ವಿರಾಟ್ ಕೊಹ್ಲಿ ಅವರು ದೇಶದಲ್ಲೇ ಅತ್ಯಂತ ಜನಪ್ರಿಯ ಮತ್ತು ಶ್ರೀಮಂತ ಕ್ರಿಕೆಟ್ ಆಟಗಾರರಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ ವಿರಾಟ್ ಕೊಹ್ಲಿಯವರಿಗೆ ದೇಶದಲ್ಲಿ ಅಷ್ಟೇ ಅಲ್ಲದೆ ಪ್ರಪಂಚದಾದ್ಯಂತ ಅಭಿಮಾನಿಗಳು ಇದ್ದಾರೆ. ಬೇಸರದ ವಿಷಯ ಏನೆಂದರೆ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಕೊಹ್ಲಿಯವರ ಇತ್ತೀಚಿನ ಆಟದ ವೈಖರಿ ನೋಡಿ ಬಹಳಷ್ಟು ನೊಂದುಕೊಂಡಿದ್ದಾರೆ. ವಿರಾಟ್ ಕೊಹ್ಲಿ ಅವರು ಕೆಟ್ಟ ಫಾರ್ಮ್ ನೋಡಿ ಅಭಿಮಾನಿಗಳಿಗೆ ದೊಡ್ಡ ಚಿಂತೆಯಾಗಿದೆ.
ಐಪಿಎಲ್ ನಲ್ಲಂತೂ ವಿರಾಟ್ ಕೊಹ್ಲಿ ಅವರು ಸತತವಾಗಿ ವಿಫಲರಾಗುತ್ತಿದ್ದಾರೆ. 10 ರನ್ ಗಳನ್ನು ಹೊಡೆಯೋಕೆ ವಿರಾಟ್ ಕೊಹ್ಲಿಯವರು ಒದ್ದಾಡುತ್ತಿದ್ದಾರೆ. ಇದೇ ರೀತಿಯಾದರೆ ವಿರಾಟ್ ಕೊಹ್ಲಿ ಅವರ ಮುಂದಿನ ಭವಿಷ್ಯ ಹೇಗೆ ಎಂಬ ಚಿಂತೆಯಾಗಿದೆ. ಅಲ್ಲದೆ ಐಪಿಎಲ್ ಮುಗಿದ ನಂತರ ಈ ವರ್ಷ ಟಿ ಟ್ವೆಂಟಿ ವಿಶ್ವಕಪ್ ಪ್ರಾರಂಭವಾಗಲಿದೆ. ವಿರಾಟ್ ಕೊಹ್ಲಿ ಅವರ ಈ ರೀತಿ ಆಟ ಮುಂದುವರಿಸಿದರೆ ಟೀಮ್ ಇಂಡಿಯಾದಲ್ಲಿ ಅವರನ್ನು ಮ್ಯಾಚ್ ನಿಂದ ಹೊರಹಾಕಲಾಗುತ್ತೆ.
ವಿರಾಟ್ ಕೊಹ್ಲಿ ಅವರು ಇಂದಲ್ಲ ನಾಳೆ ಮತ್ತೆ ತಮ್ಮ ಹಳೆಯ ಫಾರ್ಮ್ ಗೆ ಬಂದು ವಿಶ್ವದ ಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆಯುತ್ತಾರೆ ಎಂಬ ಆಶಾಭಾವನೆ ಅಭಿಮಾನಿಗಳಲ್ಲಿದೆ. ವಿರಾಟ್ ಕೊಹ್ಲಿ ಮೇಲೆ ಬೇಸರ ಹೊರ ಹಾಕುತ್ತಿರುವ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಬ್ಬರೂ ಸಿಹಿಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಅನುಷ್ಕಾ ಶರ್ಮಾ ಅವರು ಕಾರ್ಯಕ್ರಮವೊಂದರಲ್ಲಿ ವಿರಾಟ್ ಕೊಹ್ಲಿ ಜೊತೆಗಿರುವ ಫೋಟೋವೊಂದನ್ನ ಹಂಚಿಕೊಂಡಿದ್ದಾರೆ.
ಫೋಟೋ ಹಂಚಿಕೊಂಡಿದ್ದರಲ್ಲಿ ಏನು ವಿಶೇಷ ಎಂದು ನೀವು ಪ್ರಶ್ನೆ ಮಾಡಬಹುದು. ಈ ಫೋಟೋದಲ್ಲಿ ಅನುಷ್ಕಾ ಶರ್ಮಾ ಅವರನ್ನು ನೋಡಿದಾಗ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ ಫೋಟೋ ದಲ್ಲಿ ನೋಡಿ ಅನುಷ್ಕಾ ಶರ್ಮಾ ಅವರನ್ನು ನೋಡಿ ಅಭಿಮಾನಿಗಳು ಅನುಷ್ಕಾ ಶರ್ಮಾ ಅವರು ಗರ್ಭಿಣಿಯಾಗಿದ್ದಾರೆ ಎಂದು ಊಹಿಸಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಕುಟುಂಬಕ್ಕೆ ಎರಡನೇ ಮಗು ಕಾಲಿಡುವ ಸಂದರ್ಭ ಬರುತ್ತಿವೆ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.
2017 ರಲ್ಲಿ ಮದುವೆಯಾದ ಅನುಷ್ಕಾ ಮತ್ತು ವಿರಾಟ್ ಕೊಹ್ಲಿ ಗೆ 4 ವರ್ಷಗಳ ನಂತರ 2021 ರಲ್ಲಿ ವಮಿಕಾ ಎಂಬ ಹೆಣ್ಣು ಮಗಳು ಹುಟ್ಟಿದಳು. ಇದೀಗ ಮತ್ತೆ ಒಂದೂವರೆ ವರ್ಷದೊಳಗೆ ವಿರಾಟ್ ಕೊಹ್ಲಿ ದಂಪತಿಗಳು ಸಿಹಿಸುದ್ದಿ ಕೊಡೊ ಹಂತದಲ್ಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳು ಇದ್ದಾರೆ. ಆದರೆ ಅನುಷ್ಕಾ ಶರ್ಮಾ ಅವರು ಕಳೆದ ಕೆಲವು ದಿನಗಳಿಂದ ಸಿನಿಮಾ ಶೂಟಿಂಗ್ ಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಗರ್ಭಿಣಿಯಾಗಿದ್ದರೆ ಅನುಷ್ಕಾ ಅವರು ಶೂಟಿಂಗ್ ಗಳಿಗೆ ಏಕೆ ಹೋಗುತ್ತಿದ್ದರು ಎಂಬ ಪ್ರಶ್ನೆ ಕೂಡ ಅಭಿಮಾನಿಗಳಲ್ಲಿ ಮೂಡುತ್ತಿದೆ. ಅನುಷ್ಕಾ ಗರ್ಭಿಣಿ ಎಂಬ ಈ ವಿಷಯವು ಅಧಿಕೃತವಾಗಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಅವರ ಕಡೆಯಿಂದ ಬಂದಿಲ್ಲ. ಕೇವಲ ಫೋಟೋ ನೋಡಿ ಅಭಿಮಾನಿಗಳು ಸಂತಸದ ನಿರೀಕ್ಷೆಯಲ್ಲಿದ್ದಾರೆ ಅಷ್ಟೆ.