ಈಗ ಮುಂಚಿನ ಹಾಗೆ ಅಲ್ಲ ಗಂಡು ಮಕ್ಕಳಿಗಿಂತ ನಾವೇನೂ ಕಮ್ಮಿಯಿಲ್ಲ ಎಂಬಂತೆ ಹೆಣ್ಣು ಮಕ್ಕಳು ಸಹ ಕ್ರಿಕೆಟ್ ಲೋಕದಲ್ಲಿ ಮಿಂಚುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಸ್ಮೃತಿ ಮಂದಣ್ಣ ಎನ್ನುವ ಸುಂದರ ಆಟಗಾರ್ತಿಯ ಹೆಸರು ಸಖತ್ ಫೇಮಸ್ ಆಗಿದೆ. ದ್ವಿಶತಕ ಬಾರಿಸಿರುವ ಮೊದಲ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆ ಸ್ಮೃತಿ ಮಂದಣ್ಣ ಅವರಿಗೆ ಇದೆ. ನೋಡೋಕೆ ಬ್ಯೂಟಿಫುಲ್ ಆಗಿರುವ ಈ ಮಹಿಳಾ ಆಟಗಾರ್ತಿ ಆಟದಲ್ಲೂ ಕೂಡ ಛಲಗಾರ್ತಿ.
ಕೇವಲ 25 ವರ್ಷದ ಚಿಕ್ಕ ಹುಡುಗಿ ಚಿಕ್ಕವಯಸ್ಸಿನಲ್ಲಿಯೇ ಅಗಾಧವಾದ ಸಾಧನೆಯನ್ನು ಮಾಡಿದ್ದಾರೆ.ಲೆಫ್ಟ್ ಹ್ಯಾಂಡ್ ಬ್ಯಾಟ್ಸ್ಮೆನ್ ನಲ್ಲಿರುವ ಸ್ಮೃತಿ ಇಲ್ಲಿಯವರೆಗೆ 4 ಟೆಸ್ಟ್ ಮ್ಯಾಚುಗಳು 67 ಏಕದಿನ ಪಂದ್ಯಗಳು ಮತ್ತು 84 ಟಿ-ಟ್ವೆಂಟಿ ಪಂದ್ಯಗಳನ್ನು ಆಡಿದ್ದಾಳೆ. ಇದೀಗ 2022 ರ ಮಹಿಳೆಯರ ವಿಶ್ವಕಪ್ ಪಂದ್ಯಗಳು ನಡೆಯುತ್ತಿದೆ. ವೆಸ್ಟ್ ಇಂಡೀಸ್ ವಿರುದ್ಧ ಶತಕವನ್ನು ಬಾರಿಸುವ ಮೂಲಕ ಸ್ಮೃತಿ ಮಂದಣ್ಣ ಆಕರ್ಷಕ ಬ್ಯಾಟಿಂಗ್ ಮಾಡಿದ್ದಾಳೆ.
ಸದ್ಯದ ಮಟ್ಟಿಗಂತೂ ಸ್ಮೃತಿ ಮಂದಣ್ಣ ಭಾರತದ ಮಹಿಳಾ ಕ್ರಿಕೆಟ್ ತಂಡದ ಆಧಾರ ಸ್ತಂಭಗಳಾಗಿದ್ದಾರೆ. ಮಂದಣ್ಣ ರನ್ನು ಹೊಡೆಯದೇ ಇದ್ದರೆ ಆ ಮ್ಯಾಚ್ ಗೆಲ್ಲುವುದು ಕಷ್ಟ ಎಂಬ ಸ್ಥಿತಿಗೆ ಬಂದಿದೆ. ಮಹಿಳಾ ಕ್ರಿಕೆಟ್ ತಂಡದ*ಪ್ಲೇಯರ್ ಎಂದೇ ಇವರನ್ನು ಕರೆಯಬಹುದು. ಸ್ಮೃತಿ ಮಂದಣ್ಣ ಅವರು ಆಡುವ ಶೈಲಿ ನಮಗೆ ಯುವರಾಜ್ ಸಿಂಗ್ ಆಡುತ್ತಿದ್ದ ಶೈಲಿ ನೆನಪಾಗುತ್ತದೆ. ಸ್ಮೃತಿ ಮಂದಣ್ಣ ಅವರ ಬ್ಯಾಟಿಂಗ್ ನೋಡೋಕೆ ಹುಡುಗರು ತುದಿಕಾಲಿನಲ್ಲಿ ಕುಳಿತಿರುತ್ತಾರೆ.
ಸ್ಮೃತಿ ಮಂದಣ್ಣ ಅವರು 45+ ಬ್ಯಾಟಿಂಗ್ ಎವರೇಜ್ ಹೊಂದಿದ್ದಾರೆ. ಭಾರತ ಕ್ರಿಕೆಟ್ ತಂಡದ ಅಮೂಲ್ಯ ಆಟಗಾರ್ತಿ ಯಾಗಿರುವ ಸ್ಮೃತಿ ಮಂದಣ್ಣ ಅವರ ಸಂಭಾವನೆ ತಿಳಿದುಕೊಳ್ಳಲು ಹಲವರಿಗೆ ಕುತೂಹಲ ಇದೆ. ನಮಗೆಲ್ಲ ಗೊತ್ತಿರುವ ಹಾಗೆ ಪುರುಷ ಕ್ರಿಕೆಟ್ ಆಟಗಾರರು ಪ್ರತಿ ವರ್ಷಕ್ಕೆ ಒಟ್ಟು ಇಪ್ಪತ್ತು ಕೋಟಿ ರೂಪಾಯಿಗಳನ್ನು ಪಡೆಯುತ್ತಾರೆ ಮಹಿಳೆಯರಿಗೆ ಸಂಭಾವನೆ ವಿಚಾರದಲ್ಲಿ ಪುರುಷ ಆಟಗಾರರಿಗೆ ಸಿಗುವ ಅರ್ಧದಷ್ಟು ಹಣ ಕೂಡ ಸಿಗುವುದಿಲ್ಲ. ಇದು ನಿಜಕ್ಕೂ ಬೇಸರದ ವಿಷಯ.
ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ರೋಹಿತ್ ಶರ್ಮ ಮತ್ತು ಜಸ್ ಪ್ರೀತ್ ಬುಮ್ರಾ ಅವರು ಪ್ರತಿ ವರ್ಷಕ್ಕೆ ಹತ್ತರಿಂದ ಹದಿನೈದು ಕೋಟಿ ರೂಪಾಯಿಗಳನ್ನು ಸಂಭಾವನೆಯ ರೂಪದಲ್ಲಿ ಪಡೆಯುತ್ತಾರೆ. ಆದರೆ ಮಹಿಳಾ ಆಟಗಾರ್ತಿಯರಾದ ಸ್ಮೃತಿ ಮಂದಣ್ಣ, ಹರ್ಮನ್ ಪ್ರೀತ್ ಕೌರ್ ಮತ್ತು ಮಹಿಳಾ ತಂಡದ ಕ್ಯಾಪ್ಟನ್ ಮಿಥಾಲಿ ರಾಜ್ ಅವರಿಗೆ ತಲಾ ಐವತ್ತು ಲಕ್ಷ ರೂಪಾಯಿಗಳನ್ನು ಪ್ರತಿ ವರ್ಷಕ್ಕೆ ಕೊಡುತ್ತಾರೆ. ಸ್ಮೃತಿ ಮಂದಣ್ಣ ಅವರಿಗೆ ಒಂದು ಟೆಸ್ಟ್ ಮ್ಯಾಚ್ ಆಡಲು 5 ಲಕ್ಷ, ಒಂದು ಏಕದಿನ ಪಂದ್ಯಕ್ಕೆ ೪ ಲಕ್ಷ ಮತ್ತು ಟಿ ಟ್ವೆಂಟಿ ಪಂದ್ಯಕ್ಕೆ ೩.೩ ಲಕ್ಷ ಸಮ್ಮಾನ ಸಂಭಾವನೆಯನ್ನು ನೀಡಲಾಗುತ್ತಿದೆ. ಇದನ್ನು ಹೊರತುಪಡಿಸಿ ಸ್ಮೃತಿ ಮಂದಣ್ಣ ಅವರು ವರ್ಷಕ್ಕೆ ಕೋಟಿಗಿಂತಲೂ ಅಧಿಕ ಹಣವನ್ನು ಕೇವಲ ಪ್ರಚಾರದಿಂದ ಮತ್ತು ಜಾಹೀರಾತಿನಿಂದ ಪಡೆಯುತ್ತಾರೆ.