವಿಸ್ಮಯ. ಕಾರ್ತಿಕ ಮಾಸದ ಕೊನೆಯ ಸೋಮವಾರ ಇಲ್ಲಿ ನಡೆಯುವ ಕಡಲೆಕಾಯಿ ಮೇಳ ಇನ್ನೂ ವಿಶಿಷ್ಟ. ಈ ನಂದಿಯ ಆಶೀರ್ವಾದ ಪಡೆಯಬೇಕೆಂದರೆ ಬಸವನಗುಡಿ ನಂದಿ ದೇವಾಲಯಕ್ಕೆ ಭೇಟಿ ನೀಡಿ.
3)ಶ್ರೀ ಗವಿಗಂಗಾಧರೇಶ್ವರ ದೇವಸ್ಥಾನ: ಸಂಕ್ರಾಂತಿಯಂದು ಮಾತ್ರ ನಂದಿಯ ಕೋಡುಗಳ ಮಧ್ಯೆ ಹಾದು ಶಿವಲಿಂಗಗಳ ಮೇಲೆ ಸೂರ್ಯಕಿರಣಗಳು ತಲುಪುವ ಈ ಆಶ್ಚರ್ಯಜನಕ ಗುಹಾದೇವಾಲಯವನ್ನು 7 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಗವಿಪುರಂ ನ ಕೆಂಪೇಗೌಡ ನಗರದಲ್ಲಿ ಈ ದೈವೀ ಗುಹಾ ದೇವಾಲಯಕ್ಕೆ ನೀವು ಭೇಟಿ ನೀಡಬಹುದು.
4) ರಾಗಿಗುಡ್ಡ ಆಂಜನೇಯ ದೇವಸ್ಥಾನ: ಗುಡ್ಡದ ಮೇಲಿರುವ ಈ ಆಂಜನೇಯ ದೇವಸ್ಥಾನದ ತಟದಲ್ಲಿ ರಾಜರಾಜೇಶ್ವರಿ ಹಾಗೂ ನವಗ್ರಹ ದೇವಾಲಯಗಳಿವೆ. ಸ್ಥಳ: ಜಯನಗರ 9ನೇ ಬ್ಲಾಕ್
5)ಕಾಡುಮಲ್ಲೇಶ್ವರ ದೇವಸ್ಥಾನ:ಈ ದೇವಾಲಯವನ್ನು 16 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯದ ಪಕ್ಕದಲ್ಲಿ ನಂದಿ ಬಾಯಿಯಿಂದ ನೀರು ಹರಿಯುವ ನಂದಿತೀರ್ಥವು ವಿಶೇಷವಾಗಿದೆ. ಮಲ್ಲೇಶ್ವರಂ ನ ಸಂಪಿಗೇ ರಸ್ತೆಯಲ್ಲಿರುವ ಈ ಶಿವನ ದೇವಸ್ಥಾನದಿಂದಲೇ ಈ ಸ್ಥಳಕ್ಕೆ ಮಲ್ಲೇಶ್ವರಂ ಎಂಬ ಹೆಸರು ಬಂದಿದೆ.
6) ಕೋಟೆವೆಂಕಟರಮಣ ದೇವಸ್ಥಾನ: 1689 ರಲ್ಲಿ ಚಿಕ್ಕರಾಜೇಂದ್ರ ಒಡೆಯರ್ ನಿರ್ಮಿಸಿರುವ ಈ ದೇವಸ್ಥಾನ ಟಿಪ್ಪುವಿನ ಅರಮನೆಯ ಪಕ್ಕದಲ್ಲಿದೆ. ವೈಕುಂಠ ಏಕಾದಶಿ ಅತೀ ವಿಜೃಂಭಣೆಯಿಂದ ಜರಗುವ ಈ ದೇವಸ್ಥಾನದಲ್ಲಿ ದ್ರಾವಿಡ ಹಾಗೂ ವಿಜಯನಗರ ಶೈಲಿಯ ವಾಸ್ತುಶಿಲ್ಪ ಕಂಡು ಬರುತ್ತದೆ.
ಸ್ಥಳ: ಕೆ ಆರ್ ಮಾರ್ಕೇಟ, ಬೆಂಗಳೂರು.
7) ಶ್ರೀ ಬನಶಂಕರಿ ದೇವಸ್ಥಾನ:1915 ರಲ್ಲಿ ಸೋಮಣ್ಣ ಶೆಟ್ಟಿಯವರು ನಿರ್ಮಿಸಿದ ಈ ದೇವಾಲಯ ಬದಾಮಿಯ ಬನಶಂಕರಿಯಿಂದ ದೇವಿಯ ಮೂರ್ತಿಯನ್ನು ತಂದು ಇಲ್ಲಿ ಸ್ಥಾಪಿಸಲಾಗಿತ್ತು. ವಿಶೇಷವಾಗಿ ರಾಹುಕಾಲದಲ್ಲಿ ಪೂಜೆ ನಡೆಸಲಾಗುವ ಈ ದೇವಸ್ಥಾನ ಬೆಂಗಳೂರು ದಕ್ಷಿಣದ ಕನಕಪುರದಲ್ಲಿದೆ.
7)ಶ್ರೀ ಸೋಮೇಶ್ವರ ದೇವಸ್ಥಾನ: ಈ ದೇವಸ್ಥಾನ ಚೋಳರಿಂದ ನಿರ್ಮಿಸಲ್ಪಟ್ಟಿದೆ. ಇಲ್ಲಿ ಬ್ರಹ್ಮ ಹಾಗೂ ವಿಷ್ಣುವಿನ ಪೂಜೆ ನಡೆಯುತ್ತದೆ. ಹಲಸೂರು ಕೆರೆಯ ಹತ್ತಿರ ಈ ದೇವಸ್ಥಾನವಿದೆ.
8) ಧರ್ಮರಾಯಸ್ವಾಮಿ ದೇವಸ್ಥಾನ: ಇದು ವಿಶಿಷ್ಟ ಪಾಂಡವರ ದೇವಸ್ಥಾನವಾಗಿದೆ. ಗಂಗರಿಂದ 800 ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟಿದ್ದು ಬೆಂಗಳೂರು ಕರಗ ಇಲ್ಲಿನ ವಿಶೇಷತೆ.
ಸ್ಥಳ: ತಿಗಳರ ಪೇಟೆ
9) ಇಸ್ಕಾನ್:ಇಸ್ಕಾನ್ ಸಂಸ್ಥೆಯ ಕೃಷ್ಣನ ದೇವಸ್ಥಾನ ಹರೇ ಕೃಷ್ಣಗಿರಿಯ ಮೇಲೆ ನಾಲ್ಕು ಗೋಪುರಗಳನ್ನು ಹೊಂದಿದ್ದು ಕತ್ತಲಲ್ಲಿ ಬೆಳಕಿನಾಟ ಕಣ್ಣು ತನಿಸುತ್ತದೆ.
ಸ್ಥಳ: ರಾಜಾಜಿನಗರ
10) ಶಿವೋಹಂ ದೇವಾಲಯ:ಹಳೇ ಏರಪೋರ್ಟ ರಸ್ತೆಯ ಈ ಶಿವನ ದೇವಾಲಯ 65 ಅಡಿಯ ಶಿವನ ಮೂರ್ತಿಯನ್ನು ಹೊಂದಿದೆ. ಇಲ್ಲಿ ಗಣೇಶನ ವಿಗ್ರಹ ಪೂಜೆ ಸಹ ನೆರವೇರುತ್ತದೆ. ಕೈಲಾಸ ಪರ್ವತ ಮಾದರಿಯಲ್ಲಿ ಅಮೃತ ಶಿಲೆಯಲ್ಲಿ ಕೆತ್ತಲಾದ ಶಾಂತಶಿವನ ವಿಗ್ರಹವನ್ನು ನಿಜವಾದ ಶಿವಭಕ್ತರು ನೋಡಲೇಬೇಕು.