2010ರಿಂದಲೂ ಪ್ರಣಿತಾ ಸುಭಾಷ್ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡದ ‘ಪೊರ್ಕಿ’ ಸಿನಿಮಾ ಮೂಲಕ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು ಬಹುಭಾಷಾ ನಟಿಯಾಗಿ ಹೆಸರು ಮಾಡಿದ್ದಾರೆ. ದಕ್ಷಿಣ ಚಿತ್ರರಂಗದ ಸ್ಟಾರ್ ನಟಿ ಪ್ರಣಿತಾ ಸುಭಾಷ್ ಅವರು ಇತ್ತೀಚೆಗೆ ತಾನು ತಾಯಿಯಾಗುತ್ತಿರುವ ಸುದ್ದಿಯನ್ನು ವಿಭಿನ್ನವಾಗಿ ಅಭಿಮಾನಿಗಳಿಗೆ ತಿಳಿಸಿದ್ದರು. ಅಲ್ಲದೇ ಈ ಬಗ್ಗೆ ಆಗಾಗ ಅಭಿಮಾನಿಗಳ ಜೊತೆ ಫೋಟೋ ಸಹ ಹಂಚಿಕೊಳ್ಳುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ಆಗ್ಗಾಗ್ಗೆ ಬೇಬಿ ಬಂಪ್ ಪೋಟೋಗಳನ್ನು ಹಂಚಿಕೊಳ್ಳುತ್ತಿದ್ದರು. ಆದರೆ ಮೊನ್ನೆ ಶುಕ್ರವಾರ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಶುಕ್ರವಾರದಂದು ಮನೆಗೆ ಪುಟ್ಟ ಮಹಾಲಕ್ಷ್ಮಿಯ ಆಗಮನವಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ ಬಾಲಿವುಡ್ನಲ್ಲಿ ಸಹ ಅವರು ಅಭಿನಯಿಸಿ, ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.ಪ್ರಣಿತಾ ಸುಭಾಷ್ ಅವರಿಗೆ ಹೆಣ್ಣು ಮಗು ಜನಿಸಿರುವ ವಿಚಾರವನ್ನು ಅವರೇ ಸ್ವತಃ ಇನ್ಸ್ಟಾಗ್ರಾಂ ಮಗುವಿನೊಂದಿಗಿನ ಫೋಟೋ ಹಂಚಿಕೊಂಡಿದ್ದಾರೆ. ಅಲ್ಲದೇ ಜೊತೆಗೆ ಅವರ ಕುಟುಬಂಸ್ಥರು ಇದ್ದರು. ಇದೀಗ ವಿಡಿಯೋ ಹಂಚಿಕೊಂಡಿದ್ದು, ಆ ವಿಡಿಯೋ ಮೂಲಕ ಮಗುವಿನ ಮುಖ ರಿವೀಲ್ ಮಾಡಿದ್ದಾರೆ.
ಇದೀಗ ಅವರು ತಾವು ಗರ್ಭಿಣಿಯಾಗಿದ್ದ ಸಂದರ್ಭದಿಂದ ಹಿಡಿದು ಹೆರಿಗೆಯ ತನಕ ವಿಡಿಯೋವೊಂದನ್ನು ಮಾಡಿ ಹಂಚಿಕೊಂಡಿದ್ದಾರೆ. ಅಲ್ಲದೇ ಮಗುವಿನ ಮುಖವನ್ನು ಸಹ ರಿವೀಲ್ ಮಾಡಿದ್ದಾರೆ. ತಾನು ಪ್ರೆಗ್ನೆಂಟ್ ಎಂಬ ಸುದ್ದಿಯನ್ನು ಪ್ರಣಿತಾ ಸುಭಾಷ್ ತಿಳಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಪತಿ ಜೊತೆಗಿನ ಸ್ಪೆಷಲ್ ಫೋಟೋವನ್ನು ಪೋಸ್ಟ್ ಮಾಡುವ ಮೂಲಕ ಈ ಸಿಹಿ ಸುದ್ದಿಯನ್ನು ಅವರು ಹಂಚಿಕೊಂಡಿದ್ದರು.
2021ರ ಮೇ ತಿಂಗಳಲ್ಲಿ ಉದ್ಯಮಿ ನಿತಿನ್ ರಾಜು ಜೊತೆ ಪ್ರಣಿತಾ ಹಸೆಮಣೆ ಏರಿದ್ದರು.
ಕೊರೊನಾ ಮುಂಜಾಗ್ರತೆ ಕ್ರಮವಾಗಿ ಕೇವಲ ಆಪ್ತರ ಸಮ್ಮುಖದಲ್ಲಿ ಅವರ ಮದುವೆ ಸಮಾರಂಭ ನಡೆದಿತ್ತು. ಅವರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್ ಆಗಿತ್ತು. ಸ್ಯಾಂಡಲ್‌ವುಡ್ ಬ್ಯೂಟಿ ಪ್ರಣಿತಾ ಸುಭಾಷ್ ಮುದ್ದಾದ ಹೆಣ್ಣು ಮುಗುವಿಗೆ ತಾಯಿಯಾಗಿದ್ದಾರೆ. ಇತ್ತೀಚೆಗಷ್ಟೇ ಮಗುವಿನ ಫೋಟೋ ಕೂಡ ಹಂಚಿಕೊಂಡಿದ್ದರು. ಇದೀಗ ತಾಯಿಯಿಂದಲೇ ಹೆರಿಗೆ ಮಾಡಿಸಿಕೊಂಡ ಅನುಭವದ ಕುರಿತು ಪ್ರಣಿತಾ ಸುಭಾಷ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಮಗುವಿನೊಂದಿಗಿನ ಫೋಟೋ ಹಂಚಿಕೊಂಡಿದ್ದ ಅವರು, ‘‘ನನ್ನ ತಾಯಿ ಸ್ತ್ರೀರೋಗತಜ್ಞೆ ಹೀಗಾಗಿ ಈ ವಿಚಾರದಲ್ಲಿ ನಾನು ನಿಜವಾಗಿಯೂ ಅದೃಷ್ಟಶಾಲಿಯಾಗಿದ್ದೇನೆ. ಇದರಿಂದಾಗಿ ನನ್ನ ಡೆಲಿವರಿ ಸಮಯದಲ್ಲಿ ಯಾವುದೇ ಒತ್ತಡವಿಲ್ಲದೇ ಎಲ್ಲವೂ ಸರಾಗವಾಗಿ ಆಗಿದೆ. ಆದರೆ ಈ ಸಮಯ ನನ್ನ ತಾಯಿಯ ಪಾಲಿಗೆ ಬಹಳಷ್ಟು ಕಠಿಣ ಹಾಗೂ ಭಾವನಾತ್ಮಕ ಕ್ಷಣವಾಗಿತ್ತು.
ನಟಿ ಪ್ರಣಿತಾಗೆ ಮೊದಲ ಮಗುವಿನ ಹೆರಿಗೆ ವಿಶೇಷ ಈ ಕುರಿತು ಸ್ವತಃ ಪ್ರಣಿತಾ ಅವರೇ ಹೇಳಿಕೊಂಡಿದ್ದಾರೆ. ಅವರ ಹೆರಿಗೆಯ ಜವಾಬ್ದಾರಿಯನ್ನು ಗೈನಕಲಾಜಿಸ್ಟ್ ಆಗಿರುವ ತಾಯಿ ಡಾ.ಜಯಶ್ರೀ ಅವರೇ ವಹಿಸಿಕೊಂಡಿದ್ದರು. ತನ್ನ ಹೆರಿಗೆಯ ಕುರಿತು ತಾಯಿ ಜತೆಗಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಯಾವುದೇ ಹುಡುಗಿ ಕೇಳಬಹುದಾದ ಉತ್ತಮ ವಿಚಾರ ಅಂದ್ರೆ ಗೈನಕಲಾಜಿಸ್ಟ್ ಆಗಿರುವ ತಾಯಿ, ತನ್ನ ಮಗಳಿಗೆ ಹೆರಿಗೆ ಮಾಡಿಸುವುದು ಅತ್ಯಂತ ಸವಾಲಿನ ಸಂಗತಿ. ಭಾವನಾತ್ಮಕವಾಗಿ ಇದು ಕಠಿಣವಾದ ವಿಚಾರ. ಹೆರಿಗೆಯಲ್ಲಿ ಆಗುವ ಏರುಪೇರಿನ ಬಗ್ಗೆ ಚೆನ್ನಾಗಿ ತಿಳಿದಿರುತ್ತದೆ ಎಂದು ನಟಿ ಪ್ರಣಿತಾ ಹೇಳಿಕೊಂಡಿದ್ದಾರೆ.
ತಾಯಿ ಹೆರಿಗೆ ಮಾಡಿಸಿದ ವಿಚಾರಕ್ಕೆ `ಮುನ್ನಾಭಾಯಿ ಎಂಬಿಬಿಎಸ್’ ಚಿತ್ರದ ದೃಶ್ಯವೊಂದನ್ನು ನೆನಪಿಸಿಕೊಂಡಿದ್ದಾರೆ. ಚಿತ್ರದಲ್ಲಿ ಬೋಮನ್ ಇರಾನಿ ತನ್ನ ಮಗಳಿಗೆ ಆಪ್‌ರೇಷನ್ ಮಾಡಲು ಕೈ ನಡಗುತ್ತದೆ ಎಂದು ಹೇಳಿದನ್ನು ನಟಿ ನೆನಪಿಸಿಕೊಂಡಿದ್ದಾರೆ. ಹೆರಿಗೆಯನ್ನು ಮತ್ತಷ್ಟು ನೆಮ್ಮದಿಯುತ ಅನುಭವ ಆಗಿಸಿದ್ದಕ್ಕೆ ಥ್ಯಾಂಕ್ಸ್ ಅಮ್ಮಾ ಎಂದಿದ್ದಾರೆ. ಅಮ್ಮ ಯಾಕೆ ಹೊತ್ತಲ್ಲದ ಹೊತ್ತಲ್ಲಿ ಆಸ್ಪತ್ರೆಗೆ ಹೋಗುತ್ತಿದ್ರು ಅಂತಾ ಈಗ ತಿಳಿಯಿತು ಎಂದು ತಾಯಿಯ ಕುರಿತು ಮೆಚ್ಚುಗೆ ಮಾತನ್ನು ಆಡಿದ್ದಾರೆ. ಈ ಪೋಸ್ಟ್‌ಗೆ ಅಭಿಮನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
ನನ್ನ ಈ ಸಮಯದಲ್ಲಿ ನನ್ನೊಂದಿಗೆ ಸಾಥ್ ನೀಡಿದ ಡಾ. ಸುನೀಲ್ ಈಶ್ವರ್ ಮತ್ತು ಅವರ ತಂಡಕ್ಕೆ ನನ್ನ ಧನ್ಯವಾದಗಳು. ನನ್ನ ಈ ಸಂತಸದ ಕ್ಷಣವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಸಂತೋಷವಾಗುತ್ತದೆ ಎಂದು ಬರೆದುಕೊಂಡಿದ್ದಾರೆ.
ಇತ್ತೀಚೆಗಷ್ಟೇ ಪ್ರಣಿತಾ ಸೀಮಂತದ ಫೋಟೋಗಳು ಸಹ ವೈರಲ್ ಆಗಿತ್ತು. ಹಳದಿ ಬಣ್ಣದ ಸೀರೆಯಲ್ಲಿ ಸುಂದರಿ ಮಿಂಚುತ್ತಿದ್ದರು. ಇದಲ್ಲದೇ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬೇಬಿ ಬಂಪ್ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದರು.ಇನ್ನು ಪ್ರಣೀತಾ ತಮ್ಮದೇ ಆದ ಫೌಂಡೇಶನ್ ಮಾಡಿಕೊಂಡು ಅದರ ಮೂಲಕ ಸಮಾಜ ಸೇವೆ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುತ್ತಿದ್ದಾರೆ. ಜೊತೆಗೆ ಲಾಕ್ಡೌನ್ನಲ್ಲಿ ಸಮಯದಲ್ಲಿ ಸಂಕಷ್ಟದಲ್ಲಿದ್ದ ಜನರಿಗೆ ಆಹಾರ ಹಾಗೂ ದಿನಸಿ ಕಿಟ್ಗಳನ್ನು ನೀಡುವ ಮೂಲಕ ಜನರ ಕಷ್ಟಕ್ಕೆ ನೆರವಾಗಿದ್ದರು.