Team India ಈ ಬಾರಿ ಅಕ್ಟೋಬರ್ 5 ರಿಂದ ಭಾರತದಲ್ಲಿಯೇ ಏಕದಿನ ವಿಶ್ವಕಪ್ ಪ್ರಾರಂಭವಾಗಲಿದ್ದು ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳು ಕೂಡ ತಮ್ಮ ತವರಿನಲ್ಲಿಯೇ ನಡೆಯುತ್ತಿರುವಂತಹ ವಿಶ್ವಕಪ್ಗಾಗಿ ಕಾತರರಾಗಿದ್ದಾರೆ ಎಂದು ಹೇಳಬಹುದು. ಅಷ್ಟಕ್ಕೂ ಈಗ ಭಾರತ ತಂಡ(Team India) ಇರುವಂತಹ ಪರಿಸ್ಥಿತಿ ನೋಡಿದರೆ ಗೆಲ್ಲೋದು ಕೂಡ ಅನುಮಾನ ಎನ್ನಬಹುದು. ಹೇಳೋದಕ್ಕೆ ಬೇಸರವಾದರೂ ಕೂಡ ಇರುವಂತಹ ಪರಿಸ್ಥಿತಿ ಅದೇ ಆಗಿದೆ.
ಹೇಗಿದ್ದರೂ ಕೂಡ ಈ ಬಾರಿ ಸಂಪೂರ್ಣವಾಗಿ ತವರಿನಲ್ಲಿಯೇ ಐಸಿಸಿ ಟೂರ್ನಮೆಂಟ್(ICC Tournament) 2011ರ ನಂತರ ಮೊದಲ ಬಾರಿಗೆ ನಡೆಯುತ್ತಿರುವುದು 2011 ರಲ್ಲಿ ನಡೆದಿರುವಂತಹ ಫಲಿತಾಂಶ ಮತ್ತೆ ಪುನರಾವರ್ತನೆ ಆಗಲಿ ಎಂಬುದಾಗಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಈ ಬಾರಿ ನಡೆಯುವಂತಹ ವಿಶ್ವಕಪ್ ನಲ್ಲಿ ಈ ಒಬ್ಬ ಆಟಗಾರನ ಮೇಲೆ ಸಾಕಷ್ಟು ನಿರೀಕ್ಷೆ ಇದೆ.
ನಿಮಗೆ ನೆನಪಿರಬಹುದು 2011ರಲ್ಲಿ ಆಲ್ರೌಂಡರ್ ಆಗಿದ್ದ ಯುವರಾಜ್ ಸಿಂಗ್(Yuvaraj Singh) ರವರು ಮ್ಯಾನ್ ಆಫ್ ದಿ ಸೀರೀಸ್ ಆಗಿದ್ದರು. ಆದರೆ ಅದಾದ ನಂತರ ಯಾವುದೇ ಐಸಿಸಿ ಟೂರ್ನಮೆಂಟ್ ಗಳಲ್ಲಿ ಕೂಡ ಭಾರತೀಯ ಕ್ರಿಕೆಟ್ ತಂಡ ನಿರೀಕ್ಷಿತ ಪ್ರದರ್ಶನವನ್ನು ನೀಡಲಿಲ್ಲ ಎಂದು ಹೇಳಬಹುದಾಗಿದೆ. ಅದಾದ ನಂತರ ಮೊದಲ ಬಾರಿಗೆ ಈ ಬಾರಿ ವಿಶ್ವ ಕಪ್ ಭಾರತವನ್ನು ಮತ್ತೆ ಪ್ರವೇಶಿಸಿದ್ದು ಈ ಬಾರಿ ಸಂಪೂರ್ಣವಾಗಿ ಭಾರತದಲ್ಲಿಯೇ ನಡೆಯಲಿದೆ.
ಈ ಬಾರಿ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಮತ್ತೊಬ್ಬ ಸ್ಟಾರ್ ಆಲ್ರೌಂಡರ್ ಆಗಿರುವಂತಹ ರವೀಂದ್ರ ಜಡೇಜಾ(Ravindra Jadeja) ಅವರ ಮೇಲೆ ನಿರೀಕ್ಷೆ ಹೆಚ್ಚಾಗಿದ್ದು ಅವರ ಈ ಬಾರಿ ಭಾರತೀಯ ತಂಡದ ಪರವಾಗಿ ಚಾಂಪಿಯನ್ ಆಟಗಾರ ಆಗಲಿದ್ದಾರೆ ಎಂಬುದಾಗಿ ಎಲ್ಲರೂ ಕೂಡ ಭವಿಷ್ಯವನ್ನು ನುಡಿಯುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.