ಕನ್ನಡ ,ತೆಲುಗು, ಹಿಂದಿ, ತಮಿಳು ಹಾಗೂ ಮಲೆಯಾಳಂ ಚಿತ್ರಗಳಲ್ಲಿ ತನ್ನ ಅದ್ಬುತ ನಟನೆಯ ಮೂಲಕ ಮನೆಮಾತಾದ ನಟಿ ಈಕೆ. ಇವರು 1970 ಸೆಪ್ಟೆಂಬರ್ 15 ಅಂದು ತಮಿಳು ಕುಟುಂಬದಲ್ಲಿ ಜನನ ಆಗಿತ್ತು. ತಂದೆ ಕೃಷ್ಣನ್ ಹಾಗೂ ತಾಯಿಯ ಹೆಸರು ಮಾಯ ಇವರು ಭರತನಾಟ್ಯ, ಕುಚುಪುಡಿ ಹೀಗೆ ಹಲವಾರು ನೃತ್ಯಗಳ ಅಭ್ಯಾಸವನ್ನು ಮಾಡಿ, ಹಲವಾರು ಹಂತದ ಪ್ರದರ್ಶನವನ್ನು ಕೂಡ ನೀಡಿದ್ದಾರೆ. ಇವರು ಸುಮಾರು 200 ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು ಬಾಹುಬಲಿ ಸಿನಿಮಾ ಅಲ್ಲಿ ಶಿವ ಗಾಮಿ ದೇವಿ ಪಾತ್ರಕ್ಕೆ ಸಾರ್ವತ್ರಿಕ ಮೆಚ್ಚುಗೆ ಗಳಿಸಿದ್ದಾರೆ. ಬಾಹುಬಲಿ ಸಿನಿಮಾ ಕೂಡ ಅತಿ ಹೆಚ್ಚು ಗಳಿಕೆಯ ಚಿತ್ರ ಅಲ್ಲಿ ಒಂದು ಹಾಗೂ ಈಕೆಗೆ ಹಲವಾರು ಪ್ರಶಸ್ತಿ ಕೂಡ ಲಭಿಸಿದೆ ಈಕೆಗೆ.
ಇವರು ತನ್ನ 13 ವಯಸ್ಸಿನಲ್ಲಿ ಮಲಯಾಳಂ ನ ನೇರಂ ಪಲ್ಲಂಬಲ್ ಎನ್ನುವ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಆಗುತ್ತಾರೆ. ಅವರು ತಮ್ಮ ನಟನ ಶೈಲಿಯಿಂದ ಜನರ ಮೆಚ್ಚುಗೆ ಪಡೆಯುತ್ತಾರೆ. ಹೀಗೆಯೇ ಕನ್ನಡ ರಂಗಕ್ಕೂ ಕೂಡ ಪಾದಾರ್ಪಣೆ ಮಾಡುತ್ತಾರೆ ಅಲ್ಲಿಯೂ ಕೂಡ ಸಾಕಷ್ಟು ಸಿನಿಮಾ ಅಲ್ಲಿ ನಟನೆ ಮಾಡಿದ್ದಾರೆ. ಶಕ್ತಿ ,ಕೃಷ್ಣ ರುಕ್ಮಿಣಿ, ಗಡಿಬಿಡಿ ಗಂಡ, ಮಾಂಗಲ್ಯ ತಂತು ನಾನೇನ, ಆಂದ್ರ ಹೆಂಡ್ತಿ, ಸ್ನೇಹ, ಯಾರೇ ನೀ ಅಭಿಮಾನಿ, ಏಕಾಂಗಿ, ರಕ್ತ ಕಣ್ಣೀರು ಹೇಗೆ ಹಲವಾರು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಇನ್ನೂ ರಕ್ತ ಕಣ್ಣೀರು ಚಿತ್ರದ ಅವರ ನಟನೆ ಇಂದ ಬೇರೆ ಬೇರೆ ಪಾತ್ರವನ್ನು ಕೂಡ ಮಾಡುವರು ಎನ್ನುವ ಮೇರೆಗೆ ಎಲ್ಲ ಕಡೆ ಅವರ ಬೇಡಿಕೆ ಹೆಚ್ಚಿಗೆ ಆಯಿತ್ತು.
ಸ್ವಲ್ಪ ವಿರಾಮದ ಬಳಿಕ ಸುದೀಪ್ ತಾಯಿಯ ಪಾತ್ರದ ಮೂಲಕ ರವಿಚಂದ್ರನ್ ಹೆಂಡ್ತಿ ಆಗಿ ಮಾಣಿಕ್ಯ ಚಿತ್ರದಲ್ಲಿ ಪುನಃ ಕಾಣಿಸಿಕೊಳ್ಳುತ್ತಾರೆ ಹಾಗೂ ಅಂಜನಿ ಪುತ್ರ ಸಿನಿಮಾದಲ್ಲಿ ಕೂಡ ಪೋಷಕ ನಟಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಎಲ್ಲಾ ಚಿತ್ರರಂಗದಲ್ಲಿ ಬೇಕಾದಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ಸಿನಿಮಾ ಸಂಸ್ಥೆಯಲ್ಲಿ ಬಹು ಬೇಡಿಕೆಯ ನಟಿ ಆಗಿದಾಗಲ್ಲೇ ರಮ್ಯ ಅವರು ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಅದು ಅವರ ಬಗ್ಗೆ ನಾನಾ ತರಹದ ಊಹಾಪೋಹಗಳು ಹರಿದಾಡುತ್ತಿದ್ದ ಸಮಯದಲ್ಲಿ ಅದು ತಮ್ಮ 33 ನೇ ವಯಸ್ಸಿನಲ್ಲಿ 2003 ರಲ್ಲಿ ತೆಲುಗು ನಿರ್ದೇಶಕ ಕೃಷ್ಣ ವಂಶಿ ಅವರ ಜೊತೆ ವಿವಾಹ ಬಂಧನಕ್ಕೆ ಒಳಗಾಗುತ್ತಾರೆ.
ಕೃಷ್ಣ ವಂಶಿ ಅವರು ಕೂಡ ಬಹಳ ಹೆಸರುವಾಸಿ ನಿರ್ದೇಶಕ ಆಗಿದ್ದು ಗುಲಾಬಿ , ಖಡ್ಗಂ , ಸಿಂಧೂರಂ, ಅಂತಃಪುರ, ಮುರಾರಿ ಮುಂತಾದ ಸಾಕಷ್ಟು ಸದ್ದು ಮಾಡಿದ ಸಿನಿಮಾಗಳು ಇವರದ್ದಾಗಿವೆ. ರಮ್ಯಾ ಹಾಗೂ ಕೃಷ್ಣನ್ ಅವರು ಕೆಲವೊಂದು ಸಿನಿಮಾ ಅಲ್ಲಿ ಒಟ್ಟಿಗೆ ಕೆಲಸ ಮಾಡುವ ಸಂದರ್ಭದಲ್ಲಿ ಪರಿಚಯ ಆಗಿದ್ದು , ಸ್ನೇಹವಾಗಿ , ಸ್ನೇಹ ಪ್ರೀತಿಯಾಗಿ ಕೊನೆಗೆ ದಾಂಪತ್ಯದ ಜೀವನಕ್ಕೆ ನಾಂದಿ ಆಗಿತ್ತು. ಇವರಿಬ್ಬರಿಗೆ ಒಬ್ಬ ಮಗ ಇದ್ದಾನೆ.
ಇನ್ನೂ ಇತ್ತೀಚಿನ ದಿನಗಳಲ್ಲಿ ಸಿನಿಮಾ ರಂಗದಲ್ಲಿ ಇರುವವರ ವಿಚ್ಛೇದನ ಪ್ರಕರಣ ಸಾಮಾನ್ಯವಾಗಿ ಹೋಗಿದೆ. ಆದರೆ ಇವರಿಬ್ಬರು ತುಂಬಾ ಅನೋನ್ಯತೆ ಇಂದ ಬಾಳುತ್ತಿದ್ದರು ಹಾಗೂ ಯಾವುದೇ ಚರ್ಚೆಗೆ ಕೂಡ ಸಿಕ್ಕಿ ಕೊಳ್ಳದ ಜೋಡಿ ಇವರದ್ದಾಗಿತ್ತು. ಹಾಗೂ ಇವರು ಇನ್ನೊಬ್ಬರಿಗೆ ಮಾದರಿ ಆಗಿರುವ ಹಾಗೆ ಜೀವನ ಸಾಗಿಸುತ್ತಾ ಇದ್ದರು.
ಇತ್ತೀಚೆಗೆ ಕೆಲವೊಂದು ಸುದ್ದಿ ವಾಹಿನಿಗಳ ಮೂಲದಿಂದ ಹೊರ ಬಿದ್ದ ವಿಷಯವೇನಪ್ಪಾ ಅಂದ್ರೇ , ಇವರಿಬ್ಬರು ಕೂಡ ಎಲ್ಲರಂತೆ ದೂರ ಆಗುತ ಇದ್ದಾರೆ ಇವರ ನಡುವೆಯೂ ಕೂಡ ಭಿನ್ನಾಭಿಪ್ರಾಯ ಹಾಗೂ ಬಿರುಕುಗಳು ಉಂಟಾಗಿವೆ ಎಂದು ಪ್ರಚಾರ ಆಗಿದೆ. ಕೆಲವೊಂದು ವೈಯಕ್ತಿಕ ಕಾರಣ ಹಾಗೂ ರಮ್ಯಾ ಅವರು ತನ್ನ ಜೀವನದಲ್ಲಿ ತುಂಬಾನೇ ಬಿಝಿ ಆಗಿದ್ದಾರೆ ಹಲವಾರು ಅವಕಾಶ ಅವರನ್ನು ಹುಡುಕಿ ಬರುತ್ತಾನೆ ಇದ್ದು ಇವರು ಒಂದು ಸಿನಿಮಾಕ್ಕೆ ಸುಮಾರು ಒಂದು ಕೋಟಿ ಸಂಭಾವನೆಯನ್ನು ಪಡೆಯುತ್ತಾ ಇದ್ದಾರೆ.
ಅಷ್ಟೇ ಅಲ್ಲದೆ ರಮ್ಯ ಕೃಷ್ಣ ಅವರಿಗೆ ವಯಸ್ಸು 50 ಆಗಿದರು ಕೂಡ ಇವರು ಯಾವುದೇ ಹೀರೋಯಿನ್ ಗೂ ಕೂಡ ಕಮ್ಮಿ ಇಲ್ಲ ಅಷ್ಟು ಚೆನ್ನಾಗಿದ್ದು ಜೊತೆಗೆ ಫಿಟ್ ಅಂಡ್ ಫೈನ್ ಆಗಿದ್ದಾರೆ.ಜೊತೆಗೆ ಅದ್ಬುತ ನಟನೆ ಇವರದ್ದು ಇನ್ನೂ ಇವರ ಪತಿ ನಾಲ್ಕು ವರ್ಷಗಳ ಕಾಲ ಸಿನಿಮಾ ಇಂದ ದೂರ ಇದ್ದರು. ಈಗ ಹೊಸದಾಗಿ ಸಿನಿಮಾ ನಿರ್ದೇಶನಕ್ಕೆ ಇಳಿದಿದ್ದಾರೆ ಇವರಿಬ್ಬರು ಸುಂದರ ಹಾಗೂ ಅನ್ಯೋನ್ಯತೆ ಜೀವನ ಇದ್ದರು ಕೂಡ ಇಂದು ಇಬ್ಬರ ಸಹಮತದ ಮೇರೆಗೆ ಸದ್ಯದಲ್ಲೇ ವಿಚ್ಚೇದನ ಪಡೆಯುತ್ತಾ ಇದ್ದರೆ. ಮಗ ಜೀವನದ ಬಗ್ಗೆ ಏನು ಯೋಚಿಸಿದ್ದಾರೆ ಗೊತ್ತಿಲ್ಲ ಆದರೂ ಇವರಿಬ್ಬರೂ ಮಾದರಿ ದಂಪತಿಗಳು ಎನ್ನುವುದರಲ್ಲಿ ಎರಡು ಮಾತಿಲ್ಲ .