ಪ್ರತಿದಿನ ಬೆಳಗ್ಗೆ ನೆನೆಸಿದ ಬಾದಾಮಿ ಬೀಜ ತಿನ್ನೋದ್ರಿಂದ ಶರೀರಕ್ಕೆ ಎಷ್ಟೊಂದು ಲಾಭವಿದೆ

ಪ್ರೋಟೀನ್ ಯುಕ್ತ ನೆನಸಿದ ಬಾದಾಮಿಮನ್ನು ಪ್ರತಿದಿನ ಸೇವಿಸಿದರೆ ಅಂದದ ಜೊತೆಗೆ ಉತ್ತಮ ಆರೋಗ್ಯ ವನ್ನು ಪಡೆಯಬಹುದು.ಬಾದಾಮಿ ಬೀಜಗಳು ಬಲವರ್ಧಕ ಆಹಾರವಾಗಿದ್ದು, ಇದರಲ್ಲಿ ಹೆಚ್ಚಾಗಿ ಪೋಷಕಾಂಶಗಳು ಸಮೃದ್ಧ ವಾಗಿರುತ್ತದೆ.

ಬಾದಾಮಿ ಬೀಜವನ್ನು ಮಿಲ್ಕ್ ಶೇಕ್ ರೀತಿಯಲ್ಲಿ ಆಹಾರದೊಂದಿಗೆ ತಿನ್ನುವುದರಿಂದ ಹೇರಳವಾಗಿ ಶರೀರಕ್ಕೆ ಬೇಕಾದ ವೀಟಮಿನ್ಸ್ ಗಳನ್ನು ಉತ್ಪತ್ತಿಯಾಗುತ್ತವೆ.ಅಷ್ಟೇ ಅಲ್ಲದೆ ಬಾದಾಮಿಯಲ್ಲಿ ಶರೀರದಲ್ಲಿನ ವ್ಯರ್ಥ ಪದಾರ್ಥಗಳನ್ನು ತೆಗೆದುಹಾಕುವ ಗುಣವಿದೆ.

ಪ್ರತಿದಿನ 10 ಬಾದಾಮಿಯನ್ನು ವಾರಕ್ಕೆ 5 ಬಾರಿ ತಿಂದರೆ ಹೃದಯ ಸಮಸ್ಯೆಗಳನ್ನು ನಿಯಂತ್ರಿಸಬಹುದು.ಇದರಲ್ಲಿ ವಿಟಮಿನ್ಸ್ ಇ ಅಂಶವಿದ್ದು, ಜೊತೆಗೆ ಪೊಟಾಷಿಯಂ ಅಂಶ ಜಾಸ್ತಿ, ಸೋಡಿಯಂ ಅಂಶ ಕಡಿಮೆ ಹಾಗಾಗಿ ಬಿಪಿ ಸಮಸ್ಯೆ ಕಾಡುವುದಿಲ್ಲ. ಇನ್ನು ರಕ್ತ ಸಂಚಾರಯೂ ಸರಾಗವಾಗಿ ಆಗುತ್ತದೆ.

ಬಾದಾಮಿಯಲ್ಲಿರುವ ಕ್ಯಾಲ್ಸಿಯಂ ಅಂಶ ಶರೀರದ ಮಾಂಸಖಂಡಗಳಿಗೆ ಶಕ್ತಿ ನೀಡುತ್ತದೆ. ಕ್ಯಾಲೋರಿ ಕಡಿಮೆ ಇರುವುದರಿಂದ ಬಾದಾಮಿಯನ್ನು ಪ್ರತಿದಿನ ಸೇವಿಸುವುದರಿಂದ ಸಮಸ್ಯೆಯಿಲ್ಲ. ಮಧುಮೇಹ ಸಮಸ್ಯೆ ಇರುವವರು ಪ್ರತಿದಿನ ಊಟದ ನಂತರ ನಾಲ್ಕು ಬಾದಾಮಿ ಸೇವಿಸಿದರೆ ಉತ್ತಮ ಫಲಿತಾಂಶ ಪಡೆಯಬಹುದು.ಯಾಕೆಂದರೆ ಬಾದಾಮಿಯು ರಕ್ತದಲ್ಲಿ ಇನ್ಸುಲಿನ್ ಅನ್ನು ವೃದ್ಧಿಸುತ್ತದೆ. ನೆನೆಸಿದ ಬಾದಾಮಿಯನ್ನು ಪ್ರತಿದಿನ ಮಕ್ಕಳಿಗೆ ನೀಡಿದರೆ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ, ಅಲ್ಲದೆ ದೊಡ್ಡ ಕರುಳಿನ ಕ್ಯಾನ್ಸರ್ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ.

Leave a Comment