ಚಿಕ್ಕ ವಯಸ್ಸಿನಲ್ಲೇ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟವರಲ್ಲಿ ನಟಿ ಬೇಬಿ ಶ್ಯಾಮಿಲಿ ಒಬ್ಬರು. ಅವರು ತಮ್ಮ ಚಿಕ್ಕ ವಯಸ್ಸಿನಲ್ಲೇ ಸಿನಿಮಾ ರಂಗಕ್ಕೆ ಕಾಲಿಟ್ಟು ಸುಮಾರು 50 ಕ್ಕೂ ಹೆಚ್ಚು ಸಿನೆಮಾಗಳಲ್ಲಿ ಬಾಲ ನಟಿ ಆಗಿ ಕೆಲಸ ಮಾಡಿದ್ದಾರೆ. ಅದೇ ಕಾರಣದಿಂದ ಇವರಿಗೆ ಬೇಬಿ ಶಾಮಿಲಿ ಎಂಬ ಹೆಸರು ಬಂದಿದೆ. ಬಾಲ ನಟಿಯಾಗಿ ಪರಿಚಯವಾಗಿದ್ದ ಬೇಬಿ ಶಾಮಿಲಿ ಆಗಲೇ ಸ್ಟಾರ್ ನಟ-ನಟಿಯರಿಗೆ ಸಮನಾಗಿ ಸಂಭಾವನೆ ಪಡೆಯುತ್ತಿದ್ದರು. ಬಾಲ್ಯದಲ್ಲೇ ಸ್ಟಾರ್ ನಟ-ನಟಿಯರೊಂದಿಗೆ ತೆರೆ ಹಂಚಿಕೊಂಡಿದ್ದ ಶಾಮಿಲಿ ಓಯ್ ಸಿನಿಮಾದ ಮೂಲಕ ನಾಯಕಿಯಾಗಿ ಪರಿಚಯವಾದರು. ಆದರೆ ಬಾಲ್ಯದಲ್ಲಿ ಕೈ ಹಿಡಿದ ಯಶಸ್ಸು, ಅವರಿಗೆ ನಾಯಕಿಯಾದಾಗ ಸಿಗಲೇ ಇಲ್ಲ.
ವಿವಿಧ ಭಾಷೆಗಳಲ್ಲಿ ನಟಿಸಿ ತನ್ನದೇ ಆದ ಫ್ಯಾನ್ ಫಾಲೋವರ್ಸ್ ಗಳನ್ನು ಹೊಂದಿರುವ ಇವರು ಇಂದು ಹೇಗಿದ್ದಾರೆ ಎಂಬ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ. ಒಂದು ಕಾಲದಲ್ಲಿ ತನ್ನ ಮುದ್ದಾದ ನಟನೆಯಿಂದ ಮನಗೆದ್ದ ಈ ಚೆಲುವೆ ಇಂದು ಕೂಡ ತನ್ನ ಹೆಜ್ಜೆ ಗುರುತು ಉಳಿಸಿಕೊಂಡು ಬಂದಿದ್ದಾರೆ. ಈ ಕ್ಯೂಟ್ ಬೆಡಗಿ ಹುಟ್ಟಿದ್ದು 10 ಜುಲೈ 1987 ರಂದು. ಈಗ ಶ್ಯಾಮಿಲಿ ವಯಸ್ಸು 35 ವರ್ಷ. ಇವರ ತಂದೆ ಬಾಬು ಹಾಗೂ ತಾಯಿ ಆಲಿಸ್. ಮುದ್ದಾದ ಕುಟುಂಬದ ಸದಸ್ಯರೂ ಶ್ಯಾಮಿಲಿ ಅವರ ಸಿನಿಮಾ ಜರ್ನಿಗೆ ಬೆನ್ನೆಲುಬಾಗಿ ನಿಂತಿದ್ದರು. ಬೇಬಿ ಶಾಮಿಲಿ ಅವರು 1989 ಅಲ್ಲಿ ತಮ್ಮ ಸಿನಿಮಾ ಜರ್ನಿ ಯನ್ನು ಪ್ರಾರಂಭಿಸಿ ಸುಮಾರು 50 ಕ್ಕೂ ಹೆಚ್ಚು ದಕ್ಷಿಣ ಭಾರತದ ಸಿನೆಮಾಗಳಲ್ಲಿ ನಟಿಸಿದ್ದಾರೆ. ನಟಿ ಶಾಮಿಲಿ ಅವರು ಮೂಲತಃ ಕೇರಳದವರು. ಕೇರಳ ದಲ್ಲಿ ಹುಟ್ಟಿ ಬೆಳೆದು ನಂತರ ಚೆನ್ನೈ ನಲ್ಲಿ ತಮ್ಮ ಸಿನಿಮಾ ಜರ್ನಿ ಶುರು ಮಾಡಿದರು.
ತನ್ನ ಶಿಕ್ಷಣವನ್ನು ಪಕ್ಕ ಸರಿಸಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಸರಿಸುಮಾರು 10 ವರ್ಷಗಳ ಕಾಲ ದುಡಿದರು. ಇದಾದ ಬಳಿಕ ತಿರುಗಿ ನೋಡಲೇ ಇಲ್ಲ. ಕನ್ನಡದ ಮೊದಲ ಚಿತ್ರವಾದ ಮತ್ತೆ ಹಾಡಿತು ಕೋಗಿಲೆ ಎಂಬ ಚಿತ್ರದ ಮೂಲಕ ಕರ್ನಾಟಕ ಸ್ಟೇಟ್ ಫಿಲಂ ಅವಾರ್ಡ್ ಆಫ್ ಬೆಸ್ಟ್ ಚೈಲ್ಡ್ ಆರ್ಟಿಸ್ಟ್ ಅವಾರ್ಡ್ ಕೂಡ ಬಂದಿದೆ. ಬೇಬಿ ಶಾಮಿಲಿ ಒಂದು ಕಾಲದಲ್ಲಿ ತೆಲುಗು, ತಮಿಳು ಹಾಗೂ ಕನ್ನಡದಲ್ಲಿ ಟಾಪ್ ಸೆಲೆಬ್ರಿಟಿಗಳ ಪಟ್ಟಿಯಲ್ಲಿದ್ದ ಬಾಲ ನಟಿ. ತಮಿಳಿನ ಅಂಜಲಿ ಸಿನಿಮಾದಲ್ಲಿ ಅಭಿನಯಿಸಿದ್ದಕ್ಕೆ ಉತ್ತಮ ಬಾಲನಟಿಯಾಗಿ ರಾಷ್ಟ್ರ ಪ್ರಶಸ್ತಿ ಗೆದ್ದ ಪ್ರತಿಭೆ.
ತಮಿಳಿನ ಅಂಜಲಿ ಸಿನಿಮಾದಲ್ಲಿ ಅಭಿನಯಿಸಿದ್ದಕ್ಕೆ ಉತ್ತಮ ಬಾಲನಟಿಯಾಗಿ ರಾಷ್ಟ್ರ ಪ್ರಶಸ್ತಿ ಗೆದ್ದ ಪ್ರತಿಭೆ. ಸ್ಟಾರ್ ನಟ-ನಟಿಯರಿಗೆ ಸಮನಾಗಿ ಸಂಭಾವನೆ ಪಡೆಯುತ್ತಿದ್ದ ನಟಿಗೆ ಇಂದು ಸಿನಿಮಾಗಳಲ್ಲಿ ಅವಕಾಶವೇ ಸಿಗುತ್ತಿಲ್ಲ. ತೆಲುಗಿನ ಓಯ್ ಸಿನಿಮಾದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟ ಶಾಮಿಲಿ ಅವರ ಲುಕ್ ಹಾಗೂ ಅಭಿನಯ ಎರಡೂ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಲಿಲ್ಲ. ತೆಲುಗಿನಲ್ಲಿ ಓಯ್ ನಂತರ ಅಮ್ಮಮ್ಮಗಾರಿಲ್ಲು ಸಿನಿಮಾದಲ್ಲೂ ನಟಿಸಿದರು. ಜೊತೆಗೆ ಒಂದು ತಮಿಳು ಹಾಗೂ ಮಲಯಾಳಂ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಈ ಚಿತ್ರಗಳು ಯಾವಾಗ ತೆರೆಕಂಡು ರಿಲೀಸ್ ಆದವು ಎಂದು ತಿಳಿಯದಂತಾಯಿತು.
ಕನ್ನಡದಲ್ಲಿ ಭೈರವಿ, ಶ್ವೇತಾಗ್ನಿ, ಪೊಲೀಸ್ ಲಾಕ್ ಅಪ್ , ಕಾದಂಬರಿ, ದಾಕ್ಷಾಯಿಣಿ, ಚಿನ್ನ ನೀ ನಗುತಿರು, ಕರುಳಿನ ಕುಡಿ ಹೀಗೆ ಇನ್ನೂ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಈಗಲೂ ಚಿತ್ರರಂಗದಲ್ಲಿ ಇವರಿಗೆ ಅವಕಾಶಗಳೇನು ಕಡಿಮೆಯಾಗಿಲ್ಲ. ಹೀಗೆಯೇ ಚಿತ್ರರಂಗದಲ್ಲಿ ತೊಡಗಿಸಿಕೊಂಡು ಇನ್ನಷ್ಟು ಹೆಸರು ಗಳಿಸಲಿ ಎನ್ನುವುದು ಅವರ ಅಭಿಮಾನಿಗಳ ಆಶಯವಾಗಿತ್ತು.
ಆದರೆ ಶಾಮಿಲಿ ಅವರು ಕನ್ನಡದಲ್ಲಿ ಶಿವಣ್ಣನ ತಂಗಿ ಪಾತ್ರದಲ್ಲಿ ನಟಿಸುವಂತೆ ಶಾಮಿಲಿ ಅವಕಾಶ ಕೊಟ್ಟರೂ, ಅದಕ್ಕೆ ಒಲ್ಲೆ ಎಂದಿದ್ದರಂತೆ. ಕೊಟ್ಟ ಕಾರಣ ಡೇಟ್ಸ್ ಇಲ್ಲವೆಂದು. ಖ್ಯಾತ ನಟಿ ಶಾಲಿನಿ ಅಜಿತ್ ಅವರ ತಂಗಿಯಾಗಿರುವ ಶಾಮಿಲಿ ಅವರ ವರ್ತನೆ ಹಾಗೂ ಅವರಿಗಿದ್ದ ಸಿಟ್ಟಿನಿಂದ ಯಾರೂ ಅವರೊಂದಿಗೆ ಸಿನಿಮಾ ಮಾಡಲು ಒಪ್ಪುತ್ತಿರಲಿಲ್ಲವಂತೆ. ಚಿತ್ರೀಕರಣದ ಸೆಟ್ಗೆ ಸದಾ ತಡವಾಗಿ ಬರುತ್ತಿದ್ದರಂತೆ ಶಾಮಿಲಿ. ಶಾಮಿಲಿಯ ಈ ರೀತಿಯ ವರ್ತನೆಯೇ ಅವರಿಗೆ ಅವಕಾಶಗಳು ಸಿಗದಂತಾಗಲು ಕಾರಣ ಎನ್ನಲಾಗುತ್ತದೆ. ಶಾಮಿಲಿ ಸದ್ಯ ಮನೆಯಲ್ಲೇ ಪೇಂಟಿಂಗ್ ಮಾಡುತ್ತಾ ಫೋಟೋಶೂಟ್ಗಳಿಗೆ ಪೋಸ್ ಕೊಡುತ್ತಾ ಕಾಲ ಕಳೆಯುತ್ತಿದ್ದಾರೆ.