ಹಿಂದಿ ಬಿಗ್ ಬಾಸ್ ಗೆ ಸಲ್ಮಾನ್ ಖಾನ್ 350 ಕೋಟಿ ಹಣ ಪಡೆದಿದ್ದಾರೆ. ಕನ್ನಡದಲ್ಲಿ ಕಿಚ್ಚ ಸುದೀಪ್ ಪಡೆಯುವ ಸಂಭಾವನೆ ಎಷ್ಟು ಗೊತ್ತಾ

ಕನ್ನಡ ಕಿರುತೆರೆಯಲ್ಲಿ ಧಾರಾವಾಹಿಗಳಷ್ಟೇ ರಿಯಾಲಿಟಿ ಶೋಗಳು ಕೂಡ ತುಂಬಾ ಮಹತ್ವವನ್ನು ಪಡೆದುಕೊಂಡಿವೆ. ಜನರು ವಾರಾಂತ್ಯ ನೋಡುವುದಕ್ಕಾಗಿ ಕಾದು ಕುಳಿತಿರುತ್ತಾರೆ, ಅದರಲ್ಲೂ ರಾಜ್ಯದಲ್ಲಿ ಸಂಚಲನ ಮೂಡಿಸಿದ ರಿಯಾಲಿಟಿ ಶೋ ಅಂದರೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್.

ಹೌದು ಬಿಗ್ ಬಾಸ್ ಕಾರ್ಯಕ್ರಮ ತುಂಬಾನೇ ಯಶಸ್ವಿಯಾಗಿ 8 ವರ್ಷ ನಡೆದುಕೊಂಡು ಬಂದಿದ್ದು ಈಗ 9ನೇ ವರ್ಷದ ಬಿಗ್ ಬಾಸ್ ನಡೆಸಲು ವಾಹಿನಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಬಿಗ್ ಬಾಸ್ 8 ಸೀಸನಗಳನ್ನು ಮುಗಿಸಿ 9ನೇ ಸೀಸನ್ ಆರಂಭವಾಗಲಿದೆ. ಹಿಂದಿ ಬಿಗ್ ಬಾಸ್ ಅನ್ನ ಸಲ್ಮಾನ್ ಖಾನ್ ನಿರೂಪಣೆ ಮಾಡಿ ನಡೆಸಿಕೊಡುತ್ತಿದ್ದರೆ, ಕನ್ನಡದಲ್ಲಿ ಕಿಚ್ಚ ಸುದೀಪ್ ಅಭಿಮಾನಿಗಳಲ್ಲಿ ಇನ್ನಷ್ಟು ಉತ್ಸುಕತೆಯನ್ನು ತುಂಬುತ್ತಾರೆ. ಕನ್ನಡದಲ್ಲಿ ಬಿಗ್ ಬಾಸ್ ಇಷ್ಟು ಹೆಚ್ಚು ಪ್ರಚಲಿತವಾದದ್ದು ಜನರಿಗೆ ಹೆಚ್ಚು ಇಷ್ಟವಾಗಿದ್ದು ಕಿಚ್ಚ ಸುದೀಪ ಅವರ ಅದ್ಭುತ ನಿರೂಪಣಾ ಶೈಲಿಯಿಂದಾಗಿ. ಅಂದಹಾಗೆ ಈ ಬಾರಿ ಕನ್ನಡದಲ್ಲಿ ಎರಡು ರೀತಿಯ ಬಿಗ್ ಬಾಸ್ ಪ್ರಸಾರವಾಗಲಿದೆ ಒಂದು ಬಿಗ್ ಬಾಸ್ ಸೀಸನ್ 9 ಹಾಗೂ ಇನ್ನೊಂದು ಓಟಿಟಿಯಲ್ಲಿ ಪ್ರಸಾರವಾಗುವ ಮಿನಿ ಬಿಗ್ ಬಾಸ್.

ಎರಡು ಬಿಗ್ ಬಾಸ್ ಅನ್ನು ನಿರೂಪಣೆ ಮಾಡುತ್ತಿರುವುದು ಮತ್ಯಾರು ಅಲ್ಲ ಕಿಚ್ಚ ಸುದೀಪ್ ಅವರು. ಬಿಗ್ ಬಾಸ್ ಶೂಟಿಂಗ್ ಕೂಡ ಕಿಚ್ಚ ಸುದೀಪ್ ಅವರ ಸಹಭಾಗಿತ್ವದಲ್ಲಿ ನೆರವೇರಿದೆ. ಬಿಗ್ ಬಾಸ್ ಇನ್ನೇನು ಆರಂಭವಾಗುತ್ತೆ ಅಂತ ಕನಸು ಕನ್ನಡದ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಈಗಾಗಲೇ ಹಂಚಿಕೊಂಡಿದ್ದರು. ಅಲ್ಲದೇ ಬಿಗ್ ಬಾಸ್ ಪ್ರೊಮೋ ದಲ್ಲಿ ಕಿಚ್ಚ ಸುದೀಪ್ ಹಾಕಿಕೊಂಡ ಉಡುಪು ಕೂಡ ತುಂಬಾ ಆಕರ್ಷಣೀಯವಾಗಿದೆ ಹಾಗಾಗಿ ಜನ ಮತ್ತೆ ಕಿಚ್ಚ ಸುದೀಪ್ ಗೆ ಫಿದಾ ಆಗಿದ್ದಾರೆ.

ಇನ್ನು ಬಿಗ್ ಬಾಸ್ ಸಂಭಾವನೆಯ ವಿಚಾರಕ್ಕೆ ಬಂದರೆ ಹಿಂದಿಯಲ್ಲಿ ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಿಕೊಡುವುದಕ್ಕೆ ನಟ ಸಲ್ಮಾನ್ ಖಾನ್ ಸುಮಾರು 350 ಕೋಟಿ ಸಂಭಾವನೆಯನ್ನು ಪಡೆಯುತ್ತಾರೆ ಎಂಬ ವರದಿ ಇದೆ ಕಳೆದ ಬಾರಿಯೂ ಸಂಭಾವನೆಯ ಮೊತ್ತವನ್ನು ಖಾಸಗಿ ವಾಹಿನಿಯಲ್ಲಿ ಪ್ರಸಾರ ಮಾಡಲಾಗಿತ್ತು ಅದೇ ರೀತಿ ಕಿಚ್ಚ ಸುದೀಪ್ ಕೂಡ ಬಿಗ್ ಬಾಸ್ ನಿರೂಪಣೆ ಮಾಡುವುದಕ್ಕೆ ಎಷ್ಟು ಸಂಭಾವನೆ ಪಡೆಯಬಹುದು ಎನ್ನುವುದು ರಾಜ್ಯದಲ್ಲಿ ಭಾರಿ ಚರ್ಚೆಗೆ ಗುರಿಯಾಗಿದೆ. ಕಿಚ್ಚ ಸುದೀಪ್ ಅವರಿಗೂ ಕೂಡ ಕೋಟಿಗಟ್ಟಲೆ ಸಂಭಾವನೆ ಇರಬಹುದು ಅಂತ ಎಲ್ಲರೂ ಊಹಿಸುತ್ತಾರೆ ಆದರೆ ನಿಖರವಾಗಿ ಅವರಿಗೆ ಸಿಗುವ ಸಂಭಾವನೆ ಎಷ್ಟು ಅಂತ ತಿಳಿದುಕೊಳ್ಳುವ ಕುತೂಹಲ ಹಲವರಿಗೆ ಇದೆ.

ಹೌದು ಕೆಲವು ಮಾಹಿತಿಯ ಪ್ರಕಾರ ಕಿಚ್ಚ ಸುದೀಪ್ ಬಿಗ್ ಬಾಸ್ ಶೋ ನಡೆಸಿಕೊಡುವುದಕ್ಕೆ ವಾರಾಂತ್ಯದಲ್ಲಿ ಬಂದು ಪಂಚಾಯಿತಿ ಮಾಡುವುದಕ್ಕೆ ಬರೋಬ್ಬರಿ ಮೂರು ಕೋಟಿ ಸಂಭಾವನೆಯನ್ನು ಪಡೆಯುತ್ತಾರೆ ಎನ್ನುವ ಮಾಹಿತಿ ಇದೆ. ಒಟ್ಟಾರೆ ಈ ವರ್ಷದ ಹೊಸ ಸೀಸನ್ ಅನ್ನು ನಡೆಸಿಕೊಳ್ಳುವುದಕ್ಕೆ ಸುದೀಪ್ ಅವರು ನೂರು ಕೋಟಿ ಬೇಡಿಕೆ ಇಟ್ಟಿದ್ದಾರೆ ಎಂಬ ಮಾಹಿತಿಗಳು ಇದೆ. ಇದ್ಯಾವುದರ ಬಗ್ಗೆಯೂ ಕಿಚ್ಚ ಸುದೀಪ್ ಆಗಲಿ ಅಥವಾ ವಾಹಿನಿಯಾಗಲಿ ಅಧಿಕೃತ ಮಾಹಿತಿ ನೀಡಿಲ್ಲ. ಹಿಂದಿಯಲ್ಲಿ ಸಿಗುವಷ್ಟು ಸಂಭಾವನೆ ಕನ್ನಡದಲ್ಲಿ ಸಿಗಲು ಸಾಧ್ಯವಿಲ್ಲ ಯಾಕಂದ್ರೆ ಹಿಂದಿ ಬಿಗ್ ಬಾಸ್ ಹೈ ಬಜೆಟ್ ನಲ್ಲಿ ಪ್ರಸಾರವಾಗುವ ಕಾರ್ಯಕ್ರಮ.

ಸದ್ಯ ಕನ್ನಡದಲ್ಲಿ ಬಿಗ್ ಬಾಸ್ ಗೆ ಕ್ಷಣಗಣನೆ ಆರಂಭವಾಗಿದೆ ಇನ್ನು ಬಿಗ್ ಬಾಸ್ ನಲ್ಲಿ ಯಾವೆಲ್ಲ ಸ್ಪರ್ಧಿಗಳು ಇರಲಿದ್ದಾರೆ ಎನ್ನುವ ಕುತೂಹಲ ಹಲವರಿಗೆ ಇದೆ ಆದರೆ ವಾಹಿನಿ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಆದರೆ ಮಾಧ್ಯಮದಲ್ಲಿ ಆಗಾಗ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಮಾತ್ರ ಪ್ರಕಟಿಸಲಾಗುತ್ತಿದೆ.

Leave a Comment