ಮೂಲತಃ ಟಿವಿ ಸೀರಿಯಲ್ಗಳಿಂದ ಮನೆಮಾತಾಗಿರುವ ಚಂದು ಗೌಡ ಅವರನ್ನು ನೀವೆಲ್ಲಾ ಧಾರಾವಾಹಿಗಳಲ್ಲಿ ನೋಡಿರ್ತೀರಾ. ಅವರು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿಯೆ. ವಿದ್ಯಾಭ್ಯಾಸದಲ್ಲಿ ಇವರು ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಇಂಜಿನೀರಿಂಗ್ ಆದನಂತರ ಚಂದು ಗೌಡ ಅವರು ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಮಾಡೆಲಿಂಗ್ ಮೂಲಕ ಖ್ಯಾತಿ ಪಡೆದು ತದನಂತರ ಧಾರಾವಾಹಿಗಳಲ್ಲಿ ಅಭಿನಯಿಸಲು ಪ್ರಾರಂಭಿಸಿದರು.
ಚಂದು ಗೌಡ ಅವರ ತಂದೆ ಭೈರಪ್ಪ ಅವರು ಬೆಂಗಳೂರಿನಲ್ಲಿ ದೊಡ್ಡ ಬಿಸಿನೆಸ್ ಮ್ಯಾನ್. ಚಂದು ಹುಟ್ಟುತ್ತಲೇ ಶ್ರೀಮಂತ ಮನೆತನದಲ್ಲಿ ಹುಟ್ಟಿದ್ದಾರೆ. ತಂದೆಯವರ ಸ್ವಂತ ಬಿಸಿನೆಸ್ ಇದ್ರೂ ಕೂಡ ಚಂದು ಗೌಡ ಅವರಿಗೆ ತನ್ನ ಕಾಲ ಮೇಲೆ ತಾನು ನಿಂತು ಕೊಡಬೇಕು ಎಂಬ ಛಲ ಇತ್ತು. ಇಂಜಿನಿಯರಿಂಗ್ ಪದವಿ ಮುಗಿಸಿದ ಕೂಡಲೆ ಸಾಫ್ಟ್ ವೇರ್ ಇಂಜಿನಿಯರಾಗಿ ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಹಾಗೆ ಬಿಡುವಿನ ಸಮಯದಲ್ಲಿ ತಮ್ಮ ಮಾಡೆಲಿಂಗ್ ಕೆಲಸವನ್ನು ಕೂಡ ಮಾಡುತ್ತಿದ್ದರು.
ಆಗಾಗ ಅವಕಾಶ ಸಿಕ್ಕಿದಾಗಲೆಲ್ಲ ಚಂದುಗೌಡ ಧಾರಾವಾಹಿಗಳ ಆಡಿಷನ್ ಗೆ ಹೋಗುತ್ತಿದ್ದರು. ತದನಂತರ ಇವರ ಅದೃಷ್ಟ ಬದಲಾಗಿದ್ದು ಗೃಹಲಕ್ಷ್ಮಿ ಎಂಬ ಧಾರಾವಾಹಿಯಿಂದ. ಆಡಿಷನ್ ನಲ್ಲಿ ಇವರು ಸೆಲೆಕ್ಟ್ ಆಗಿ ಗೃಹಲಕ್ಷ್ಮಿ ಧಾರಾವಾಹಿಯಲ್ಲಿ ನಟಿಸಲು ಪ್ರಾರಂಭಿಸಿದರು ಇದಾದ ನಂತರ ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಕೂಡ ನಟನೆ ಮಾಡುವ ಸದಾವಕಾಶ ಇವರಿಗೆ ಒದಗಿದೆ. ಧಾರಾವಾಹಿಯಲ್ಲಿ ಹೆಸರು ಮಾಡಿದ ಮೇಲೆ ಚಂದು ಅವರು ಕನ್ನಡ ಸಿನಿಮಾಗಳಲ್ಲಿ ಕೂಡ ಅಭಿನಯಿಸಿದ್ದಾರೆ.
ಡಿ ಬಾಸ್ ಅವರ ರಾಬರ್ಟ್, ಕೃಷ್ಣ ಗಾರ್ಮೆಂಟ್ಸ್ ಮತ್ತು ಸಂಕಷ್ಟಕರ ಗಣಪತಿ ಎಂಬ ಸಿನಿಮಾಗಳಲ್ಲಿ ಚಂದು ಗೌಡ ಅವರು ಅಭಿನಯ ಮಾಡಿದ್ದಾರೆ. ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ಅಭಿನಯ ಮಾಡಿದ ಚಂದು ಗೆ ಸಿನಿಮಾ ಕ್ಷೇತ್ರ ಕೈಗೆಟುಕಲಿಲ್ಲ. ಇದೀಗ ಚಂದು ತ್ರಿನಾಯನಿ ಎಂಬ ತೆಲುಗು ಧಾರಾವಾಹಿಯಲ್ಲಿ ನಾಯಕ ನಟನಾಗಿ ಮಿಂಚುತ್ತಿದ್ದಾರೆ. ಧಾರಾವಾಹಿಯಲ್ಲಿ ನಟನೆ ಮಾಡಿಯೇ ಸಿನಿಮಾ ನಟರಿಗಿಂತ ಹೆಚ್ಚಾಗಿ ಇವರು ಸಂಪಾದನೆ ಮಾಡುತ್ತಿದ್ದಾರೆ. ಇತ್ತೀಚೆಗೆ ಚಂದು ಅತ್ಯಾಧುನಿಕ ಬೈಕ್ ಒಂದನ್ನು ಖರೀದಿ ಮಾಡಿದ್ದಾರೆ.
ಇಡೀ ಪ್ರಪಂಚದಲ್ಲೇ ಅತ್ಯಂತ ವೇಗವಾಗಿ ಚಲಿಸುವ ಬೈಕ್ ಅನ್ನು ಚಂದು ಖರೀದಿ ಮಾಡಿದ್ದಾರೆ. ಹೌದು ಗೆಳೆಯರು ಚಂದು ಗೌಡ ಅವರು ಸುಜುಕಿ ಕಂಪನಿಯ ಹಯಬುಸಾ ಬೈಕ್ ಅನ್ನು ಸ್ವಂತ ದುಡ್ಡಿನಲ್ಲಿ ಖರೀದಿ ಮಾಡಿದ್ದಾರೆ. ಸುಜುಕಿ ಹಾಯಾಬುಸಾ ಟೋಡ್ ಎಡಿಶನ್ ಬೈಕ್ ಇದಾಗಿದೆ. ಡಿಸ್ಕ್ ಬ್ರೇಕ್ ,6 ಗೇರ್, 7000 rpm ಟಾರ್ಕ್, ಬಿಎಸ್ 6 ಎಮಿಶನ್ ಟೈಪ್ ,4 ಸ್ಟ್ರೋಕ್ ಇಂಜಿನ್ ಟೈಪ್,13400 ಸಿಸಿ ಇಂಜಿನ್ ಡಿಸ್ ಪ್ಲೇಸ್ಮೆಂಟ್ ನಂತಹ ಅತ್ಯಾಧುನಿಕ ಸೌಲಭ್ಯಗಳನ್ನು ಈ ಬೈಕ್ ಹೊಂದಿದೆ.
ಸುಜುಕಿ ಹಾಯಾಬುಸಾ ಥರ್ಡ್ ಎಡಿಶನ್ ಬೈಕ್ ನ ಶೋರೂಮ್ ಬೆಲೆ 16 ಲಕ್ಷ ರುಪಾಯಿಗಳು ಆಗುತ್ತವೆ. ಆನ್ ರೋಡ್ ಬೆಲೆ ಕೇಳಿದರೆ ಸುಮಾರು 17 ರಿಂದ 18 ಲಕ್ಷ ರೂಪಾಯಿಗಳ ತನಕ ಆಗುತ್ತೆ. ಲಕ್ಷ ಲಕ್ಷ ದುಡ್ಡು ಕೊಟ್ಟರೂ ಸಹ ಚಂದು ಗೌಡ ಅವರು ಸ್ವಂತ ದುಡ್ಡಿನಿಂದ ತನ್ನ ಕನಸಿನ ಬೈಕ್ ಹಾಯಾಬುಸಾವನ್ನು ಖರೀದಿ ಮಾಡಿ ಖುಷಿ ನನಗಿದೆ ಎಂದು ಹೇಳಿದ್ದಾರೆ. ನನಗೆ ಇದು ತುಂಬಾ ಸಂತಸದ ದಿನವಾಗಿದೆ. ನಾನು ಇಂಥ ಸಾಧನೆ ಮಾಡಲು ನನ್ನ ಬೆನ್ನೆಲುಬಾಗಿದ್ದ ನನ್ನ ಫ್ಯಾಮಿಲಿ ಮತ್ತು ಗೆಳೆಯರಿಗೆ ತುಂಬಾ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಚಂದು ಗೌಡ್ರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.