ಸಾಮಾನ್ಯವಾಗಿ ಪಾಲಕರಲ್ಲಿಯೂ ಅಥವಾ ಎಲ್ಲರಲ್ಲಿಯೂ ಒಂದು ಭಯ ಇರುತ್ತೆ. ತನ್ನ ಮಗ ಅಥವಾ ಮಗ ಓದುವುದರ ಜೊತೆಗೆ ಇತರ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ, ಉದಾಹರಣೆಗೆ ನಟನೆ, ಡ್ರಾಯಿಂಗ್, ಫೋಟೋಗ್ರಫಿ ಹೀಗೆ ಬೇರೆ ಬೇರೆ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿ ತೋರಿಸಿದರೆ ಓದಿನ ಕಡೆಗೆ ಗಮನಕೊಡುವುದೇ ಇಲ್ಲವೆನೋ, ಉತ್ತೀರ್ಣರಾಗುವುದಿಲ್ಲವೆನೋ ಎಂದು. ಈ ಕಾರಣಕ್ಕೆ ಸಾಕಷ್ಟು ಅಪ್ಪ ಅಮ್ಮಂದಿರು ಮಕ್ಕಳನ್ನು ಓದುವುದನ್ನು ಬಿಟ್ಟು ಬೇರೆ ಯಾವ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ್ಬುದಕ್ಕೂ ಬಿಡುವುದೇ ಇಲ್ಲ. ಹೀಗಾದಾಗ ಮಕ್ಕಳು ಇನ್ನಷ್ಟು ಸೋಲುತ್ತಾರೆಯೇ ಹೊರತು ಗೆಲ್ಲುವುದಿಲ್ಲ. ಓದಿನ ಜೊತೆಗೆ ನಟನೆಯಂತ ಇತರ ಜವಾಬ್ದಾರಿಗಳನ್ನೂ ನಿಭಾಯಿಸಬಹುದು ಎನ್ನುವುದಕ್ಕೆ ಗಟ್ಟಿಮೇಳ ಧಾರಾವಾಯಿಯ ಪುಟ್ಟ ಅಂಜಲಿಯೇ ಸಾಕ್ಷಿ!
ನಿನ್ನೆ (ಮೇ 19,2022) ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದೆ. ಎಂದಿನಂತೆ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ. ಇನ್ನೂ ಆಶ್ಚರ್ಯದ ಸಂಗತಿಯೆಂದರೆ ಈ ಬಾರಿ 622 ಅಂಕಗಳಿಗೆ 600ಕ್ಕಿಂತ ಹೆಚ್ಚು ಅಂಕವನ್ನು ಗಳಿಸಿರುವುವ ವಿದ್ಯಾರ್ಥಿಗಳೇ ಜಾಸ್ತಿ. ಅಂಥ ಬುದ್ಧಿವಂತ್ ವಿದ್ಯಾರ್ಥಿಗಳಲ್ಲಿ ಮಹತಿ ವಿಷ್ಣು ಭಟ್ ಕೂಡ ಒಬ್ಬರು. ಮಹಿತಿ ಎಂದರೆ ನಿಮಗೆ ಬೇಗ ಗೊತ್ತಾಗಲಿಕ್ಕಿಲ್ಲ. ಅದೇ ಗಟ್ಟಿಮೇಳ ಧಾರಾವಾಹಿಯ ಅಂಜಲಿ ಎಂದರೆ ಎಲ್ಲರಿಗೂ ಗೊತ್ತಾಗುತ್ತದೆ. ಮೂರು ಅಕ್ಕಂದಿರ ಕಿರಿಯ ಮುದ್ದಿನ ಸಹೋದರಿಯಾಗಿ ಮಹತಿ, ಅಂಜಲಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇವರು ಕೂಡ ಹತ್ತನೇ ತರಗತಿಯಲ್ಲಿ ಓದುತ್ತಿದ್ದು, ಈಗ ತಮ್ಮ ಫಲಿತಾಂದದ ಬಗ್ಗೆ ಖುಷಿಯಾಗಿದ್ದಾರೆ.
ಮಹತಿ ಗಳಿಸಿದ ಅಂಕಗಳು ಎಷ್ಟು ಗೊತ್ತಾ? ಮಹತಿ ಭಟ್ ತಮ್ಮ ಇನ್ಸ್ಟಾಗ್ರಾಂ ಪೇಕ್ ನಲ್ಲಿ ತಮ್ಮ ಅಂಕಪಟ್ಟಿಯನ್ನೇ ಹಾಕಿದ್ಡಾರೆ 625ಕ್ಕೆ 619 ಅಂಕಗಳನ್ನು ಗಳಿಸಿ 99.04% ಗಳಿಸಿದ್ದಾರೆ. ಇನ್ನು ಇವರು ಗಳಿಸಿರುವ ಅಂಕಗಳನ್ನು ನೋಡುವುದಾದರೆ, ಕನ್ನಡ -124. ಇಂಗ್ಲೀಷ್ – 100, ಹಿಂದಿ- 99, ವಿಜ್ಞಾನ 97, ಗಣಿತ 100ಕ್ಕೆ 100 ಹಾಗೂ ಸಮಾಜ ವಿಜ್ಞಾನಕ್ಕೆ 99 ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
ಮಹತಿ ಭಟ್ ಡ್ರಾಮಾ ಜ್ಯೂನಿಯರ್ಸ್ ಮೂಲಕ ವೇದಿಕೆ ಏರಿದವರು. ಇದಾದ ಬಳಿಕ ಜೀ ಕನ್ನಡ ವಾಹಿನಿ ಅವರಿಗೆ ಧಾರಾವಾಹಿಯಲ್ಲಿ ನಟಿಸುವ ಅವಕಾಶವನ್ನು ನೀಡಿತು. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿರುವ ಮುದ್ದು ಮೊಗದ ಮಹತಿ, ಅದ್ಭುತವಾಗಿಯೇ ಅಭಿನಯಿಸುತ್ತಾರೆ. ನಟನೆಯ ಜೊತೆಗೆ ಓದನ್ನೂ ನಿಭಾಯಿಸುತ್ತಿದ್ದ ಮಹತಿ ಇಂದು ತಮ್ಮ ಪ್ರತಿಭೆಯನ್ನು ಮತ್ತೊಮ್ಮೆ ಜನರ ಮುಂದಿಟ್ಟಿದ್ದಾರೆ. ತಮ್ಮ ಫಲಿತಾಂಶ ಬಂದ ಕೂಡಲೇ ಇನ್ಸ್ಟಾ ಖಾತೆಯಲ್ಲಿ ಅಂಕಪಟ್ಟಿಯನ್ನು ಹಾಕುವ ಮೂಲಕ ಜನರ ಬಳಿ ಮಾತನಾಡಿದ್ದು, ’ರಿಸೆಲ್ಟ್ ಬಂದಿದೆ. ಖುಷಿಯಾಗಿದೆ. 99.04 ಪರ್ಸಂಟೆಜ್ ಸಿಕ್ಕಿದೆ. ಅಮ್ಮ, ಅಪ್ಪ, ಅಣ್ಣ, ತಾತಯ್ಯ, ಅಮ್ಮಮ್ಮ, ಎಲ್ಲರಿಗೂ ನನ್ನ ಬೆಂಬಲಕ್ಕೆ ನಿಂತಿದ್ದಕ್ಕಾಗಿ ಧನವಾದ. ಇನ್ನು ನಟನೆಗೂ ಪ್ರೋಸ್ಸಾಹಿಸಿದ ಟೀಚರ್ ಗಳಿಗೂ ಧನ್ಯವಾದ. ಇನ್ಸ್ಟಾ ಸ್ನೇಹಿತರಿಗೆ ವೀಶೇಷ ಥ್ಯಾಂಕ್ಸ್ ಅಂತ ಬರೆದುಕೊಂಡಿದ್ದಾರೆ ಮಹತಿ. ಈ ಫೋಸ್ಟ್ ನೋಡಿ ಎಲ್ಲರೂ ತುಂಬು ಹೃದಯದಿಂದ ಮಹತಿ ಭಟ್ ಅವರಿಗೆ ವಿಶ್ ಮಾಡಿದ್ದಾರೆ.