ದಕ್ಷಿಣ ಭಾರತದ ರಂಭೆಯಂತಿದ್ದ ನಟಿ ರಂಭಾ ಸದ್ಯ ಸಿನಿಮಾ ಇಂಡಸ್ಟ್ರಿಯಿಂದ ದೂರವಿದ್ದಾರೆ. ತಮಿಳು, ತೆಲುಗು, ಕನ್ನಡ ಸೇರಿದಂತೆ ಬಹುಭಾಷೆಯಲ್ಲಿ ನಟಿಸಿದ್ದ ರಂಭಾ ಈಗ ಮೂರನೇ ಮಗುವಿಗೆ ತಾಯಿಯಾಗಿದ್ದಾರೆ. ಮೂರನೇ ಕಂದಮ್ಮನಿಗೆ ಜನ್ಮ ನೀಡುತ್ತಿರುವ ರಂಭಾ ಅವರ ಮನೆಯಲ್ಲಿ ಶಾಸ್ತ್ರೋಕ್ತವಾಗಿ ಸೀಮಂತ ಶಾಸ್ತ್ರ ಮಾಡಲಾಯಿತು. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ದಕ್ಷಿಣ ಭಾರತದ ಖ್ಯಾತ ನಟಿ ರಂಭಾ ಅವರು 5 ಜೂನ್ 1976 ರಂದು ವಿಜಯವಾಡದಲ್ಲಿ ಜನಿಸಿದರು. ಇವರ ತಂದೆಯ ಹೆಸರು ವೆಂಕಟೇಶ್ವರ ರಾವ್ ಮತ್ತು ತಾಯಿ ಹೆಸರು ಉಷಾ ರಾಣಿ ರಾವ್. ಇವರಿಗೆ ಶ್ರೀನಿವಾಸ್ ರಾವ್ ಎಂಬ ಸಹೋದರ ಕೂಡ ಇದ್ದಾರೆ. ಇನ್ನೂ ರಂಭಾ ಅವರು ತೆಲುಗು ತಮಿಳು ಮಲಯಾಳಂ ಕನ್ನಡ ಹಿಂದಿ ಬೆಂಗಾಲಿ ಭೋಜ್ ಪುರಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ ಎಂದು ಹೇಳಬಹುದು. ರಂಭಾ ಅವರು 90 ಮತ್ತು 2000ರ ಸಮಯದಲ್ಲಿ ಟಾಪ್ ಲೀಡಿಂಗ್ ನಟಿಯಾಗಿ ದಕ್ಷಿಣ ಭಾರತದಲ್ಲಿ ಮಿಂಚಿದವರು.
ಇನ್ನೂ ರಂಭಾ ಅವರು ತೆಲುಗಿನಲ್ಲಿ 1992 ರಲ್ಲಿ ಬಿಡುಗಡೆಯಾದ ಆ ಒಕಟಿ ಅಡಕ್ಕು ಎನ್ನುವ ಚಿತ್ರದ ಮೂಲಕ ತಮ್ಮ ಸಿನಿಮಾ ಪಯಣವನ್ನು ಶುರುಮಾಡಿಕೊಂಡರು. ಇನ್ನೂ ನಮ್ಮ ಕನ್ನಡದಲ್ಲಿ ನೋಡಿದರೆ ಸರ್ವರ್ ಸೋಮಣ್ಣ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದರು. ಇದಾದ ಮೇಲೆ ಕೆಂಪಯ್ಯ ಐಪಿಎಸ್, ಓ ಪ್ರೇಮವೇ, ಪಾಂಚಾಲಿ, ಭಾವ ಬಾಮೈದ, ಸಾಹುಕಾರ, ಪಾಂಡುರಂಗವಿಠಲ, ಗಂಡುಗಲಿ ಕುಮಾರರಾಮ, ಅನಾಥರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರು ಎಲ್ಲಾ ಭಾಷೆಗಳಲ್ಲಿ ಸೇರಿ ಸುಮಾರು 100 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಎಂದು ಹೇಳಬಹುದು. ಇದರ ಜೊತೆಗೆ ತಮಿಳು ಮತ್ತು ತೆಲುಗಿನಲ್ಲಿ ಸಾಕಷ್ಟು ರಿಯಾಲಿಟಿ ಶೋಗಳಿಗೆ ಜಡ್ಜ್ ಕೂಡ ಆಗಿದ್ದರು.
ಇನ್ನೂ ರಂಭಾ ಅವರು ಇಂದ್ರಕುಮಾರ್ ಪತ್ಮನಾಥನ್ ಎನ್ನುವವರನ್ನು ತಿರುಮಲದಲ್ಲಿರುವ ಕರ್ನಾಟಕ ಕಲ್ಯಾಣ ಮಂಟಪಂನಲ್ಲಿ ವಿವಾಹ ಮಾಡಿಕೊಂಡಿದ್ದಾರೆ. ಇನ್ನೂ ಇಂದ್ರಕುಮಾರ್ ಪತ್ಮನಾಥನ್ ಅವರು ತಮಿಳುನಾಡಿನ ರಾಜ್ಯಕ್ಕೆ ಸೇರಿದ್ದು ದೊಡ್ಡ ಬಿಸಿನೆಸ್ ಮನ್ ಆಗಿದ್ದಾರೆ. ಇಂದ್ರಕುಮಾರ್ ಎಂಬುವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ರಂಭಾ ನಂತರ ನ್ಯೂಯಾರ್ಕ್ ನ ಟೊರೊಂಟಿದಲ್ಲಿ ನೆಲೆಸಿದ್ದರು. ವರ್ಷಗಳು ಕಳೆದಂತೆ ರಂಭಾ ಸಂಸಾರದಲ್ಲಿ ಮನಸ್ತಾಪ ಉಂಟಾಗಿ ಗಂಡ ಮತ್ತು ಹೆಂಡತಿಯ ಮಧ್ಯೆ ಕಲಹ ಉಂಟಾಯಿತು.
ಟೊರೊಂಟಾದಿಂದ ಭಾರತಕ್ಕೆ ವಾಪಸ್ ಬಂದ ರಂಭಾ ಪತಿಬೇಕು ಎಂದು ಹೇಳಿ ಕೋರ್ಟ್ ಮೆಟ್ಟಿಲೇರಿದ್ದರು. ಇನ್ನೂ ರಂಭಾ ಅವರಿಗೆ ಮೊದಲು ಇಬ್ಬರು ಹೆಣ್ಣು ಮಕ್ಕಳು ಹುಟ್ಟಿದರು. ಅವರ ಹೆಸರುಗಳು ಪದ್ಮನಾಥನ್ ಸಾಂಬಾ ಮತ್ತು ಲಾವಣ್ಯ ಪದ್ಮನಾಥನ್ ಎಂದು. ಇದಾದ ಮೇಲೆ ರಂಭಾ ಅವರು ತಮ್ಮ ಮಗನಿಗೆ ಜನ್ಮವನ್ನು ನೀಡಿದ್ದಾರೆ. ತಮ್ಮ ಮಗನಿಗೆ ಶಿವಿನ್ ಎನ್ನುವ ಹೆಸರನ್ನು ಇಟ್ಟಿದ್ದಾರೆ. ನಂತರ ಒಂದಾದ ದಂಪತಿಯ ಬಾಳಲ್ಲಿ ಈಗ ಮತ್ತೊಂದು ಪುಟ್ಟ ಜೀವ ಬರುತ್ತಿದೆ. ಹೀಗೆ ಏಳು-ಬೀಳು ಕಂಡ ರಂಭಾ ಜೀವನದ ಸಂತೋಷದ ಕ್ಷಣ ಈ ಸೀಮಂತ ಕಾರ್ಯಕ್ರಮ.
ಟೊರೊಂಟಾದಲ್ಲಿರುವ ತಮ್ಮ ನಿವಾಸದಲ್ಲಿ ರಂಭಾ ಅವರ ಸೀಮಂತ ಕಾರ್ಯಕ್ರಮ ಸಂಪ್ರದಾಯವಾಗಿ, ಅದ್ಧೂರಿಯಾಗಿ ನಡೆದಿದೆ. ಈ ಫೋಟೋಗಳನ್ನ ಖುದ್ದು ರಂಭಾ ಅವರೇ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಗಂಡ-ಮಕ್ಕಳು ಹಾಗೂ ಬಂಧು-ಬಳಗದವರು ಈ ಕಾಯಕ್ರಮದಲ್ಲಿ ಭಾಗಿಯಾಗಿದ್ದರು. ಗರ್ಭೀಣಿಯಾಗಿದ್ದರೂ ಸಂಬಂಧಿಕರ ಜೊತೆಯಲ್ಲಿ ನೃತ್ಯ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ ನಟಿ ರಂಭಾ. ತೆರೆಯಿಂದ ಮರೆಯಾಗಿ ವರ್ಷಗಳ ಕಾಲ ಆಗಿದೆ. ರಂಭಾ ಅವರ ನಟನೆ, ಡ್ಯಾನ್ಸ್ ಎಲ್ಲವನ್ನ ಅಭಿಮಾನಿಗಳು ಮಿಸ್ ಮಾಡಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ರಂಭಾ ಅವರ ಈ ಫೋಟೋಗಳು ಅವರ ಫ್ಯಾನ್ಸ್ ಗೆ ಸಿಕ್ಕಾಪಟ್ಟೆ ಖುಷಿ ನೀಡಿದೆ.
ರಂಭಾ ಅವರ ಸೀಮಂತ ಕಾರ್ಯಕ್ರಮದಲ್ಲಿ ಅವರ ಪತಿ ಇಂದ್ರಕುಮಾರ್ ಮತ್ತು ಇಬ್ಬರು ಮಕ್ಕಳು ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ರಂಭಾ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, 7 ವರ್ಷದ ಲಾನ್ಯ ಮತ್ತು 3 ವರ್ಷದ ಸಾಶಾ ತಮ್ಮ ತಂದೆ-ತಾಯಿಯ ಜೊತೆ ಮಿಂಚಿದರು. ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಕನ್ನಡ ಸಿನಿಮಾದಲ್ಲಿ ರಂಭಾ ನಟಿಸಿದ್ದರು. ‘ಸರ್ವರ್ ಸೋಮಣ್ಣ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ದ ರಂಭಾ ‘ಕೆಂಪಯ್ಯ ಐಪಿಎಸ್’, ‘ಓ ಪ್ರೇಮವೇ’, ಬಾವ ಬಾಮೈದ, ಸಾಹುಕಾರ, ಪಾಂಡುರಂಗವಿಠಲ, ಗಂಡುಗಲಿ ಕುಮಾರ ರಾಮ, ಹಾಗೂ ಕೊನೆಯದಾಗಿ ಅನಾಥರು ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ರಂಭಾ ಅವರು ತಮ್ಮ ಮೂರನೆಯ ಮಗುವಿಗೆ ಮಾಡಿಕೊಂಡ ಸೀಮಂತ ಶಾಸ್ತ್ರದ ಕೆಲ ಸುಂದರ ಕ್ಷಣಗಳನ್ನು ನೀವು ಇಲ್ಲಿ ನೋಡಬಹುದು.