ಗ್ರಹಸ್ತಾಶ್ರಮ ಸೇರುತ್ತಿರುವ ಜೆಕೆ ಯಾವಾಗ ಗೊತ್ತಾ ಮದುವೆ? ಹುಡುಗಿ ಯಾರು?

ಕಿರುತೆರೆಯಲ್ಲಿ ನಟ-ನಟಿಯರ ನಟನೆಯ ನಂಜೊತೆಗೆ ಪರ್ಸನಲ್ ಲೈಫ್ ನಲ್ಲಿ ಏನಾದರೂ ಬದಲಾವಣೆಗಳಾದರೂ ಜನರಿಗೆ ಅಷ್ಟೇ ಕುತೂಹಲವಿರುತ್ತದೆ. ಅದರಲ್ಲೂ ತಮ್ಮ ನೆಚ್ಚಿನ ನಟ ನಟಿಯರು ಹಸೆಮಣೆ ಏರುತ್ತಾರೆ ಎನ್ನುವ ಸುದ್ದಿ ಅಭಿಮಾನಿಗಳಿಗೆ ಅತ್ಯಂತ ಸಂತೋಷವನ್ನು ಕೊಡುತ್ತೆ. ಸದ್ಯ ಈ ಸಂತೋಷದ ವಿಚಾರವನ್ನು ಹಂಚಿಕೊಂಡಿರುವವರು ಜೆಕೆ ಅಲಿಯಾಸ್ ಕಾರ್ತಿಕ್ ಜಯರಾಂ.

ನಟ ಜೆಕೆ ಇದಾಗಲೇ ಕೆಲವು ಸಿನಿಮಾಗಳಲ್ಲಿ, ’ನಾಗಿಣಿ ಧಾರಾವಾಹಿಯಲ್ಲಿ ನಟಿಸಿದ್ದರೂ ಕೂಡ ಅವರು ಫೇಮಸ್ ಆಗಿರುವುದು ಹಾಗೂ ಇಂದಿಗೂ ಗುರುತಿಸಿಕೊಳ್ಳುವುದು ಅಶ್ವಿನಿ ನಕ್ಷತ್ರ ಧಾರಾವಾಹಿಯ ನಟನೆಯ ಮೂಲಕ. ಅಶ್ವಿನಿ ನಕ್ಷತ್ರ ಧಾರಾವಾಹಿಯಲ್ಲಿ ಜೆಕೆ ಪಾತ್ರವನ್ನು ನಿರ್ವಹಿಸಿದ ನಟ ಕಾರ್ತಿಕ್ ಜಯರಾಂ ಅವರಿಗೆ ಜೋಡಿಯಾಗಿ ಅಭಿನಯಿಸಿದ್ದು ನಟಿ ಮಯೂರಿ. ಇನ್ನು ಅಶ್ವಿನಿ ನಕ್ಷತ್ರ ಧಾರಾವಾಹಿ ಯಲ್ಲಿ ’ಹೆಂಡ್ತಿ’ ಅಂತ ಜೆಕೆ ಕರೆಯುವ ಡೈಲಾಗ್ ತುಂಬಾನೇ ಫೇಮಸ್ ಆಗಿತ್ತು. ಇದೀಗ ನಿಜವಾದ ಲೈಫ್ ಪಾರ್ಟ್ನರ್ ನ್ನು ಆಯ್ದುಕೊಂಡಿದ್ದಾರೆ ನಟ ಕಾರ್ತಿಕ್ ಜಯರಾಂ.

ಹೌದು, 42 ವರ್ಷದ ಜೆಕೆಯನ್ನು ಸಾಮಾನ್ಯವಾಗಿ ಎಲ್ಲರೂ ಕೇಳುತ್ತಿದ್ದ ಪ್ರಶ್ನೆ ಒಂದೇ, ಯಾವಾಗ ನಿಮ್ಮ ಮದುವೆ ಅಂತ. ನಿಮ್ಮ ಹುಡುಗಿಯನ್ನು ಪರಿಚಯಿಸಿ ಅಂತ ಕೂಡ ಆಗಾಗ ಜನ ಕೇಳುತ್ತಿದ್ದರು. ಇದೀಗ ತಾವು ಗೃಹಸ್ಥಾಶ್ರಮ ಸೇರುವ ವಿಷಯವನ್ನು ಬಹಿರಂಗ ಪಡಿಸಿರುವ ಜೆಕೆ ತನ್ನ ಭಾವಿಪತ್ನಿಯ ಬಗ್ಗೆ ರೀವಿಲ್ ಮಾಡಿದ್ದಾರೆ. ಜೆಕೆ ಭಾವಿ ಪತ್ನಿಯ ಹೆಸರು ಅಪರ್ಣಾ. ಇವರು ಫ್ಯಾಶನ್ ಡಿಸೈನರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಜೆಕೆಯನ್ನು ಮದುವೆಯಾಗುತ್ತಿರುವ ಅಪರ್ಣಾ, ಒಬ್ಬಳು ನುರಿತ ಫ್ಯಾಶನ್ ಡಿಸೈನರ್. ಮಾಡೆಲಿಂಗ್ ಲೋಕದಲ್ಲಿ ಇವರು ಚಿರಪರಿಚಿತರು. ಈಗಾಗಲೇ ಸಾಕಷ್ಟು ಮಾಡೆಲ್ ಗಳಿಗೆ ಬೇರೆ ಬೇರೆ ರೀತಿಯ ಹೊಸ ಡ್ರೆಸ್ ಗಳನ್ನು ಡಿಸೈನ್ ಮಾಡಿದ್ದ ಖ್ಯಾತಿ ಇವರದ್ದು. ಅಲ್ಲದೇ ಹಲವು ಸೆಲೆಬ್ರಿಟಿಗಳ ಬಟ್ಟೆಯನ್ನು ಡಿಸೈನ್ ಕೂಡ ಮಾಡಿದ್ದಾರೆ ಅಪರ್ಣಾ. ಜೆಕೆ ಕೂಡ ಅಪರ್ಣಾ ಡಿಸೈನ್ ಮಾಡಿದ ಬಟ್ಟೆಗಳನ್ನು ಮಾಡಲಿಂಗ್ ಮಾಡಿದ್ದಾರೆ. ಇನ್ನು ಅಪರ್ಣ ಸಮಂತ ಕೂಡ ಜೆಕೆ ಜೊತೆಗಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಲಫ್ ಲೈನ್ ಎಂದು ತಲೆಬರಹ ಬರೆದುಕೊಂಡಿದ್ದಾರೆ.

Leave a Comment