ಕನ್ನಡದಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಬಿಗ್ ಬಾಸ್ ರಿಯಾಲಿಟಿ ಶೋ ಎಷ್ಟು ಫೇಮಸ್ ಹಾಗೂ ಜನರಿಗೆ ಇಷ್ಟವಾಗುವ ಶೋ ಅಂತ ಎಲ್ಲರಿಗೂ ಗೊತ್ತು. ಹಾಗಾಗಿ ಈ ಶೋನಲ್ಲಿ ಭಾಗವಹಿಸುವ ಎಲ್ಲಾ ಸ್ಪರ್ಧಿಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಜನರಿಗೆ ತುಸು ಹೆಚ್ಚಾಗಿಯೇ ಇರುತ್ತೆ. ಸದ್ಯ ಈಗ ಸುದ್ದಿಯಲ್ಲಿರೋದು ಬಿಗ್ ಬಾಸ್ ಸೀಸನ್ 6 ವಿನ್ನರ್ ಶಶಿಕುಮಾರ್ ಅವರದ್ದು.
ಬಿಗ್ ಬಾಸ್ ನಲ್ಲಿ ವಿನ್ನರ್ ಆಗಿದ್ದ ಶಶಿಕುಮಾರ್ ಬಿಗ್ ಬಾಸ್ ಮನೆಯ ಒಳಗಿರುವಾಗಲೇ ಜನರ ಗಮನ ಸೆಳೆದಿದ್ದರು ಎಲ್ಲಾ ಟಾಸ್ಕ್ಗಳಲ್ಲಿಯೂ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಿದ್ದರು ಶಶಿಕುಮಾರ್ ಅದಾದ ಬಳಿಕ ಶಶಿಕುಮಾರ್ ಇನ್ನಷ್ಟು ಫೇಮಸ್ ಆಗಿದ್ದು ಅವರ ಕೃಷಿಯ ಆಸಕ್ತಿಯ ಮೇಲೆ. ಶಶಿಕುಮಾರ್ ಒಬ್ಬ ಎಜುಕೇಟೆಡ್ ರೈತ. ಅಂದ್ರೆ ಆಧುನಿಕ ರೀತಿಯಲ್ಲಿ ಹೇಗೆ ಕೃಷಿ ಮಾಡಬೇಕು ಎನ್ನುವುದನ್ನು ಅರಿತುಕೊಂಡು ಇತರರಿಗೂ ಹೇಳಿ ಕೊಡುವಂತಹ ವ್ಯಕ್ತಿ ಇವರು.
ಇದರ ಜೊತೆ ಜೊತೆಯಲಿ ಶಶಿಕುಮಾರ್ ಅವರು ಕೆಲವು ಸಿನಿಮಾಗಳಲ್ಲಿಯೂ ಕೂಡ ಅಭಿನಯಿಸಿದ್ದಾರೆ ಇನ್ನೂ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಆಕ್ಟಿವ್ ಆಗಿರುವ ಶಶಿಕುಮಾರ್ ತಮ್ಮ ತೋಟದ ಅಥವಾ ಇತರ ಕೆಲವು ವಿಡಿಯೋಗಳನ್ನು ಮಾಡಿ ಶೇರ್ ಮಾಡುತ್ತಾರೆ. ಸತ್ಯ ಅವರ ವೈಯಕ್ತಿಕ ಜೀವನದ ಮಹತ್ವದ ಘಟ್ಟದ ಬಗ್ಗೆ ಚರ್ಚೆಯಾಗುತ್ತಿದೆ ಅದೇ ಅವರ ವಿವಾಹ ಮಹೋತ್ಸವ. ಹೌದು ಶಶಿಕುಮಾರ್ ಅವರ ವಿವಾಹ ಶೀಘ್ರದಲ್ಲೇ ನೆರವೇರಲಿದೆ ಆಗಸ್ಟ್ 6 ಮತ್ತು 7ರಂದು ಬೆಂಗಳೂರಿನಲ್ಲಿ ಶಶಿಕುಮಾರ್ ಅವರ ವಿವಾಹ ನೆರವೇರಲಿದೆ. ಇನ್ನು ಶಶಿಕುಮಾರ್ ಅವರ ಮದುವೆಯ ಬಗ್ಗೆ ಟೈಮ್ಸ್ ಆಫ್ ಇಂಡಿಯಾದಲ್ಲಿಯೂ ಕೂಡ ವರದಿಯಾಗಿದೆ.
ಶಶಿಕುಮಾರ್ ಅವರನ್ನು ಮದುವೆಯಾಗುತ್ತಿರುವ ಹುಡುಗಿ ಸ್ವಾತಿ ಇತ್ತೀಚಿಗೆ ಇವರ ನಿಶ್ಚಿತಾರ್ಥ ಕೂಡ ನೆರವೇರಿದೆ ಇದು ಲವ್ ಮ್ಯಾರೇಜ್ ಅಂತ ಸಾಕಷ್ಟು ಜನ ಸೋಶಿಯಲ್ ಮೀಡಿಯಾದಲ್ಲಿ ಕೂಡ ಹೇಳಿದ್ದರು ಸ್ಪಷ್ಟನೆಯನ್ನು ನೀಡಿದ್ದಾರೆ ನಮ್ಮಿಬ್ಬರ ಮದುವೆ ಮಾಡುತ್ತಿದ್ದಾರೆ. ಅದ್ದೂರಿಯಾಗಿ ನಮ್ಮ ಮದುವೆ ನಡೆಯಲಿದೆ ಮೊದಲು ರಿಸೆಪ್ಶನ್ ಇರುತ್ತೆ. ಕುಟುಂಬದವರು ಹಾಗೂ ಆಪ್ತರು ನಮ್ಮ ಈ ಮದುವೆಯ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ ಎಂದು ಶಶಿಕುಮಾರ್ ಹೇಳಿದ್ದಾರೆ.
ಅಂದಹಾಗೆ ಶಶಿಕುಮಾರ್ ಅವರು ಮದುವೆಯಾಗುತ್ತಿರುವ ಹುಡುಗಿ ಅವರ ವೃತ್ತಿ ಕ್ಷೇತ್ರದವರಂತೂ ಅಲ್ಲ ಸ್ವಾತಿ ಇಂಜಿನಿಯರಿಂಗ್ ಪದವೀಧರೆ. ಅವರ ಕುಟುಂಬದವರು ಅಗ್ರಿ ಬಿಸಿನೆಸ್ ನಲ್ಲಿ ತೊಡಗಿಕೊಂಡಿದ್ದಾರಂತೆ. ಇನ್ನು ಸ್ವಾತಿ ದೊಡ್ಡಬಳ್ಳಾಪುರ ಮೂಲದವರು ಅವರದು ಕೃಷಿಗೆ ಸಂಬಂಧಿಸಿದ ದೊಡ್ಡ ಉದ್ಯಮವೇ ಇದೆ. ನಾನು ಕೂಡ ಕೃಷಿ ಉದ್ಯಮವನ್ನು ವಿಸ್ತಾರ ಮಾಡುವ ಆಲೋಚನೆಯಲ್ಲಿ ಇದ್ದೇನೆ ನನ್ನನ್ನು ಮದುವೆಯಾಗುವ ಸ್ವಾತಿ ಕೂಡ ಕೃಷಿ ಕ್ಷೇತ್ರದ ಬಗ್ಗೆ ಆಸಕ್ತಿ ಹೊಂದಿದವರಾಗಿದ್ದು ನನಗೆ ಬೆನ್ನೆಲುಬಾಗಿ ನಿಲ್ಲಬಹುದು ಅಂತ ಶಶಿ ಹೇಳಿಕೊಂಡಿದ್ದಾರೆ.
ಶಶಿಕುಮಾರ್ ಅವರು ಬಿಗ್ ಬಾಸ್ ಆದಮೇಲೆ ಕೃಷಿಯ ಜೊತೆಯಲ್ಲಿ ಇನ್ನಿತರ ವಿಷಯಗಳಲ್ಲಿಯೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಹೆಸರು ಮಾಡಿದ್ದಾರೆ ಶುಗರ್ ಫ್ಯಾಕ್ಟರಿ ಎನ್ನುವ ಚಿತ್ರದಲ್ಲಿ ಈಗಾಗಲೇ ನಟಿಸಿದ್ದಾರೆ. ಅವರಿಗೆ ಕೃಷಿ ಉದ್ಯಮದ ಜೊತೆ ಜೊತೆಗೆ ನಟನೆಯಲ್ಲಿಯೂ ಮುಂದುವರೆಯುವ ಆಲೋಚನೆ ಇದೆಯಂತೆ. ’ಈ ವರೆಗೆ ನನ್ನನ್ನು ನಟನೆಗೆ ಕರೆಯಲು ಬಂದಾಗ ನಾನು ನನ್ನದೇ ಉದ್ಯಮದಲ್ಲಿ ಬ್ಯುಸಿಯಾಗಿದ್ದೆ ಆದರೆ ನಟನಾಗಿ ನಾನು ಮುಂದುವರಿಯಬೇಕು. ಭವಿಷ್ಯದಲ್ಲಿ ಸ್ವಾತಿ ನನ್ನ ಉದ್ಯಮವನ್ನು ನೋಡಿಕೊಳ್ಳುತ್ತಾರೆ ಆಗ ನಟನೆಯಲ್ಲಿ ಇನ್ನಷ್ತು ತೊಡಗಿಕೊಳ್ಳುತ್ತೇನೆ’ ಅಂತ ಹೇಳಿಕೊಂಡಿದ್ದಾರೆ ಶಶಿಕುಮಾರ್. ಅಂತೂ ಬಿಗ್ ಬಾಸ್ ಖ್ಯಾತಿಯ ಶಶಿಕುಮಾರ್ ಸ್ವಾತಿ ಅವರ ಜೊತೆ ಹಸೆಮಣೆ ಏರಲು ಸಿದ್ದರಾಗಿದ್ದಾರೆ. ಅವರ ಅಭಿಮಾನಿಗಳ ಬೆಸ್ಟ್ ವಿಶಸ್ ಅವರೊಂದಿಗಿದೆ.