ಮದುವೆಯಾಗಿ ಇನ್ನು ಮಕ್ಕಳಾಗಿಲ್ಲ ಯಾಕೆ? ಜನರ ಪ್ರಶ್ನೆಗೆ ನಟಿ ಶ್ವೇತಾ ಪ್ರಸಾದ್ ಉತ್ತರ

ಶ್ವೇತಾ ಪ್ರಸಾದ್ ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ. ಶ್ರೀರಸ್ತು ಶುಭಮಸ್ತು'ವಿನ ಜಾನ್ಹವಿಯಾಗಿ,ರಾಧಾ ರಮಣ’ದ ರಾಧಾ ಆಗಿ ಕನ್ನಡಿಗರಿಗೆ ತುಂಬಾ ಪರಿಚಯ. ಮೂಲತಃ ಶಿವಮೊಗ್ಗದವರಾದ ಇವರು ಆರ್.ವಿ.ಇಂಜಿನಿಯರಿಂಗ್ ಕಾಲೇಜಿನಲ್ಲಿ ಆರ್ಕಿಟಿಕ್ಚೆರ್ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ನಂತರ ಕನ್ನಡದ ಪ್ರಮುಖ ರೇಡಿಯೋ ಜಾಕಿ ಆರ್.ಜೆ ಪ್ರದೀಪ್‌ರನ್ನು ಮದುವೆಯಾದರು. ಒಂದು ದಿನ ಪೇಸ್‌ಬುಕ್‌ನಲ್ಲಿ ಇವರ ಪೋಟೋ ನೋಡಿದ ನಿರ್ಮಾಪಕಿ ಶೃತಿ ನಾಯ್ಡು ತಮ್ಮ ಮುಂದಿನ ಸೀರಿಯಲ್‌ನಲ್ಲಿ ನಟಿಸಲು ಆಫರ್ ನೀಡಿದರೂ,ಮೊದಮೊದಲು ನಿರಾಕರಿಸಿದರೂ ಪತಿಯ ಪ್ರೋತ್ಸಾಹದಿಂದ ನಟಿಸಿಲು ಒಪ್ಪಿಕೊಂಡರು.

ಜೀ ಕನ್ನಡದಲ್ಲಿ ಪ್ರಸಾರವಾದ ಶ್ರೀರಸ್ತು ಶುಭಮಸ್ತು' ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಪರಿಚಿತರಾದರು. ನಂತರ ನಟಿಸಿದ ಕಲರ್ಸ್ ಕನ್ನಡ ವಾಹಿನಿಯರಾಧಾ ರಮಣ’ ಧಾರಾವಾಹಿ ಇವರನ್ನು ಜನಪ್ರಿಯತೆಯ ಉತ್ತುಂಗಕ್ಕೇರಿಸಿತು. 2017 ರಲ್ಲಿ ಬೆಂಗಳೂರು ಟೈಮ್ಸ್‌ನ ಮೋಸ್ಟ್ ಡಿಸೈರೇಬಲ್ ಮಹಿಳೆ ಪ್ರಶಸ್ತಿ ಪಡೆದಿದ್ದಾರೆ. ಸದಾಕಾಲ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟಿ ಶ್ವೇತಾ ಪ್ರಸಾದ್ ಅವರು ಇತ್ತೀಚೆಗೆ ತೀರಾ ಸುದ್ದಿಯಾಗುತ್ತಿದ್ದಾರೆ. ಈಗ ಇವರು ಜನರ ಅತಿಯಾದ ಪ್ರಶ್ನೆ ಇನ್ನೂ ಮಗುವಾಗದೇ ಇರಲು ಕಾರಣವೇನು? ಎಂಬ ವಿಷಯವನ್ನು ಬಹಿರಂಗ ಪಡಿಸಿ, ಕಟುವಾಗಿ ಉತ್ತರಿಸಿದ್ದಾರೆ ನಟಿ ಶ್ವೇತಾ ಪ್ರಸಾದ್.

ಕಿರುತೆರೆಯ ಖ್ಯಾತ ನಟಿ ಶ್ವೇತಾ ಪ್ರಸಾದ್ ಮತ್ತೆ ಸುದ್ದಿಯಲ್ಲಿದ್ದಾರೆ. ಧಾರಾವಾಹಿ ಲೋಕದಿಂದ ಅಂತರ ಕಾಯ್ದುಕೊಂಡಿರುವ ಶ್ವೇತಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಶ್ವೇತಾ ಸದಾ ಹೊಸ ಹೊಸ ಪೋಸ್ಟ್‌ಗಳನ್ನು ಶೇರ್ ಮಾಡುತ್ತಿರುತ್ತಾರೆ. ಕಿರುತೆರೆಯ ಖ್ಯಾತ ನಟಿ ಶ್ವೇತಾ ಪ್ರಸಾದ್, ತಮ್ಮ ಅಭಿನಯದ ಮೂಲಕವೇ ಜನ ಮನ ಗೆದ್ದವರು, ಕಿರುತೆರೆಯಲ್ಲಿ ಹಲವು ಧಾರವಾಹಿಯಲ್ಲಿ ಅಭಿನಯಿಸುವ ಮೂಲಕ ಮನೆ ಮಾತಾದವರು ಶ್ವೇತಾ ಪ್ರಸಾದ್.

ಇನ್ನು ಸದಾ ಸಮಾಜಿಕ ಜಾಲತಾಣದಲ್ಲಿ ಗ್ಲಾಮರಸ್ ಫೊಟೊಗಳನ್ನು ಹಂಚಿಕೊಳ್ಳುವುದರ ಮೂಲಕ ಶ್ವೇತ ಗಮನ ಸೆಳೆಯುತ್ತಾರೆ. ಶ್ವೇತಾ ಅವ್ರು ಹೇಳಿ ಕೇಳಿ ಚೆಂದುಳ್ಳಿ ಚೆಲುವೆ. ಹಾಗಾಗಿ ಅವರು ಗ್ಲಾಮರ್ ಲುಕ್ ಮಾತ್ರ ಅಂತಲ್ಲ ಯಾವುದೇ ಲುಕ್ ಆದರೂ ಮುದ್ದಾಗಿ ಕಾಣುತ್ತಾರೆ, ಇನ್ನು ಶ್ವೇತಾ ಹೀಗೆ ತಮ್ಮ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಆದರೆ ಶ್ವೇತಾ ಪೋಸ್ಟ್‌ಗೆ ಬಂದಿರುವ ಕಮೆಂಟ್ ಕಂಡು ಗರಂ ಆಗಿದ್ದಾರೆ. ಶ್ವೇತಾ ಇತ್ತೀಚಿಗೆ ಸಿಕ್ಕಾಪಟ್ಟೆ ಬೋಲ್ಡ್ ಆಗಿರುವ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಆದರೆ ಆಕೆಯ ಪೋಸ್ಟ್‌ಗೆ ಮಗು ಬಗ್ಗೆ ಕಾಮೆಂಟ್‌ಗಳು ಬಂದಿವೆ. ಎಲ್ಲಾ ಅಷ್ಟಾಗಿ ಪ್ರತಿಕ್ರಿಯೆ ನೀಡದ ಶ್ವೇತಾ ಸಾಮಾಜಿಕ ಜಾಲತಾಣದಲ್ಲಿ ಗರಂ ಆಗಿದ್ದಾರೆ. ಮಗು ಮಾಡಿಕೊಳ್ಳುವ ಬಗ್ಗೆ ನಟಿ ಶ್ವೇತಾ ಪ್ರಸಾದ್ ಪ್ರತಿಕ್ರಿಯೆ ನೀಡಿದ್ದಾರೆ. ಮಗು ಮಾಡಿಕೊಳ್ಳುವುದು ಬಿಡುವುದು ಮಹಿಳೆಯರ ಆಯ್ಕೆಯಾಗಿದೆ ಎಂದು ಶ್ವೇತಾ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಇತ್ತೀಚಿಗೆ ಸಿಕ್ಕಾಪಟ್ಟೆ ಬೋಲ್ಡ್ ಆಗಿರುವ ಶ್ವೇತಾ ಹಾಟ್ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ಶ್ವೇತಾ ಮಗು ಮಾಡಿಕೊಳ್ಳುವ ವಿಚಾರವಾಗಿ ಸುದ್ದಿಯಾಗಿದ್ದಾರೆ. ಶ್ವೇತಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡಿದಾಗಲೆಲ್ಲಾ ಮಗು ಮಾಡಿಕೊಳ್ಳುವ ವಿಚಾರವಾಗಿ ಕಾಮೆಂಟ್‌ಗಳು ಹರಿದುಬರುತ್ತಿತ್ತು. ಆದರೆ ಈ ಬಗ್ಗೆ ಶ್ವೇತಾ ಯಾವುತ್ತು ಪ್ರತಿಕ್ರಿಯೆ ನೀಡಿರಲಿಲ್ಲ. ಆದರೀಗ ಸಾಮಾಜಿಕ ಜಾಲತಾಣದಲ್ಲಿ ಗರಂ ಆಗಿದ್ದಾರೆ.

ಮಗು ಮಾಡಿಕೊಳ್ಳುವುದು ಬಿಡುವುದು ಮಹಿಳೆಯರ ಆಯ್ಕೆಯಾಗಿದೆ ಎಂದು ಶ್ವೇತಾ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ‘ನನಗಿನ್ನು ಮಗುವಾಗದೇ ಇರಲು ಕಾರಣವೇನು? ನನ್ನ ವೈಯಕ್ತಿಕ ವಿಚಾರ ನಿಮಗೆ ಸಂಬಂಧಿಸಿದಲ್ಲ. ಮಗುವನ್ನು ಪಡೆಯುವುದು ಮಹಿಳೆಯ ಆಯ್ಕೆಯಾಗಿದೆ. ಯಾವಾಗ ಎಲ್ಲಿ, ಹೇಗೆ ಎನ್ನುವುದನ್ನು ಅವಳಿಗೆ ಬಿಟ್ಟುಬಿಡಿ. ಓದು, ಮದುವೆ, ಮಗು, ಸಾಯುವುದು ಅಂತ ಏನು ಸೂತ್ರವಿಲ್ಲ’ ಎಂದಿದ್ದಾರೆ. ‘ಮಕ್ಕಳನ್ನು ಹೊಂದಿದ ಮಹಿಳಯರ ಬಗ್ಗೆ ಹೇಳುವುದಾದರೇ, ಕುಟುಂಬದವರ ಒತ್ತಡದಿಂದ, ಸಮಾಜ ಕೇಳುತ್ತಿದೆ ಎಂದು

ಅಮ್ಮ ಹೇಳಿದರು ಎನ್ನುವ ಕಾರಣಕ್ಕೆ. ಇವರೆಲ್ಲರಿಂದ ಒತ್ತಡವಿದೆ ಎನ್ನುವ ಕಾರಣಕ್ಕೆ ಎಂದು ಹೇಳುತ್ತಾರೆ’ ಎಂದು ಶ್ವೇತಾ ಹೇಳಿದ್ದಾರೆ. ಇದು ತುಂಬಾ ವೈಯಕ್ತಿಕ ಮತ್ತು ಮಗುವನ್ನು ಮಾಡಿಕೊಳ್ಳಲು ನಿರ್ಧರಿಸುವ ಪಯಣ ಹೆಣ್ಣಿಗೆ ತುಂಬಾ ಸುಂದರವಾದುದ್ದು. ಮಗುವನ್ನು ಪಡೆಯಲು ಮಹಿಳೆೇ ನಿರ್ಧರಿಸಿ ಪಡೆಯಬೇಕು. ಅವಳನ್ನು ನೀವು ನಿರ್ಧರಿಸಬೇಡಿ, ಅವಳ ನಿರ್ಧಾರವನ್ನು ಪ್ರಶ್ನೆ ಮಾಡದಿರಿ. ಇದನ್ನು ಪ್ರಶ್ನೆ ಮಾಡಲು ಯಾರಿಗೂ ಅಧಿಕಾರವಿಲ್ಲ ಎಂದು ಹೇಳಿದ್ದಾರೆ.

Leave a Comment