Sachin Tendulkar ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಮಾತ್ರವಲ್ಲದೆ ಇಡೀ ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ ಈ ವ್ಯಕ್ತಿಯನ್ನು ಕ್ರಿಕೆಟ್ ದೇವರು ಎಂಬುದಾಗಿ ಪೂಜಿಸಲಾಗುತ್ತದೆ. ಹೌದು ನಾವು ಮಾತನಾಡುತ್ತಿರುವುದು ಕ್ರಿಕೆಟ್ ದೇವರು ಎಂದು ಪೂಜಿಸಲಾಗುವಂತಹ ಸಚಿನ್ ತೆಂಡೂಲ್ಕರ್(Sachin Tendulkar) ಅವರ ಬಗ್ಗೆ.
ಹೌದು ಮಿತ್ರರೇ, ಸಚಿನ್ ತೆಂಡೂಲ್ಕರ್ ಅವರು ನಿಮಗೆಲ್ಲರಿಗೂ ತಿಳಿದಿರಬಹುದು ಕೇವಲ 16 ನೇ ವಯಸ್ಸಿನಲ್ಲಿ ಇರಬೇಕಾದರೆ ಭಾರತೀಯ ಕ್ರಿಕೆಟ್ ತಂಡಕ್ಕೆ ಆಟಗಾರನಾಗಿ ಪಾದರ್ಪಣೆ ಮಾಡುತ್ತಾರೆ. ಅಂದಿನ ದಿಗ್ಗಜ ಕ್ರಿಕೆಟಿಗರು ಕೂಡ ಈ 16ರ ಪೋರನ ಮುಂದೆ ತಲೆಬಾಗುವಂತೆ ಸಾಧನೆ ಮಾಡಿ ತೋರಿಸುತ್ತಾರೆ.
ಇಂದು ಇಡೀ ವಿಶ್ವ ಕ್ರಿಕೆಟ್ ನಲ್ಲಿ ಅತ್ಯಂತ ಶ್ರೀಮಂತ ಕ್ರಿಕೆಟ್ ಆಟಗಾರರ ಸಚಿನ್ ತೆಂಡೂಲ್ಕರ್(Tendulkar) ಅವರ ಹೆಸರು ಮೊದಲನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತದೆ. ಇನ್ನು ಅವರು ಚಿಕ್ಕ ವಯಸ್ಸಿನಲ್ಲಿ ಇರಬೇಕಾದರೆ ತಮ್ಮ ತಂದೆಗೆ ನೀಡಿರುವಂತಹ ಒಂದು ಮಾತನ್ನು ಇಂದಿಗೂ ಕೂಡ ನಡೆಸಿಕೊಂಡು ಬಂದಿದ್ದಾರೆ.
ಹೌದು ಅದೇನೆಂದರೆ ಅತ್ಯಂತ ಚಿಕ್ಕವಯಸ್ಸಿನಲ್ಲಿ ಕ್ರಿಕೆಟ್ ಜಗತ್ತಿನಲ್ಲಿ ಮಿಂಚಿದ ಕಾರಣದಿಂದಾಗಿ ಆ ಸಮಯದಲ್ಲಿ ಅವರಿಗೆ ಜಾಹಿರಾತುಗಳ ಬ್ರಾಂಡ್ ಡೀಲ್ ಗಳು ಸಾಕಷ್ಟು ಹುಡುಕಿಕೊಂಡು ಬರುತ್ತಿದ್ದವು. ಆ ಸಂದರ್ಭದಲ್ಲಿ ಸಚಿನ್ ಅವರ ತಂದೆ ಯಾವುದೇ ಕಾರಣಕ್ಕೂ ತಂಬಾಕು ಉತ್ಪನ್ನಗಳನ್ನು ಮಾತ್ರ ಪ್ರಮೋಟ್ ಮಾಡಬೇಡ ಎಂಬುದಾಗಿ ಭಾಷೆ ತೆಗೆದುಕೊಂಡಿದ್ದರಂತೆ ಅದಕ್ಕಾಗಿಯೇ ಸಚಿನ್(Sachin) ಇಂದಿನವರೆಗೂ ಕೂಡ ಅದೇ ಅಭ್ಯಾಸವನ್ನು ಮುಂದುವರಿಸಿಕೊಂಡು ಬಂದಿದ್ದಾರೆ.