Yuzi Chahal ಐಪಿಎಲ್ ನಲ್ಲಿ ಅತ್ಯಂತ ಭರವಸೆಯ ತಂಡಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡ ಒಂದಾಗಿ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ವಿಶೇಷವಾಗಿ ಅಭಿಮಾನಿ ಬಳಗದ ವಿಚಾರದಲ್ಲಿ ಆರ್‌ಸಿಬಿ ತಂಡ ಐಪಿಎಲ್ ತಂಡಗಳಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತದೆ. ಇದೇ ತಂಡದಲ್ಲಿ ಎಂಟು ವರ್ಷಗಳ ಕಾಲ ಆಡಿರುವಂತಹ ಒಬ್ಬ ಆಟಗಾರ ಆರ್ ಸಿ ಬಿ ತಂಡದ ವಿರುದ್ಧವಾಗಿ ಹೇಳಿರುವಂತಹ ಹೇಳಿಕೆಯ ಬಗ್ಗೆ ನಾವು ಮಾತನಾಡಲು ಹೊರಟಿದ್ದೇವೆ.
ಹೌದು ಆರ್ಸಿಬಿ(RCB) ತಂಡದಲ್ಲಿ ಎಂಟು ವರ್ಷಗಳ ಕಾಲ ಆಡಿರುವಂತಹ ಚಹಾಲ್ ರವರು ಮೊನ್ನೆ ಅಷ್ಟೇ ನಡೆದಿರುವಂತಹ ಸಂದರ್ಶನದಲ್ಲಿ ಆರ್‌ಸಿಬಿ ತಂಡದ ಪರವಾಗಿ ಅಸಮಾಧಾನ ಮಾತುಗಳನ್ನು ಮಾತನಾಡಿರುವುದು ಕಂಡುಬಂದಿದೆ. ಐಪಿಎಲ್ ಆಕ್ಷನ್ ನಲ್ಲಿ ಕಾಲಿಡುವುದಕ್ಕಿಂತ ಮುಂಚೆ ಚಹಾಲ್ ಅವರ ಬಳಿ ಟೀಮ್ ಮ್ಯಾನೇಜ್ಮೆಂಟ್ ನಿಮ್ಮನ್ನು ಖರೀದಿಸಲು ನಾವು ಆಲ್ ಔಟ್ ಹೋಗುವುದಕ್ಕೆ ಕೂಡ ಸಿದ್ದ ಎಂಬುದಾಗಿ ಹೇಳಿತ್ತಂತೆ.
ಚಹಾಲ್(Yuzi Chahal) ಯಾವತ್ತೂ ಕೂಡ ಹಣಕ್ಕಾಗಿ ಬೇಡಿಕೆ ಇಟ್ಟವರಲ್ಲ ಎಂಬುದಾಗಿ ಕೂಡ ಅವರೇ ಹೇಳುತ್ತಾರೆ. ಅದೇ ರೀತಿ ಆರ್‌ಸಿಬಿ ತಂಡದ ಪರವಾಗಿ ಆಡುವುದು ಕೂಡ ಅವರಿಗೆ ಸಾಕಷ್ಟು ಇಷ್ಟವಾಗಿತ್ತು ಹೀಗಿದ್ದರೂ ಕೂಡ ಆರ್ಸಿಬಿ ತಂಡ ಅವರನ್ನು ಐಪಿಎಲ್ ಆಕ್ಷನ್ ನಲ್ಲಿ ಖರೀದಿಸದೆ ಇರುವುದು ಚಹಾಲರವರಿಗೆ ಸಾಕಷ್ಟು ಕೋಪವನ್ನು ತರಿಸಿತು ಎಂಬುದಾಗಿ ಕೂಡ ಅವರೇ ಈ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಸದ್ಯಕ್ಕೆ ಐಪಿಎಲ್ ನಲ್ಲಿ ಚಹಾಲ್ ರವರು ರಾಜಸ್ಥಾನ ರಾಯಲ್ಸ್ ತಂಡದ ಪರವಾಗಿ ಆಡುತ್ತಿರುವುದು ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದ್ದು ಅಲ್ಲಿ ಕೂಡ ಅತ್ಯಂತ ಪರಿಣಾಮಕಾರಿಯ ಸ್ಪಿನ್ ಬೌಲಿಂಗ್ ಮಾಡುತ್ತಿರುವುದು ಕಳೆದ ಐಪಿಎಲ್ ನಲ್ಲಿ ಕೂಡ ಕಂಡು ಬಂದಿದೆ. ಆರ್ಸಿಬಿ ತಂಡ ಚಹಾಲ್ ರವರನ್ನು ಖರೀದಿಸದೆ ಇರುವ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.