Team India ಈಗಾಗಲೇ ಈ ಬಾರಿ ಭಾರತದಲ್ಲಿ ನಡೆಯಲಿರುವಂತಹ ಏಕದಿನ ವಿಶ್ವಕಪ್(ODI WC) ಟೂರ್ನಮೆಂಟ್ ನ ಎಲ್ಲಾ ಪಿಕ್ಚರ್ ಗಳನ್ನು ಕೂಡ ಶೆಡ್ಯೂಲ್ ಮಾಡಲಾಗಿದೆ. ಭಾರತ ತಂಡ ಯಾವೆಲ್ಲಾ ತಂಡದ ಜೊತೆಗೆ ಆಡಲಿದೆ ಎನ್ನುವುದು ಕೂಡ ನಿರ್ಧಾರಿತವಾಗಿದೆ.
ಎಲ್ಲದಕ್ಕಿಂತ ಪ್ರಮುಖವಾಗಿ ಈಗಾಗಲೇ ಇತ್ತೀಚಿಗಷ್ಟೇ ಇಂಗ್ಲೆಂಡ್ನಲ್ಲಿ ನಡೆದಿರುವಂತಹ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಾನ್ಸ್ ಸೇರಿದಂತೆ ಇತ್ತೀಚಿಗೆ ನಡೆದಿರುವಂತಹ ಬಹುತೇಕ ಎಲ್ಲಾ ಐಸಿಸಿ ಟೂರ್ನಮೆಂಟ್ಗಳಲ್ಲಿ ಕೂಡ ರೋಹಿತ್ ಶರ್ಮ(Rohit Sharma) ಅವರ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ಸಂಪೂರ್ಣ ವಿಫಲವಾಗಿದೆ. ಹೀಗಾಗಿ ಈ ಬಾರಿ ಭಾರತದಲ್ಲಿ ಅಕ್ಟೋಬರ್ 5ರಿಂದ ನಡೆಯುತ್ತಿರುವಂತಹ ವಿಶ್ವಕಪ್ ನಲ್ಲಿ ಬಲಿಷ್ಠವಾದ ತಂಡವನ್ನು ಆಯ್ಕೆ ಮಾಡಬೇಕಾಗಿದೆ.
ಅದರಲ್ಲೂ ವಿಶೇಷವಾಗಿ ಆರಂಭಿಕ ಆಟಗಾರರ ವಿಚಾರಕ್ಕೆ ಬಂದರೆ ಕೆಲವೊಂದು ಆಯ್ಕೆಗಳು ಈಗ ಭಾರತೀಯ ಸೆಲೆಕ್ಟರ್ಗಳ ಮುಂದೆ ಇದ್ದು ಅದನ್ನು ಅವರು ಪರಿಗಣಿಸುತ್ತಾರೆ ಇಲ್ಲವೋ ಎಂಬುದನ್ನು ಕಾದು ನೋಡಬೇಕಾಗಿದೆ ಹಾಗಿದ್ದರೂ ಕೂಡ ಬನ್ನಿ ನಾವು ನಿಮಗೆ ನಮ್ಮ ಸಲಹೆಗಳನ್ನು ಹೇಳುತ್ತೇವೆ.
ಹೌದು ಆರಂಭಿಕ ಆಟಗಾರರ ವಿಚಾರಕ್ಕೆ ಬಂದರೆ ಸಾಕಷ್ಟು ಬಾರಿ ಆಯ್ಕೆಗಳನ್ನು ಪರೀಕ್ಷಿಸಿ ಆಗಿದೆ ಹೀಗಾಗಿ ಐಸಿಸಿ ಟೂರ್ನಮೆಂಟ್ಗಳಲ್ಲಿ ಅತ್ಯುತ್ತಮವಾಗಿ ಪ್ರದರ್ಶನ ನೀಡುವಂತಹ ಶಿಖರ ಧವನ್(Shikar Dhawan) ಹಾಗೂ ಉತ್ತಮವಾದ ಪ್ರತಿಭಾನ್ವಿತ ಆಟಗಾರ ಆಗಿರುವಂತಹ ಸಂಜು ಸಾಂಗ್ಸ್ ಅವರನ್ನು ಆರಂಭಿಕ ಆಟಗಾರರ ಪೈಕಿಯಲ್ಲಿ ತಂಡಕ್ಕೆ ಸೇರಿಸಿಕೊಳ್ಳಬೇಕಾಗಿದೆ ಎಂಬುದಾಗಿ ಪ್ರತಿಯೊಬ್ಬರೂ ಕೂಡ ಆಗ್ರಹ ವ್ಯಕ್ತಪಡಿಸುತ್ತಿದ್ದಾರೆ. ಈ ಆಯ್ಕೆ ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ನೀವು ನಮ್ಮೊಂದಿಗೆ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದಾಗಿದೆ.