ಮನೆಯಲ್ಲಿನ ಇರುವೆಗಳ ಕಾಟದಿಂದ ಮುಕ್ತಿ ದೊರಕಿಸುವ ನಿಂಬೆ

ಮನೆಯಲ್ಲಿ ಇರುವೆಗಳು ಇದ್ರೆ ಕೆಲವರು ಇದರಿಂದ ಬೇಸತ್ತು ಹೋಗಿರುತ್ತಾರೆ ಯಾವುದೇ ಅಡುಗೆಗಳು ಮಾಡಲಿ ಅದಕ್ಕೆ ಇರುವೆಗಳು ಮುತ್ತಿಕೊಂಡಿರುತ್ತವೆ ಅಂತಹ ಸಮಯದಲ್ಲಿ ಅಡುಗೆ ಮಾಡುವಂತ ಈ ಹೆಣ್ಣು ಮಕ್ಕಳಿಗೆ ಕಿರಿ ಕಿರಿ ಅನಿಸುತ್ತದೆ, ಎಣ್ಣೆ ಡಬ್ಬಗಳ ಮೇಲೆ ಹಾಗೂ ತುಪ್ಪದಲ್ಲಿ ಸಕ್ಕರೆ ಬೆಲ್ಲ ಮುಂತಾದ ಪದಾರ್ಥಗಳಲ್ಲಿ ಕಾಣಿಸಿಕೊಂಡರೆ ಅವುಗಳನ್ನು ಬೇರ್ಪಡಿಸೋದು ಕಷ್ಟವಾಗುತ್ತದೆ. ಇಂತಹ ಸಮಸ್ಯೆಗಳಿಂದ ಮುಕ್ತಿ ದೊರಕಿಸುವಂತ ಒಂದಿಷ್ಟು ಸುಲಭ ಮಾರ್ಗಗಳನ್ನು ಈ ಮೂಲಕ ತಿಳಿದುಕೊಳ್ಳೋಣ ಬನ್ನಿ. ನಿಮಗೆ ಈ ಉಪಯುಕ್ತ ವಿಚಾರ ಇಷ್ಟವಾಗಿದ್ದರೆ ನಿಮ್ಮ ಆತ್ಮೀಯರಿಗೂ ಕೂಡ ಶೇರ್ ಮಾಡಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ.

ಇರುವೆಗಳಿಂದ ಮುಕ್ತಿ ಪಡೆಯಲು ಸುಲಭ ಮಾರ್ಗಗಳಿವೆ ಆದ್ರೆ ಅವುಗಳನ್ನು ಹೇಗೆ ಬಳಸಿಕೊಳ್ಳಬೇಕು ಅನ್ನೋದನ್ನ ತಿಳಿಯೋಣ ಮೊದಲನೆಯದಾಗಿ ಮನೆಯಲ್ಲಿ ಇರುವಂತ ಒಂದು ನಿಂಬೆ ಹಾಗೂ ಉಪ್ಪನ್ನು ಬಳಸಿ ಹೌದು ನಿಂಬೆರಸವನ್ನು ತೆಗೆದು ಅದಕ್ಕೆ ಒಂದು ಚಮಚ ಉಪ್ಪು ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಂಡು ಇರುವೆಗಳು ಇರುವ ಜಾಗಕ್ಕೆ ಸಿಂಪಡಿಸಿ. ಕೆಲವೇ ಸಮಯದಲ್ಲಿ ಇರುವೆಗಳು ಇಲ್ಲದಂತಾಗುವುದು.

ಮತ್ತೊಂದು ವಿಧಾನ ಏನು ಅನ್ನೋದನ್ನ ನೋಡುವುದಾದರೆ ಅಡುಗೆಗೆ ಬಳಸುವಂತ ದಾಲ್ಚಿನ್ನಿ ಇರುವೆಗಳನ್ನು ಓಡಿಸಲು ಇದು ಪ್ರಮುಖ ಪಾತ್ರ ವಹಿಸುತ್ತದೆ. ಇರುವೆಗಳು ಇರುವ ಜಾಗಕ್ಕೆ ದಾಲ್ಚಿನಿ ಚಕ್ಕೆ ಹುಡಿಯನ್ನು ರಾತ್ರಿ ಮಲಗುವ ಮೊದಲು ಸಿಂಪಡಿಸಿ, ಬೆಳಿಗ್ಗೆ ನೀವು ಅಡುಗೆ ಮನೆಗೆ ಹೋಗುವಾಗ ಎಲ್ಲಾ ಇರುವೆಗಳು ಮಾಯವಾಗಿರುತ್ತದೆ. ಇದು ಕೂಡ ಪರಿಣಾಮಕಾರಿಯಾಯ್ಗಿರುವಂತ ಮಾರ್ಗ.

ಒಂದು ಚಮಚ ಕರಿಮೆಣಸಿನ ಪುಡಿಯನ್ನು ಒಂದು ಲೋಟ ಬಿಸಿನೀರಿಗೆ ಹಾಕಿಕೊಳ್ಳಿ. ಇರುವೆಗಳನ್ನು ಕಂಡಾಗ ಇದನ್ನು ನೇರವಾಗಿ ಅದರ ಮೇಲೆ ಸಿಂಪಡಿಸಿ. ಈ ಮದ್ದು ಇರುವೆಗಳಿಂದ ಮುಕ್ತಿ ನೀಡುವುದು. ನಿಮಗೆ ಇವುಗಳಲ್ಲಿ ಯಾವುದು ಸುಲಭ ಅನಿಸುತ್ತದೆಯೋ ಅದನ್ನು ಅನುಸರಿಸಿ ಇರುವೆಗಳಿಂದ ಮುಕ್ತಿ ಪಡೆಯಿರಿ.

Leave a Comment