ಡ್ರಾಮಾ ಜ್ಯೂನಿಯರ್ಸ್ ಸೀಸನ್-4 ಗೆ ರಚಿತಾ ರಾಮ್ ತೆಗೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಗೊತ್ತಾ

ಸದ್ಯಕ್ಕೆ ಕನ್ನಡ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳ ದರ್ಬಾರು ಜೋರಾಗಿದೆ. ವಾರದ ಅಂತ್ಯದಲ್ಲಿ ರಿಯಾಲಿಟಿ ಶೋಗಳ ಸಂಭ್ರಮ ಅದ್ಧೂರಿಯಾಗಿರುತ್ತೆ. ವಾರದ ಪ್ರಾರಂಭದಲ್ಲಿ ಧಾರಾವಾಹಿಗಳ ಸಂಭ್ರಮ ಜೋರಾಗಿರುತ್ತೆ. ವಾಹಿನಿಗಳ ಮಧ್ಯೆ ವಾರಾಂತ್ಯದಲ್ಲಿ ಟಿಆರ್ ಪಿ ಪೈಪೋಟಿ ಭರದಿಂದ ಸಾಗಿದೆ. ಡ್ರಾಮಾ ಜೂನಿಯರ್ಸ್ ಮತ್ತು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿರುವ ಜೀ ಕನ್ನಡ ವಾಹಿನಿಯ ಟಿಆರ್ ಪಿಯಲ್ಲಿ ಮೊದಲ ಸ್ಥಾನವನ್ನು ಗಳಿಸಿಕೊಂಡಿದೆ.

ಡ್ರಾಮಾ ಜೂನಿಯರ್ಸ್ ನಲ್ಲಿ ರವಿಚಂದ್ರನ್ ಮತ್ತು ರವಿ ರಚಿತಾ ರಾಮ್ ಅವರು ಮಿಂಚುತ್ತಿದ್ದಾರೆ. ಇನ್ನೊಂದು ಕಡೆ ಶಿವಣ್ಣ ಅವರು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮಕ್ಕೆ ಬಂದು ಟಿಆರ್ ಪಿ ಪ್ರಮಾಣವನ್ನು ಹೆಚ್ಚಿಸಿದ್ದಾರೆ. ಎರಡೂ ಕಾರ್ಯಕ್ರಮಗಳು ಅದ್ದೂರಿಯಾಗಿ ಮೂಡಿ ಬರುತ್ತಿದ್ದು ವೀಕ್ಷಕರಿಗಂತೂ ರಸದೌತಣ ಎಂದೇ ಹೇಳಬಹುದು. ಅದರಲ್ಲೂ ವಿಶೇಷವಾಗಿ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮ ಹಲವಾರು ಚಿಕ್ಕ ಪುಟ್ಟ ಮಕ್ಕಳಿಗೆ ವೇದಿಕೆಯನ್ನು ಸೃಷ್ಟಿ ಮಾಡಿ ಭವಿಷ್ಯವನ್ನು ನಿರ್ಮಾಣ ಮಾಡಿದೆ.

ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದಲ್ಲಿ ಮಾಸ್ಟರ್ ಆನಂದ್ ಅವರ ಹಾಸ್ಯಮಯ ನಿರೂಪಣೆ, ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ಲಕ್ಷ್ಮಿ ಅಮ್ಮ ಮತ್ತು ರಚಿತಾ ರಾಮ್ ಅವರ ತೀರ್ಪುಗಾರಿಕೆ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದ ಸಂಭ್ರಮವನ್ನು ಹೆಚ್ಚಿಸಿದೆ. ಆಗಾಗ ರವಿಚಂದ್ರನ್ ಮತ್ತು ರಚಿತಾ ರಾಮ್ ಅವರು ವೇದಿಕೆಯ ಮೇಲೆ ಬಂದು ಮಾಡುವ ಡ್ಯಾನ್ಸ್ ಗಳು ವೀಕ್ಷಕರಿಗಂತೂ ನೋಡೋಕೆ ಹಬ್ಬ. ಡ್ಯಾನ್ಸ್ ಮಾಡುವಾಗ ರವಿಚಂದ್ರನ್ ಅವರು ತೋರಿಸುವ ರಸಿಕತೆ ನೋಡೋದ್ರಲ್ಲೇ ಒಂತರ ಮಜಾ ಇದೆ.

ಇನ್ನು ರಚಿತಾ ರಾಮ್ ಅವರ ಸಂಭಾವನೆ ವಿಷಯಕ್ಕೆ ಬಂದರೆ ರಚಿತಾ ರಾಮ್ ಅವರು ಕನ್ನಡ ಚಿತ್ರರಂಗದ ಟಾಪ್ ನಟಿ. ಕನ್ನಡ ಫಿಲ್ಮ್ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿ ಎಂದರೆ ಅದು ರಚಿತಾ ರಾಮ್. ಇವರು ಒಂದು ಚಿತ್ರಕ್ಕೆ ಪಡೆಯುವ ಸಂಭಾವನೆ 50 ರಿಂದ 60 ಲಕ್ಷ. ನಾಲ್ಕರಿಂದ ಐದು ತಿಂಗಳಿಗೆ ಒಂದು ಚಿತ್ರವನ್ನು ರಚಿತಾ ರಾಮ್ ಕಂಪ್ಲೀಟ್ ಮಾಡ್ತಾರೆ. ಆದರೆ ಈ ವರ್ಷ ರಚಿತಾ ರಾಮ್ ಅವರು ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೆ ರಿಯಾಲಿಟಿ ಶೋ ನಲ್ಲಿ ಮಿಂಚುತ್ತಿದ್ದಾರೆ.

ಹಾಗಾದರೆ ಡ್ರಾಮಾ ಜ್ಯೂನಿಯರ್ಸ್ ರಿಯಾಲಿಟಿ ಶೋ ಗೆ ರಚಿತಾ ರಾಮ್ ಅವರು ಪಡೆಯುವ ಸಂಭಾವನೆ ಎಷ್ಟು ಇರಬಹುದು ಎಂಬುದು ನಿಮಗೆಲ್ಲ ಕೂತುಹಲ ಇರಬಹುದು. ಅತಿ ಹೆಚ್ಚು ಟಿ ಆರ್ ಪಿ ಯನ್ನು ಹೊಂದಿರುವ ಡ್ರಾಮಾ ಜ್ಯೂನಿಯರ್ಸ್ ಕಾರ್ಯ ಕ್ರಮಕ್ಕೆ ರಚಿತಾ ರಾಮ್ ಅವರು ಒಂದು ಕಂಪ್ಲೀಟ್ ಸೀಸನ್ ಗೆ ನಲವತ್ತು ರಿಂದ ಐವತ್ತು ಲಕ್ಷ ರೂಪಾಯಿಗಳನ್ನು ಪಡೆದಿದ್ದಾರೆ. ಡ್ರಾಮಾ ಜ್ಯೂನಿಯರ್ಸ್ ಸೀಸನ್- 4 ಕಾರ್ಯಕ್ರಮ ಸುಮಾರು ನಾಲ್ಕರಿಂದ ಐದು ತಿಂಗಳು ನಡೆಯುತ್ತದೆ ಆದ್ದರಿಂದ ಪ್ರತಿ ತಿಂಗಳಿಗೆ ರಚಿತಾ ರಾಮ್ ಅವರು ಹತ್ತು ಲಕ್ಷ ರುಪಾಯಿಯಂತೆ ಸಂಭಾವನೆ ಪಡೆಯುತ್ತಿದ್ದಾರೆ.

Leave a Comment