ಮದುವೆ ಶುಭ ಸಮಾರಂಭಗಳಲ್ಲಿ ಸುಂದರವಾಗಿ ಕಾಣಲು ಒಂದಿಷ್ಟು ಬ್ಯೂಟಿ ಟಿಪ್ಸ್

ಆಧುನಿಕ ಜಗತ್ತಿನ ಬಿಡುವಿಲ್ಲದ ಜೀವನ ಶೈಲಿಯಲ್ಲಿ ಮದುವೆ ಇನ್ನಿತರೆ ಸಮಾರಂಭಗಳಿಗೆ ಎಲ್ಲರೂ ಅದರಲ್ಲೂ ಹೆಣ್ಣುಮಕ್ಕಳು ಎಷ್ಟೇ ಆದಷ್ಟು ಬೇಗ ಬೇಗ ತಯಾರಿ ಮಾಡಿಕೊಳ್ಳಬೇಕು ಅಂದುಕೊಂಡರೂ ಕೊನೆಯ ಘಳಿಗೆಯಲ್ಲಿ ಏನಾದರೂ ಮೇಕ್ ಅಪ್ ಸರಿ ಆಗಿಲ್ಲ ಎಂದೋ ಮುಖದ ಮೇಲೆ ಮೊಡವೆ ಆಗಿದೆ ಎಂದೋ ಹೀಗೆ ಒಂದಲ್ಲ ಒಂದು ರೀತಿ ಕೊರಗುತ್ತಾ ಇರುತ್ತಾರೆ.

ಯಾವುದೇ ಪ್ರೋಗ್ರಾಂಗೆ ಹೋಗುವಾಗ ಮೇಕಪ್ ತುಂಬಾನೇ ಮುಖ್ಯ . ನಾವು ಹೇಳುವ ಕೆಲವು ಮನೆ ಮದ್ದುಗಳನ್ನು ಮಾಡಿ ನಿಮ್ಮ ಮುಖವನ್ನು ಕಾಂತಿಯುಕ್ತವಾಗಿಸಬಹುದು. ಕೆಲವೊಬ್ಬರ ಮುಖದಲ್ಲಿ ರಂಧ್ರಗಳು ಇರುತ್ತದೆ. ಹಾಗೆ ಬಿಸಿಲಿನಿಂದ ಮುಖ ಕಪ್ಪಾಗಿರುತ್ತದೆ ದಿಢೀರನೆ ಪ್ರೋಗ್ರಾಮ್ಗೆ ಹೋಗುವವರು ಆಗ ಚಿಂತೆಗೆ ಒಳಗಾಗುತ್ತಾರೆ ಆಗ ಈ ರೀತಿಯಾಗಿ ಮಾಡೋದ್ರಿಂದ ಎಲ್ಲರ ಮುಂದೆ ಕಂಗೊಳಿಸಬಹುದು ಅದು ಹೇಗೆ ಅಂತ ನೋಡೋಣ.

ಎಗ್ ಜೊತೆಗೆ ಕಾಫೀ ಪೌಡರ್ ಫೇಸ್ ಪ್ಯಾಕ್ ಹೇಗೆ ಮಾಡೋದು ಅಂತ ತಿಳಿಯೋಣ. ಇದನ್ನು ಉಪಯೋಗಿಸುವುದರಿಂದ ನಮ್ಮ ತ್ವಚೆ ಕಾಂತಿಯುತವಾಗಿ ಹೊಳಪಿನಿಂದ ಕೂಡಿರುತ್ತದೆ. ಈ ಫೇಸ್ ಪ್ಯಾಕ್ ಬಳಸುವ ಮುನ್ನ ಮುಖವನ್ನು ಚೆನ್ನಾಗಿ ತೊಳೆದು ಕ್ಲೀನ್ ಮಾಡಿಕೊಳ್ಳಬೇಕು. ಈ ಫೇಸ್ ಪ್ಯಾಕ್ ಅನ್ನು ಆದಷ್ಟು ರಾತ್ರಿ ಟೈಂ ಬಳಸಿದರೆ ಹೆಚ್ಚು ಪ್ರಯೋಜನಕಾರಿ. ಅಥವಾ ಯಾವುದೇ ಫಂಕ್ಷನ್ ಗೆ ಹೊರಡಲು, ಫೇಸ್ ಪ್ಯಾಕ್ ಹಾಕಿಕೊಳ್ಳಬೇಕು ಅಂದ್ರೆ ಹೊರಡುವ ಒಂದು ಘಂಟೆ ಮೊದಲು ಇದನ್ನು ಬಳಸಬಹುದು.

ಯಾವುದೇ ಕ್ರೀಮ್ ಆದರೂ ಎಲ್ಲರ ಮುಖಕ್ಕೂ ಸರಿ ಹೊಂದುವುದಿಲ್ಲ ಹಾಗಾಗಿ ಮೊದಲು ಕೈ ಗೆ ಹಚ್ಚಿ ನೋಡಿಕೊಳ್ಳಬೇಕು ನಂತರ ಮುಖಕ್ಕೆ ಹಚ್ಚಬೇಕು. ಯಾಕೆಂದ್ರೆ ಏನಾದ್ರೂ ಅಲರ್ಜಿ ಏನಾದ್ರೂ ಆದ್ರೆ ಮೊದಲು ಕೈ ಗೆ ಕಾಣತ್ತೆ. ಈ ಅಲರ್ಜಿ ಇಂದ ಮುಖದಲ್ಲಿ ಮೊಡವೆಗಳು ಆದರೆ ಐಸ್ ಕ್ಯೂಬ್ ನಿಂದ ಮುಖಕ್ಕೆ ಮಸಾಜ್ ಮಾಡಿ ಫ್ರಿಡ್ಜ್ ಇಲ್ಲದವರು ಒಂದು ಗ್ಲಾಸ್ ನೀರಿಗೆ ಐವತ್ತು ಗ್ರಾಂ ಪುದೀನಾ ಎಲೆಯನ್ನು ಹಾಕಿ ಕುದಿಸಿ ಆ ನೀರನ್ನು ಕುಡಿಯುವುದರಿಂದಲೂ ಸಹ ಅಲರ್ಜಿ ಮೊಡವೆಗಳು ಎರಡು ದಿನಗಳಲ್ಲಿ ನಿವಾರಣೆ ಆಗುತ್ತದೆ.

ಈ ಪ್ಯಾಕ್ ಹಚ್ಚುವ ಮೊದಲು ಉಗುರು ಬಿಸಿ ನೀರಿನಲ್ಲಿ ಮುಖ ತೊಳೆದುಕೊಳ್ಳಬೇಕು. ಈ ಪ್ಯಾಕ್ ಗೆ ಎರಡು ಮೊಟ್ಟೆಯ ಬಿಳಿ ಭಾಗ ತೆಗೆದುಕೊಂಡು ಅದರ ಜೊತೆಗೆ ಎರಡು ಡ್ರಾಪ್ ಲಿಂಬು ರಸ ಹಾಕಿ ಅದನ್ನು ಮಿಕ್ಸಿ ಜಾರ್ ಗೆ ಹಾಕಿ ಪೇಸ್ಟ್ ಹಾಗೆ ಮಾಡಿಕೊಳ್ಳಬೇಕು. ನಂತರ ಅದಕ್ಕೆ ಆಲಿವ್ ಆಯಿಲ್ ಹಾಕಿ ಮತ್ತೆ ಅದನ್ನು ಮಿಕ್ಸಿಯಲ್ಲಿ ಪೇಸ್ಟ್ ಮಾಡಿಕೊಳ್ಳಬೇಕು ನಂತರ ಅದಕ್ಕೆ ಎರಡು ಸ್ಪೂನ್ ಅಷ್ಟು ಜೋಳದ ಪುಡಿ ಹಾಕಿ ಮಿಕ್ಸ್ ಮಾಡಿ ಅದನ್ನು ಒಂದು ನಿಮಿಷದ ಕಾಲ ಬಿಸಿ ಮಾಡಿ ಗಟ್ಟಿ ಆದಮೇಲೆ ಅದನ್ನು ತಡೆಯಲು ಬಿಟ್ಟು ತಣಿದ ನಂತರ ಒಂದು ಸ್ಪೂನ್ ಕಾಫೀ ಪೌಡರ್ ಹಾಕಿ ಮಿಕ್ಸ್ ಮಾಡಿ ಕೈ ಗೆ ಹಚ್ಚಿ ನೋಡಿ ನಂತರ ಮುಖಕ್ಕೆ ಹಚ್ಚಿ ೧೫/೨೦ ನಿಮಿಷಗಳ ಕಾಲ ಮಸಾಜ್ ಮಾಡಿ. ತುಂಬಾ ಹೊತ್ತು ಬಿಡದೆ ಹತ್ತು ನಿಮಿಷದಲ್ಲಿ ಇದನ್ನು ತೆಗೆಯಬೇಕು. ಹೀಗೆ ನಿರಂತರವಾಗಿ ಒಂದು ತಿಂಗಳು ಮಾಡಿದಲ್ಲಿ ಮುಖದಲ್ಲಿ ಯಾವುದೇ ರೀತಿಯ ಎಣ್ಣೆ ಜಿಡ್ಡು ಇರಲ್ಲ ಮುಖ ಕಾಂತಿಯುತವಾಗಿ ಬಿಳುಪಾಗಿ ಹೊಳೆಯುತ್ತ ಇರುತ್ತದೆ.

Leave a Comment