ತಾಯಿಯ ಪ್ರಾಣವನ್ನು ಕಾಪಾಡಿ ಪುನರ್ಜನ್ಮ ನೀಡಿದ ನಾಲ್ಕು ವರ್ಷದ ಹುಡುಗ

ನಮಗೆ ಮೊಬೈಲ್ ಫೋನಿನ ಪ್ರಯೋಜನ ಗೋತಿಲ್ಲದೆಯೋ ಗೊತ್ತಿದ್ದೋ ನಾವು ಪ್ರತಿನಿತ್ಯ ಮೊಬೈಲ್ ಫೋನನ್ನು ಉಪಯೋಗಿಸುತ್ತಿದ್ದೇವೆ ಅಲ್ಲದೇ ನಮ್ಮ ಮಕ್ಕಳೂ ಸಹ ಮೊಬೈಲ್ ನ ಜೊತೆ ಅಂಟಿಕೊಂಡಿರುತ್ತಾರೆ ಆಧುನಿಕತೆ ಮುಂದುವರೆದ ಈ ಕಾಲದಲ್ಲಿ ಮೊಬೈಲ್ ಫೋನನ್ನು ಸದುಪಯೋಗ ಪಡಿಸಿಕೊಳ್ಳುವವರಿಗಿಂತ ದುರುಪಯೋಗ ಪಡಿಸಿಕೊಳ್ಳುತ್ತಿರುವವರೇ ಹೆಚ್ಚು, ನೀವು ಮಕ್ಕಳಿಗೆ ಮೊಬೈಲ್ ಕೊಡುವ ಮುನ್ನ ಅದರಿಂದಾಗುವ ಒಳ್ಳೆಯ ಪ್ರಯೋಜನಗಳ ಬಗ್ಗೆ ಮನವರಿಕೆ ಮಾಡಿಸಿದರೆ ಮಕ್ಕಳೂ ಅದನ್ನು ಒಳ್ಳೆಯ ಕೆಲಸಗಳಿಗೆ ಉಪಯೋಗಿಸಿಕೊಳ್ಳುವುದರಲ್ಲಿ ಸಂಶವಿಲ್ಲ.

ಹೌದು ಇಲ್ಲೊಬ್ಬ ಬಾಲಕ ಮೊಬೈಲ್ ಫೋನ್ ನ ಮೂಲಕ ತನ್ನ ತಾಯಿಯ ಪ್ರಾಣವನ್ನೇ ಉಳಿಸಿದ್ದಾನೆ ಇಂಗ್ಲೆಂಡ್ ದೇಶದ ಲಂಡನ್ ನಗರದಲ್ಲಿ ನಾಲ್ಕು ವರ್ಷದ ರೋಮನ್ ಎನ್ನುವ ಹುಡುಗ ತನ್ನ ತಮ್ಮನೊಟ್ಟಿಗೆ ಆಟವಾಡುತ್ತಿದ್ದ ಆ ವೇಳೆಯಲ್ಲಿ ಆತನ ತಾಯಿ ನೋಡನೋಡುತ್ತಿದ್ದಂತೆಯೇ ಪ್ರಜ್ಞೆ ಕಳೆದುಕೊಂಡು ನೆಲಕ್ಕುರುಳಿದರು ಈ ಘಟನೆಯನ್ನು ಕಂಡ ರೋಮನ್ ತನ್ನ ತಾಯಿ ಸತ್ತು ಹೋಗಿರುವುದಾಗಿ ಭಾವಿಸಿದ ನಂತರ ತಕ್ಷಣವೇ ತನ್ನ ತಾಯಿಯ ಆಪಲ್ ಫೋನ್ ಅನ್ನು ತೆಗೆದುಕೊಂಡ ರೋಮನ್ ತನ್ನ ತಾಯಿಯ ಕೈ ಬೆರಳನ್ನು ಇಟ್ಟು ಆ ಫೋನ್ ನ ಸ್ಕ್ರೀನ್ ಅನ್ನು ಅನ್ ಲಾಕ್ ಮಾಡಿದ ನಂತರ ಅದರಲ್ಲಿದ್ದ ಸಿರಿ ಆಪ್ ಅನ್ನು ಓಪನ್ ಮಾಡಿ ಅದರ ಸಹಾಯದಿಂದ ಇಂಗ್ಲೆಂಡ್ ನ ಎಮೆರ್ಜೆನ್ಸಿ ನಂಬರ್ 911 ಕ್ಕೆ ಕರೆ ಮಾಡಿದ

ಕರೆಯನ್ನು ಸ್ವೀಕರಿಸಿದ ಮಹಿಳೆಗೆ ತನ್ನ ವಿವರಗಳನ್ನು ನೀಡಲು ಮುಂದಾದ ರೋಮನ್ ತನ್ನ ಹೆಸರು ರೋಮನ್ ಎಂದು ತನ್ನ ತಾಯಿ ಸತ್ತು ಹೋಗಿದ್ದಾಳೆ ಎಂದು ತಿಳಿಸಿದ . ನಿನ್ನ ತಾಯಿ ಸತ್ತು ಹೋಗಿದ್ದಾಳೆ ಎಂದು ನೀನು ಹೇಗೆ ಹೇಳುವೆ ಎಂದು ಕೇಳಿದ ಮಹಿಳೆಯ ಪ್ರಶ್ನೆಗೆ ತನ್ನ ತಾಯಿಯ ಕಣ್ಣು ಪೂರ್ತಿಯಾಗಿ ಮುಚ್ಚಿದೆ ಅಲ್ಲದೇ ಉಸಿರಾಟವೂ ಕೂಡ ನಿಂತು ಹೋಗಿರುವುದಾಗಿ ರೋಮನ್ ಹೇಳುತ್ತಾನೆ ಅದಕ್ಕವಳು ಒಂದು ಬಾರಿ ತನ್ನ ತಾಯಿಯನ್ನು ಜೋರಾಗಿ ಕೂಗುವಂತೆ ಸೂಚಿಸಿದ ಮಹಿಳೆಗೆ ತಾನು ಎಷ್ಟೇ ಸಾರಿ ಕೂಗಿದರು ತನ್ನ ತಾಯಿ ಎದ್ದೇಳುತ್ತಿಲ್ಲ ಎಂಬುದಾಗಿ ಪ್ರತ್ಯುತ್ತರ ನೀಡಿದ ರೋಮನ್

ತಕ್ಷಣ ರೋಮನ್ ಮನೆಯ ವಿಳಾಸವನ್ನು ಕೇಳಿ ನೋಂದಾಯಿಸಿಕೊಂಡ ಮಹಿಳೆ ಅವರ ಮನೆಗೆ ಪೊಲೀಸ್ ಅನ್ನು ಕಳಿಸಿಕೊಡುವುದಾಗಿ ಹೇಳಿದಳು ನಂತರ ಹದಿಮೂರು ನಿಮಿಷದಲ್ಲಿ ಆಂಬುಲೆನ್ಸ್ ಒಂದು ಅವರ ಮನೆಯ ಬಳಿ ಬಂದು ರೋಮನ್ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು ನಂತರ ರೋಮನ್ ನ ತಾಯಿಯ ಆರೋಗ್ಯ ಚೇತರಿಸಿಕೊಂಡು ಬದುಕುಳಿದರು ಅಲ್ಲದೇ ತಾನು ಜನ್ಮ ಕೊಟ್ಟ ಮಗ ತನಗೆ ಪುನರ್ಜನ್ಮ ಕೊಟ್ಟಿದ್ದಾನೆಂದು ಮಗನನ್ನು ತಬ್ಬಿಕೊಂಡು ಕಣ್ಣೀರು ಹಾಕಿದರು

ಮುಂದುವರೆದ ತಂತ್ರಜ್ಞಾನದ ಕಾರಣ ರೋಮನ್ ನ ತಾಯಿಯನ್ನು ಆತನು ಬದುಕುಳಿಸಲು ಸಾಧ್ಯವಾಯಿತು ಆದ್ದರಿಂದ ಮಕ್ಕಳಿಗೆ ಮೊಬೈಲ್ ಗಳನ್ನು ನೀಡುವ ಮುನ್ನ ಅವರಿಗೆ ಇಲ್ಲ ಸಲ್ಲದ ಆಪ್ ಗಳ ಬಗ್ಗೆ ಮಾಹಿತಿ ನೀಡಿ ಗೇಮ್ ಗಳನ್ನು ಆಡುವುದನ್ನು ಹೇಳಿಕೊಡುವುದಕ್ಕಿಂತ ಇಂತಹ ಪ್ರಯೋಜನಕಾರಿ ಅಂಶಗಳನ್ನು ಅವರಿಗೆ ಹೇಳಿಕೊಡುವುದರಿಂದ ಕಷ್ಟ ಕಾಲದಲ್ಲಿ ಸಹಾಯವಾಗಬಹುದು

Leave a Comment