ಯುವಜನತೆಗೆ ನಿಜಕ್ಕೂ ಏನಾಗಿದೆ ಎಂಬುದು ಗೊತ್ತಾಗ್ತಾ ಇಲ್ಲ. ಅದರಲ್ಲೂ ಹೆಚ್ಚಾಗಿ ಯುವತಿಯರು ಆತ್ಮಸ್ಥೈರ್ಯ ಮತ್ತು ಆತ್ಮ ಬಲವನ್ನು ಕಳೆದುಕೊಂಡು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ . ಅದೇನೋ ಗೊತ್ತಿಲ್ಲ ನಮ್ಮ ಕರ್ನಾಟಕದಲ್ಲಿ ಯುವತಿಯರು ಖಿನ್ನತೆಗೆ ಒಳಗಾಗಿ ಜೀವವನ್ನು ಕಳೆದುಕೊಳ್ಳುತ್ತಿರುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಕೂದಲು ಉದುರುವ ಸಮಸ್ಯೆಯಿಂದ ಬೇಸತ್ತು ಪ್ರಾಣವನ್ನೂ ಕಳೆದುಕೊಳ್ಳುತ್ತಿರುವ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.
ಒಂದೇ ತಿಂಗಳಿನಲ್ಲಿ ಇಂತಹದ್ದೇ 2 ಘಟನೆಗಳು ನಡೆದಿವೆ. ಮೈಸೂರಿನಲ್ಲಿ ಕಾವ್ಯಶ್ರೀ ಎಂಬ 22 ವರ್ಷದ ಯುವತಿ ಕೂದಲು ಉದುರುವ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎಂಬ ಕಾರಣಕ್ಕೆ ಜೀವವನ್ನು ಕಳೆದುಕೊಂಡಿದ್ದಳು. ಹಾಗೆ ಬೆಂಗಳೂರಿನ ಅಪಾರ್ಟ್ ಮೆಂಟ್ ಒಂದರಲ್ಲಿ ವಾಸ ಮಾಡುತ್ತಿದ್ದ ಸಾಫ್ಟ್ ವೇರ್ ಇಂಜಿನಿಯರ್ ದೀಪಾ ಎಂಬ 31 ವರ್ಷದ ಮಹಿಳೆ ಕೂಡ ಇದೇ ಒಂದು ರೋಗಕ್ಕೆ ತುತ್ತಾಗಿದ್ದಳು ಮತ್ತು ಎಷ್ಟೇ ಚಿಕಿತ್ಸೆ ಪಡೆದಿದ್ದರು ಕೂದಲು ಉದುರುವ ಸಮಸ್ಯೆ ಕಡಿಮೆಯಾಗದೆ ತಲೆಯಲ್ಲಿರುವ ಕೂದಲೆಲ್ಲ ಉದುರಿ ಹೋಗಿತ್ತು.
ಇದೇ ಕಾರಣಕ್ಕೆ ಮಹಿಳೆ ದೀಪಾ ತನ್ನ ಮಗಳನ್ನು ಕೊಂ’ದು ತಾನೂ ಕೂಡ ನೇ’ಣಿಗೆ ಶರಣಾಗಿ ಜೀವವನ್ನು ಕಳೆದುಕೊಂಡಿದ್ದ ಘಟನೆ ಬೆಳಕಿಗೆ ಬಂದಿತ್ತು. ಇದೀಗ ಇನ್ನೊಬ್ಬಳು ನವವಿವಾಹಿತೆ ಮದುವೆಯಾದ ಒಂದೇ ತಿಂಗಳಿನಲ್ಲಿ ಜೀವವನ್ನು ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಬೀರಿ ಗ್ರಾಮದಲ್ಲಿ ನಡೆದಿದೆ. ಇದೇ ಗ್ರಾಮದ ಮಲ್ಲಿಕಾರ್ಜುನ ಎಂಬುವವರ ಪುತ್ರಿ ಅಂಬಿಕಾ ಮೇ 27 ರಂದು ಮದುವೆಯಾಗಿದ್ದರು. ರೇಕುಳಗಿ ಗ್ರಾಮದ ಲೋಕೇಶ್ ಜೊತೆ ಮೇ 27 ರಂದು ಅಂಬಿಕಾಳ ಮದುವೆ ನಡೆದಿತ್ತು.
ಮದುವೆಯಾದ ಒಂದು ತಿಂಗಳಿನಲ್ಲಿ ಏನಾಯಿತೋ ಏನೋ ಗೊತ್ತಿಲ್ಲ ಇದ್ದಕ್ಕಿದ್ದಂತೆ ಗಂಡನ ಮನೆಯಲ್ಲಿ ಅಂಬಿಕಾ ನೇ’ಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾಳೆ. ವಿಷಯ ತಿಳಿದ ತಕ್ಷಣವೇ ಅಂಬಿಕಾಳ ಪಾಲಕರು ರೇಕುಳಗಿ ಗ್ರಾಮಕ್ಕೆ ತೆರಳಿದ್ದಾರೆ ಮತ್ತು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇದು ಆ’ತ್ಮಹ’ತ್ಯೆಯಲ್ಲ, ತನ್ನ ಮಗಳ ಗಂಡನ ಮನೆಯವರೇ ಮಗಳನ್ನು ಸಾ’ಯಿಸಿದ್ದಾರೆಂದು ಅಂಬಿಕಾಳ ಪೋಷಕರು ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದಾರೆ. ಸತ್ಯಾ ಸಾತ್ಯತೆ ತನಿಖೆ ನಡೆದ ನಂತರವೇ ಹೊರಬೀಳಲಿದೆ. ಒಟ್ಟಿನಲ್ಲಿ ಇತ್ತೀಚೆಗೆ ಯುವತಿಯರು ಸಂಸಾರದ ಜಂಜಾಟಕ್ಕೆ ಬಿದ್ದು ಆತ್ಮಬಲವನ್ನು ಕಳೆದು ಕೊಳ್ಳುತ್ತಿರುವ ಘಟನೆ ಹೆಚ್ಚು ನಡೆಯುತ್ತಿವೆ.