ಕೂದಲು ಮಹಿಳೆಯರಲ್ಲಿ ಅಂದವನ್ನು ಹೆಚ್ಚಿಸುತ್ತದೆ ಅದರಲ್ಲೂ ಸೀರೆಯುಟ್ಟ ಹೆಣ್ಣು ಉದ್ದ ಜಡೆಯಲ್ಲಿ ಹೂವು ಮುಡಿದುಕೊಂಡರೆ ಸಾಕು ಆ ಹೆಣ್ಣಿಗೆ ಯಾವ ಚಿನ್ನದ ಅಲಂಕಾರವೂ ಬೇಡ ಹಾಗಾಗಿ ಹೆಣ್ಣು ಮಕ್ಕಳು ತಾವು ಉದ್ದ ಕೂದಲನ್ನು ಬೆಳೆಸಬೇಕೆಂದು ಆಸೆ ಪಡುತ್ತಾರೆ ಅಲ್ಲದೇ ತಮ್ಮ ದೇಹದ ಎಲ್ಲಾ ಅಂಗಾಂಗಗಳಿಗಿಂತ ಹೆಚ್ಚಿನ ಮಹತ್ವವನ್ನು ಕೂದಲಿಗೆ ಕೊಡುತ್ತಾರೆ ಎಂದರೆ ತಪ್ಪಾಗಲಾರದು ಅಲ್ಲದೇ ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಕೂದಲು ಬಹಳ ಚಿಕ್ಕ ವಯಸ್ಸಿನಲ್ಲಿಯೇ ಉದುರುವುದು ಮತ್ತು ಬೆಳ್ಳಗಾಗುವುದನ್ನು ನಾವು ಗಮನಿಸಿದ್ದೇವೆ ಇಂದಿನ ಆಧುನಿಕ ಜೀವನ ಶೈಲಿಗೆ ಮಹಿಳೆಯರು ಒಗ್ಗುತ್ತಾ ಹೋದಂತೆಲ್ಲಾ ಅವರ ಕೂದಲೂ ಕೂಡ ತಮ್ಮ ಕಳೆಯನ್ನು ಕೆಳೆದುಕೊಳ್ಳುತ್ತಿದೆ ಹಾಗಾಗಿ ಉದ್ದವಾದ ಮತ್ತು ಕಪ್ಪು ಕೂದಲುಗಳನ್ನು ಪಡೆಯಲು ಉಪಯೋಗಿಸಬಹುದಾದ ಮನೆ ಮದ್ಧುಗಳನ್ನು ತಯಾರಿಸಿ ಬಳಸುವ ಕ್ರಮಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ
ಯಾವುದೇ ಹೆಚ್ಚಿನ ಹಣದ ಖರ್ಚುಗಳಿಲ್ಲದೇ ಹೆಚ್ಚಿನ ತೊಂದರೆಯೂ ಇಲ್ಲದೆ ಮನೆಯಲ್ಲಿಯೇ ಸಿಗುವಂತಹ ಈ ಮೂರು ಪದಾರ್ಥಗಳನ್ನು ಒಟ್ಟಿಗೆ ಸೇರಿಸಿ ಹಚ್ಚಿದರೆ ಸಾಕು ನಿಮ್ಮ ಕೂದಲು ಒಂದೇ ವಾರದಲ್ಲಿ ಉದ್ದ ಮತ್ತು ಕಪ್ಪಾಗುವುದರಲ್ಲಿ ಸಂಶವಿಲ್ಲ
ಮೊದಲಿಗೆ ಒಂದು ಬೀಟ್ ರೂಟ್ ಅನ್ನು ಚಿಕ್ಕ ತುಂಡುಗಳನ್ನಾಗಿ ಮಾಡಿಕೊಂಡು ಅದರ ಜೊತೆಗೆ ಸ್ವಲ್ಪವೇ ಮೆಂತ್ಯವನ್ನು ನೆನೆಸಿಟ್ಟ ನೀರನ್ನು ಸೇರಿಸಿ ಈ ಎರಡನ್ನೂ ಸಹ ಒಂದು ಚಿಕ್ಕ ಮಿಕ್ಸಿ ಜಾರ್ ನಲ್ಲಿ ಹಾಕಿಕೊಂಡು ಸಣ್ಣಗೆ ನುರಿಯುವಂತೆ ರುಬ್ಬಿಕೊಳ್ಳಬೇಕು ಹೀಗೆ ಸಣ್ಣಗೆ ರುಬ್ಬಿಕೊಂಡ ಮಿಶ್ರಣವನ್ನು ಒಂದು ಜಾಲರಿಯ ಸಹಾಯದಿಂದ ಸೋರಿಸಿಕೊಂಡು ಅದರ ರಸವನ್ನು ಒಂದು ಪ್ರತ್ಯೇಕ ಬೌಲ್ ಗೆ ಹಾಕಿಕೊಳ್ಳಬೇಕು ಮತ್ತೊಂದು ಬೌಲ್ ನಲ್ಲಿ ಒಂದು ಪ್ಯಾಕ್ ಅಂದರೆ 100 ಗ್ರಾಂ ನಷ್ಟು ಶೀಕಾಕಾಯಿ ಪುಡಿಯನ್ನು ಹಾಕಿಕೊಂಡು ಶೀಕಾಕಾಯಿ ಪುಡಿಯಿರುವ ಬೌಲ್ ನ ಒಳಗೆ ನೀವು ಮೊದಲೇ ನುಣ್ಣಗೆ ಅರೆದು ಮಾಡಿಕೊಂಡಿರುವ ಬೀಟ್ ರೂಟ್ ಮತ್ತು ಮೆಂತ್ಯ ನೀರಿನ ಮಿಶ್ರಣದ ರಸವನ್ನು ಸೇರಿಸಿ ಅದರೊಟ್ಟಿಗೆ ಚೆನ್ನಾಗಿ ಕಲಸಿಕೊಂಡು ಪೇಸ್ಟ್ ತಯಾರಿಸಿಕೊಳ್ಳಬೇಕು
ಹೀಗೆ ತಯಾರಿಸಿಕೊಂಡ ಪೇಸ್ಟ್ ಅನ್ನು ಕೂದಲಿನ ಬುಡಕ್ಕೆ ತಲುಪುವ ಹಾಗೆ ಕೂದಲಿನ ತುಂಬಾ ಚೆನ್ನಾಗಿ ಲೇಪನ ಮಾಡಿಕೊಳ್ಳಬೇಕು ಕೂದಲಿಗೆ ಹಚ್ಚಿದ ಈ ಪೇಸ್ಟ್ ನ್ನು ಇಪ್ಪತ್ತು ನಿಮಿಷಗಳ ಕಾಲ ಒಣಗಲು ಬಿಟ್ಟು ತದನಂತರ ಯಾವುದೇ ರೀತಿಯ ಶಾಂಪುಗಳನ್ನು ಮತ್ತು ಸೋಪ್ ಗಳನ್ನು ತಲೆಗೆ ಉಪಯೋಗಿಸದ ರೀತಿ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿಕೊಳ್ಳಬೇಕು ವಾರದಲ್ಲಿ ಒಂದು ಬಾರಿಯಾದರೂ ಹೀಗೆ ಮಾಡುವುದರಿಂದ ನೀವು ನಿಮ್ಮ ಕೂದಲಿನಲ್ಲಿ ಉತ್ತಮ ಬದಲಾವಣೆಗಳನ್ನು ಗಮನಿಸಬಹುದಲ್ಲದೆ ನಿಮ್ಮ ಕೂದಲು ಉದ್ದವಾಗಿ ಬೆಳೆಯಲು ಮತ್ತು ಕೂದಲು ಕಪ್ಪಗಾಗಲು ಇದು ಸಹಾಯಕವಾಗಿದೆಯಲ್ಲದೆ ಇದೊಂದು ಅಧ್ಬುತ ಮನೆ ಮದ್ಧು ಎಂಬುದರಲ್ಲಿ ಯಾವುದೇ ಸಂಶವಿಲ್ಲ