ಪ್ಲಾಂಟೇಶನ್ ಎಲ್ಲರೂ ಮಾಡ್ತಾ ಇರ್ತಾರೆ ಈಗ ಆದ್ರು ಕೆಲವರಿಗೆ ಯವುದರೆ ಪ್ಲಾಂಟೇಶನ್ ಮಾಡಬೇಕು ಹೇಗೆ ಮಾಡಬೇಕು ಅನ್ನೋದರ ಬಗ್ಗೆ ಕೆಲವು ರೀತಿಯ ಗೊಂದಲಗಳು ಇರತ್ತೆ. ಹಾಗೇ ಕೆಲವರಿಗೆ ತಾವು ಶ್ರೀಗಂಧವನ್ನು ಬೆಳೆದರೆ ಒಳ್ಳೆಯದೋ ಅಥವಾ ಮಹೋಗಾನಿ ಬೆಳೆದರೆ ಒಳ್ಳೆಯದ ಎಂದು ಗೊಂದಲ ಆಗತ್ತೆ. ಯಾಕಂದ್ರೆ ಇವೆರಡು ಕೂಡ ಉತ್ತಮ ಲಾಭವನ್ನು ಗಳಿಸಬಹುದಾದ ಬೆಳೆಗಳು. ಹಾಗಾಗಿ ಶ್ರೀಗಂಧ ಮತ್ತು ಮಹೋಗಾನಿ ಯಾವುದು ಬೆಳೆದರೆ ಹೇಗೆ ಏನು ಲಾಭ ಅನ್ನೋ ಡೌಟ್ ಇರತ್ತೆ. ಮಹೋಗಾನಿ ಗೆ ಹೋಲಿಸಿದರೆ ಶ್ರೀಗಂಧದ ಮರ ಚಿಕ್ಕದು. ಹಾಗೆ ಇದು ಕಳ್ಳತನ ಆಗುವುದೂ ಕೂಡಾ ಹೆಚ್ಚು.ಹಾಗಾಗಿ ಇವೆರಡೂ ಬೆಳೆಗಳ ಕುರಿತು ಈ ಲೇಖನದ ಮೂಲಕ ಎರಡರ ಸಕಾರಾತ್ಮಕ ಹಾಗೂ ನಕಾರಾತ್ಮಕ ಎರಡೂ ಗುಣಗಳ ಕುರಿತು ತಿಳಿದುಕೊಳ್ಳೋಣ.
ಮೊದಲು ಶ್ರೀಗಂಧ ಹಾಗೂ ಮೊಹೋಗೋನಿ ಇದರ ಗುಣಗಳನ್ನ ನೋಡೋಣ. ಶ್ರೀಗಂಧದ ಮರಕ್ಕೆ ಮಾರುಕಟ್ಟೆಯಲ್ಲಿ ಬಹಳಷ್ಟು ಬೇಡಿಕೆ ಇದೆ. ಇದರ ಬೆಲೆ ಪ್ರತೀ ಕೆಜಿ ಗೆ 5 ಸಾವಿರದಿಂದ ಆರಂಭಿಸಿ 13 ಸಾವಿರದವರೆಗೂ ಇರತ್ತೆ. ಮೊಹೋಗೋನಿ ಇದು ಗನ್ ಫುಟ್ ಲೆಕ್ಕದಲ್ಲಿ ಮಾರಾಟ ಆಗತ್ತೆ. ಇದು ಮಾರಾಟ ಮಾಡುವಾಗ ಇದರ ಸುತ್ತಳತೆಯನ್ನು ನೋಡಿ ತೆಗೆದುಕೊಳ್ಳುತ್ತಾರೆ. ಶ್ರೀಗಂಧ ಆದರೆ ಕೆಜಿ ಲೆಕ್ಕದಲ್ಲಿ ಹಾಗೂ ಮಹಾಗಾನಿ ಆದ್ರೆ ಗಂ ಫೀಟ್ ಲೆಕ್ಕದಲ್ಲಿ ಮಾರಾಟ ಮಾಡಬೇಕು. ಹಾಗಾಗಿ ಈ ಎರಡೂ ಗಿಡಗಳೂ ಸಹ ಹೆಚ್ಚು ಆದಾಯವನ್ನು ತಂದುಕೊಡುವ ಗಿಡಗಳಾಗಿವೆ.
ಶ್ರೀಗಂಧದಿಂದ ಎಣ್ಣೆ ತೆಗೆಯಲು ಬಳಸುತ್ತಾರೆ, ಗೊಂಬೆಗಳು, ದೇವರ ಮೂರ್ತಿಗಳು, ಅಗರಬತ್ತಿಗಳು, ಸೊಪ್ ಮುಂತಾದವುಗಳಿಗೆ ಶ್ರೀಗಂಧದ ಮರದ ತುಂಡುಗಳನ್ನು ಬಳಸುತ್ತಾರೆ. ಮಹೋಗಾನಿ ಆದರೆ ಇದನ್ನ ಮುಖ್ಯವಾಗಿ ಫರ್ನಿಚರ್ಸ್ ಮಾಡಲು ಹಾಗೂ ಬೋಟ್ ಇಂತಹ ಗಟ್ಟಿ ವಸ್ತುಗಳನ್ನ ತಯಾರಿಸಲು ಈ ಮರವನ್ನ ಬಳಸುತ್ತಾರೆ.
ಇನ್ನು ಇವುಗಳನ್ನು ಎಂತಹ ಜಾಗದಲ್ಲಿ ಬೇಕೆಯಬೇಕು ಅನ್ನೋ ಪ್ರಶ್ನೆ ಬಂದಾಗ. ಶ್ರೀಗಂಧದ ಮರವನ್ನ ಯಾವ ಮಣ್ಣಿನಲ್ಲಿ ಬೇಕಿದ್ರೂ ಬೆಳೆಸಬಹುದು. ಇದು ಎಲ್ಲಾ ರೀತಿಯ ಮಣ್ಣಿಗೂ ಹೊಂದಿಕೊಳ್ಳುತ್ತದೆ. ಆದರೆ ನೀರು ನಿಲ್ಲುವ ಜಾಗದಲ್ಲಿ ಮಾತ್ರ ಇದು ಬೆಳೆಯಲ್ಲ ಹಾಳಾಗತ್ತೆ. ಇನ್ನೂ ಮಹೋಗನಿ ಇದೂ ಕೂಡ ಎಲ್ಲಾ ಮಣ್ಣಿಗೂ ಹೊಂದಿಕೊಳ್ಳುತ್ತೇ ಹಾಗೆ ಇದಕ್ಕೂ ಕೂಡ ನೀರು ನಿಲ್ಲುವ ಜಾಗ ಆಗಬಾರದು ಆದರೆ ನೀರಿನ ಪೂರೈಕೆ ಆಗುತ್ತಾ ಇರಬೇಕು. ಪ್ರತಿ ಎರಡು ದಿನಕ್ಕೆ ನೀರನ್ನು ಕೊಡಬಹುದು. ಆಮೇಲೆ ಶ್ರೀಗಂಧ ಸಾಮಾನ್ಯವಾಗಿ 25 – 45 ಡಿಗ್ರಿ ತಾಪಮಾನ ಇರುವ ಸ್ಥಳಗಳಲ್ಲಿ ಬೆಳೆಯತ್ತೆ. ಮಹೋಗನಿ ಇದು 12 – 45 ಡಿಗ್ರಿ ತಾಪಮಾನದಲ್ಲಿ ಬೆಳೆಯತ್ತೆ ಅಂದರೆ ಶ್ರೀಗಮಧಕ್ಕಿಂತಲು ಕಡಿಮೆ ಬಿಸಿಲು ಇರುವ ಜಾಗದಲ್ಲಿ ಆದರೂ ಇದು ಬೆಳೆಯತ್ತೆ. ಮಲೆನಾಡು ಹಾಗೂ ಬಯಲು ಸೀಮೆಯಲ್ಲೂ ಕೂಡ ಇದನ್ನು ಬೆಳೆಯಬಹುದು.
ಈ ಎರಡೂ ಗಿಡಗಳನ್ನು ಕೊಂಡುಕೊಳ್ಳಬೇಕು, ಕೊಂಡು ಹೋಗಿ ನಂತರ ಬೆಳೆಸಬೇಕು ಅಂದರೆ ಎರಡರ ಬೆಲೆಯೂ ಒಂದೇ ಇರತ್ತೆ. ಅತೀ ಕಡಿಮೆ ಬೆಲೆಗೆ 30 ಅಥವಾ 40 ರೂಪಾಯಿಗೆ ಈ ಗಿಡ ಸಿಗತ್ತೆ. ಕೆಲವು ಜನರು ಮಹೋಗನಿ ಗೆ ಇದನ್ನ ನಾವು ಆಫ್ರಿಕಾ ಇಂದ ಬೀಜಗಳನ್ನ ತಂದು ಮಾಡಿದ್ದೀವಿ ಎಂದು ಹೇಳ್ತಾರೆ ಹಾಗೆ ಶ್ರೀಗಂಧಕ್ಕೂ ಕೂಡ ಸ್ಪ್ರೇ ಮಾಡ್ತಾರೆ ಹಾಗಾಗಿ ನಮಗೆ ನೋಡಿಡಾಗ ಒಳ್ಳೇ ಸುವಾಸನೆ ಇಂದ ಇದೆ ಅಂತ ಅನಿಸಿ ಮಾರುವವರು 200 ರೂಪಾಯಿ ಹೇಳಿದರು ಅಷ್ಟು ಕೊಟ್ಟು ಖರೀದಿ ಮಾಡಿಕೊಂಡು ಬರ್ತೀವಿ. ಗಂಧದ ಸಣ್ಣ ಗಿಡದಲ್ಲಿ ಯಾವುದೇ ಪರಿಮಳ, ಸುವಾಸನೆ ಇರಲ್ಲ ಅನ್ನೋದು ನೆನಪಿರಲಿ.
ಒಂದು ಎಕರೆ ಶ್ರೀಗಂಧವನ್ನ ಬೆಳೆಯುವುದಾದರೆ, 10:10 ರಲ್ಲಿ ಸುಮಾರು 450 ಗಿಡಗಳನ್ನು ಬೆಳೆಸಬಹುದು. ಹಾಗೇ ಇದರ ಜೊತೆಗೆ ಮಧ್ಯದಲ್ಲಿ ಯಾವುದೇ ಹಣ್ಣುಗಳನ್ನು ಸಹ ಬೆಳೆ ಬೆಳೆದು ಲಾಭ ಪಡೆಯಬಹುದು. ಇನ್ನು ಮಹೋಗನಿ ಆದರೆ, ಎಲ್ಲಿ ನಿರ್ವಹಣೆ ಮಾಡುವುದು ಕಷ್ಟ ಅನಿಸಿರತ್ತೆ ಅಥವಾ, ಕೆಲಸಗಾರ ಸಮಸ್ಯೆ ಇದ್ದರೆ, ಇದರ ನಿರ್ವಹಣೆ ಎನೂ ಕಷ್ಟ ಅಲ್ಲ ಬೇಡವಾದ ಜಾಗದಲ್ಲಿ ಹಾಕಿದರೂ ನಡೆಯುತ್ತೆ. ಇದನ್ನು ಕೂಡ 1 ಎಕರೆಗೆ 300 ಗಿಡಗಳನ್ನು ಬೆಳೆಸಬಹುದು. 15 ವರ್ಷದಲ್ಲಿ ಲಾಭ ಬರತ್ತೆ. ಇದನ್ನ 12:15, 15:15, 15:18 ಈ ಅಳತೆಗಳಲ್ಲಿ ನೆಡಬಹುದು. ಇದನ್ನ 10 / 15 ವರ್ಷಕ್ಕೆ ಕಟ್ ಮಾಡಬಹುದು ಹಾಗೆ ಅಡಿಜಿಕ ಲಾಭವನ್ನೂ ಕೂಡಾ ಗಳಿಸಬಹುದು.
ಇನ್ನು ಶ್ರೀಗಂಧ ಹಾಗೂ ಮಹೋಗನಿ ಯ ಸಮಸ್ಯೆಗಳು ಏನು ಅನ್ನೋದನ್ನ ನೋಡೋಣ. ಶ್ರೀಗಂಧಕ್ಕೆ ಎಲ್ಲರೂ ಭಯ ಬೀಳುವುದು ಸಾಮಾನ್ಯವಾಗಿ ಇದರ ರಕ್ಷಣೆಗೆ. ಹೇಗೆ ಇದರ ರಕ್ಷಣೆ ಮಾಡೋದು ಅಂತ? ಕಷ್ಟ ಪಟ್ಟು ಬೆಳೆದಿರೋದನ್ನ ಯಾರೋ ಬಂದು ಕಳ್ಳತನ ಮಾಡ್ತಾರೆ. ಇದಕ್ಕೆ ಆಧುನಿಕ ಟೆಕ್ನಾಲಜಿಯ ಒಂದು ಕ್ಯಾಮರಾ ಬಂದಿದ್ದು ಇದು ಉಷ್ಣತೆಯ ಆಧಾರದ ಮೇಲೆ ಮನುಷ್ಯ ಅಥವಾ ಪ್ರಾಣಿ ಯಾರು ಮರವನ್ನ ಹಾಳು ಮಾಡಿದ್ದು ಅನ್ನೋದನ್ನ ತಿಳಿಸತ್ತೇ. ಇನ್ನೊಂದು ಸಮಸ್ಯೆ ಎಂದರೆ, ಎಲ್ಲ ಮರದ ತುಂಡುಗಳನ್ನು ಕೂಡ ಫಾರೆಸ್ಟ್ ಡಿಪಾರ್ಟ್ಮೆಂಟ್ ಅವರಿಗೆ ಕೊಡಬೇಕಾಗತ್ತೆ. ಹಾಗೆ ಕೊಡಬೇಕಾದರೆ ತುಂಬಾ ಕೆಲಸ ಹಾಗೂ ಜೊತೆಗೆ ಖರುಚು ಕೆದ ಮೇಲಿಂದ ಇರತ್ತೆ. ರೇಂಜ್ ಆಫಿಸರ್ ಊರಿಗೆ ಬರೋದು ಅವರಿಗೆ ಕಾಗದ ಪತ್ರ ತೋರಿಸಬೇಕು ಹೀಗೆ ಹಲವಾರು ಕೆಲಸಗಳು ಇರತ್ತೆ. ಇವೆಲ್ಲ ಬೆಳೆಗಾರರುಗೆ ಒಂದು ರೀತಿಯ ಕಷ್ಟದ ಕೆಲಸವೇ.
ಶ್ರೀಗಂಧದ ಹಾಗೆ ಮಧ್ಯ ಮಧ್ಯ ಬೇರೆ ಬೇರೆ ಬೆಳೆಗಳನ್ನು ಬೆಳೆದ ಹಾಗೇ ಮಹಾಗಾನಿ ಮರದ ಜೊತೆ ಬೇರೆ ಯಾವ ಬೆಳೆಯನ್ನು ಬೆಳೆಯಲು ಆಗಲ್ಲ. ಇದು ಹದಿನೈದು ವರ್ಷಕ್ಕೆ ಕಟ್ ಮಾಡೋಕೆ ಸಿದ್ಧ ಆಗಿರತ್ತೆ. ಇವಿಷ್ಟು ಶ್ರೀಗಂಧ ಹಾಗೂ ಮಹಾಗಾನಿ ಮರಗಳನ್ನ ಬೆಳೆಸುವವರಿಗೆ ಮಾಹಿತಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ. 9986980777