ಎಲೆಕೋಸಿನಿಂದ ಶರೀರಕ್ಕೆ ಎಷ್ಟೊಂದು ಲಾಭಗಳಿವೆ ನೋಡಿ

ಎಲೆಕೋಸನ್ನು ಸಾಮಾನ್ಯವಾಗಿ ಎಲ್ಲರೂ ಅಷ್ಟು ಇಷ್ಟ ಪಡುವುದಿಲ್ಲ. ನಾವು ತಿನ್ನುವ ತರಕಾರಿಗಳಲ್ಲಿ ಎಲೆಕೋಸು ಸಹ ಒಂದಾಗಿದೆ. ಈ ತರಕಾರಿಯನ್ನು ಅಡುಗೆ ಮಾಡಲು ಮಿತವಾಗಿ ಬಳಸಲಾಗುತ್ತದೆ. ಅಲ್ಲದೆ ಎಲ್ಲರೂ ಇದರ ಪರಿಮಳವನ್ನ ಇಷ್ಟ ಪಡುವುದಿಲ್ಲ. ಎಲೆಕೋಸಿನಿಂದ ಪಲ್ಯ, ಸಂಬಾರ್, ಕೋಸಂಬರಿ, ಸ್ನ್ಯಾಕ್ಸ್ ಅಲಂಕಾರಕ್ಕೆ ಹಾಗೂ ಬರ್ಗರ್ ಗಳಂತಹ ತಿಂಡಿಗಳಿಗೆ ಎಲೆಕೋಸನ್ನು ಬಳಸುತ್ತಾರೆ.

ಆದರೆ ಎಲೆಕೋಸಿನ ಎಲೆಗಳನ್ನು ತೆಗೆದು ರಸಮಾಡುವುದು ಅನೇಕರಿಗೆ ಗೋತ್ತಿಲ್ಲ. ಎಲೆಕೋಸಿನ ನೀರು ಆರೋಗ್ಯಕ್ಕೆ ತುಂಬಾ ಉತ್ತಮವಾದದ್ದು ಎಂದು ಅನೇಕ ರೀಸರ್ಜ್ ಗಳಲ್ಲಿ ತಿಳಿದುಬಂದಿದೆ. ಎಲೆಕೋಸಿನಲ್ಲಿ ಅತ್ಯತ್ತಮ ಉತ್ಕರ್ಷಣ ನಿರೋಧಕ ಶಕ್ತಿ ಇರುತ್ತದೆ. ಇದರಲ್ಲಿರುವ ಪಲಿಪೀನಾಲ್ ಗಳು ಅತ್ಯತ್ತಮ ಉತ್ಕರ್ಷಣ ನಿರೋಧಕಗಳನ್ನ ಹೊಂದಿರುತ್ತವೆ. ಇದು ಜೀವಕೋಶಗಳನ್ನ ಅತ್ಯುತ್ತಮವಾಗಿ ಆರೈಕೆ ಮಾಡುತ್ತದೆ. ಇದರಲ್ಲಿ ವಿಟಮಿನ್ ಎ,ಬಿ,ಸಿ,ಕೆ ಅಂಶಗಳು ಸಂಮೃದ್ಧವಾಗಿರುತ್ತವೆ. ಇದಕ್ಕಿಂತ ಹೆಚ್ಚಾಗಿ ಇದರ ಖನಿಜಾಂಶಗಳಾದ ಮೇಗ್ನಷಿಯಂ, ಕ್ಯಾಲ್ಸಿಯಂ ಗಳನ್ನು ಹೊಂದಿರುತ್ತದೆ. ಎಲೆಕೋಸಿನಿಂದ ಸಿಗುವ ಲಾಭಗಳ ಬಗ್ಗೆ ತಿಳಿಯೋಣ.

ಎಲೆಕೋಸಿನಲ್ಲಿ ದೇಹಕ್ಕೆ ತಂಪು ನೀಡುವ ಅಂಶವಿದ್ದು, ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶನ್ನು ನೀಡುತ್ತದೆ. ನಿತ್ಯ ಒಂದು ಲೋಟ ಎಲೆಕೋಸಿನ ರಸವನ್ನು ಸೇವಿಸುವುದರಿಂದ ದೇಹದಲ್ಲಿರುವ ರೋಗ ನೀರೋಧಕ ಅಂಶಗಳ ವಿರುದ್ಧ ಹೋರಾಡುತ್ತದೆ. ಅಲ್ಲದೆ ಸೋಂಕುಗಳನ್ನು ತಡೆಗಟ್ಟುತ್ತದೆ. ಎಲೆಕೋಸು ನಮ್ಮ ದೃಷ್ಠಿ ಸಮಸ್ಯೆಯನ್ನ ನಿವಾರಿಸುತ್ತದೆ. ಎಲೆಕೋಸಿನ ರಸದಿಂದ ಜೀರ್ಣಕ್ರಿಯೆ ಸಾಧ್ಯವಾಗುತ್ತದೆ.

ನಿಯಮಿತವಾಗಿ ಎಲೆಕೋಸಿನ ರಸವನ್ನು ಸೇವಿಸುವುದರಿಂದ ಚರ್ಮದ ಕಾಂತಿ ಹೆಚ್ಚಾಗುತ್ತದೆ. ಮೂಳೆಗಳು ಕ್ಷೀಣದಂತೆ ಹಾಗೂ ದುರ್ಬಲಗೊಳ್ಳದಂತೆ ತಡೆಗಟ್ಟುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಮಧ್ಯಪಾನ ಮಾಡಿದ ಅತ್ಯಧಿಕವಾಗಿ ಮತ್ತೇರುತ್ತದೆ ಇದರ ನೀಷೆ ಇಳಿಸಲು ಎಲೆಕೋಸಿನ ಸೇವನೆ ತುಂಬಾ ಉಪಯುಕ್ತವಾಗಿದೆ.

ಹೊಟ್ಟೆ ಹುಣ್ಣಿಗೆ ಸಹಕಾರಿಯಾಗಿದೆ ಎಲೆಕೋಸು. ಇದರಲ್ಲಿ ಪೈಟ್ರೋನ್ಯೂಟ್ರೀಯಟ್ ಅಂಶ ಅಧಿಕವಾಗಿರುತ್ತದೆ ಹಾಗಾಗಿ ಹೊಟ್ಟೆ ನೋವಿನ ಸಮಸ್ಯೆ ನಿವಾರಣೆ ಯಾಗುತ್ತದೆ. ಎಲೆಕೋಸು ಕ್ಯಾನ್ಸರ್ ಅಪಾಯವನ್ನ ಕಡಿಮೆಮಾಡುತ್ತದೆ. ಅಷ್ಟಕ್ಕೂ ಎಲೆಕೋಸಿನ ನೀರನ್ನು ಹೇಗೆ ತಯಾರಿಸಬಹುದು ಎಂಬ ಅನುಮಾನವಿದ್ದರೆ ಅದಕ್ಕೆ ಸುಲಭ ವಿಧಾನವಿದೆ.

ಒಂದು ಪಾತ್ರೆಯಲ್ಲಿ ಎಲೆಕೋಸಿನ ಚೂರುಗಳನ್ನ, ನೀರನ್ನ, ಒಂದು ಚಿಟಿಕೆ ಉಪ್ಪು ಹಾಕಿ ಮುಚ್ಚಳ ಮುಚ್ಚಿ ಒಂದು ರಾತ್ರಿ ನೆನೆಯಲು ಬಿಡಿ. ಬೆಳಗ್ಗೆ ಅದನ್ನು ಸೋಸಿ ಅದಕ್ಕೆ ನಿಂಬೆರಸ ಬೇರಸಿ ಸೇವಿಸಬಹುದು. ಹೀಗೆ ಎಲೆಕೋಸು ತುಂಬಾ ಉತ್ತಮವಾದ ತರಕಾರಿ ಯಾಗಿದೆ.

Leave a Comment