ನೋ ಬಾಲ್ ವಿವಾದ:ಅಂಪೈರ್ ನ ಮುಖ ಮೂತಿ ನೋಡದೆ ಬೈದ ರಿಷಬ್ ಪಂತ್ ವೀಡಿಯೋ ವೈರಲ್

ಐಪಿಎಲ್ ಕ್ರಿಕೆಟ್ ಜಗತ್ತಿನಲ್ಲಿ ಅತ್ಯಂತ ಮನೋರಂಜನೆ ನೀಡುವ ಆಟವಾಗಿದೆ. ಐಪಿಎಲ್ ಕ್ರಿಕೆಟ್ ನ ವಿಶೇಷತೆಯೆಂದರೆ ಇಲ್ಲಿ ಕೇವಲ ಆಟಗಾರರ ವೈಶಿಷ್ಟ್ಯಗಳನ್ನು ಮಾತ್ರವಲ್ಲದೆ ಅವರ ವಿವಿಧ ಅವತಾರಗಳನ್ನು ಕೂಡ ನೋಡಲು ಸಿಗುತ್ತವೆ. ಕ್ರಿಕೇಟ್ ಅಂದ ಮೇಲೆ ಜಗಳ, ಮನಸ್ತಾಪ ಮತ್ತು ಆವೇಶ ಇವೆಲ್ಲವೂ ಸಹಜ. ನಾವು ನಮ್ಮ ಊರಿನಲ್ಲಿ ಕ್ರಿಕೆಟ್ ಆಡುವಾಗ ಹೇಗೆ ಜಗಳವಾಡುತ್ತಿವೋ ಹಾಗೆ ಇಂಟರ್ನ್ಯಾಷನಲ್ ಆಟಗಾರರು ಮೈದಾನದಲ್ಲಿ ಜಗಳಾಡುತ್ತಾರೆ. ಹಲವಾರು ಸಲ ಇಂತಹ ಘಟನೆಗಳು ನಡೆದಿರುವ ಸಂದರ್ಭಗಳಿವೆ.

ಆಟಗಾರರು ಆಟಗಾರರ ಮಧ್ಯೆ ಮತ್ತು ಆಟಗಾರರು ಅಂಪೈರ್ ಗಳ ಜೊತೆಗೆ ಕೂಡ ಜಗಳವಾಡಿರುವ ಹಲವಾರು ಸಂದರ್ಭಗಳಿವೆ. ಇಂತಹುದರಲ್ಲಿ ನಮಗೆ ಮೊದಲಿಗೆ ನೆನಪಿಗೆ ಬರುವುದು ಎಂ ಎಸ್ ಧೋನಿ ಅವರು ಅಂಪೈರ್ ಗಳೊಂದಿಗೆ ಜಗಳವಾಡಿದ ಘಟನೆ. ಈ ಘಟನೆ 2019 ನಡೆದಿತ್ತು. ಮೈದಾನದಿಂದ ಆಚೆಯಿದ್ದ ಮಹೇಂದ್ರ ಸಿಂಗ್ ಧೋನಿ ಅವರು ಅಂಪೈರ್ ನೋಬಾಲ್ ಕೊಟ್ಟಿಲ್ಲವೆಂದು ಕೋಪದಿಂದ ಮೈದಾನಕ್ಕೆ ಇಳಿದು ಅಂಪೈರ್ ನೊಂದಿಗೆ ಜಗಳವಾಡಿದ ಘಟನೆ ನಮಗೆಲ್ಲಾ ಇಂದಿಗೂ ನೆನಪಿದೆ.

ಈಗ ಇಂತಹದ್ದೇ ಘಟನೆ ಈ ವರ್ಷದ ಐಪಿಎಲ್ ನಲ್ಲಿ ಕೂಡ ನಡೆದಿದೆ. ಡೆಲ್ಲಿ ಮತ್ತು ರಾಜಸ್ಥಾನ ತಂಡದ ನಡುವೆ ನಡೆದ ಮ್ಯಾಚ್ ನಲ್ಲಿ ರಿಷಬ್ ಪಂತ್ ಅವರ ಕೋಪ ನೆತ್ತಿಗೇರಿತ್ತು. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ತಂಡದವರು 222 ರನ್ನುಗಳ ಮೊತ್ತವನ್ನು ಕಲೆಹಾಕಿದ್ದರು. 222 ರನ್ ಗಳ ದೊಡ್ಡ ಮೊತ್ತವನ್ನು ಡೆಲ್ಲಿ ಟೀಮ್ ಬೆನ್ನತ್ತಿದ್ದರು.ಕೊನೆಯ ಓವರ್ ನಲ್ಲಿ 6 ಬಾಲ್ ಗಳಿಗೆ 36 ರನ್ ಗಳು ಬೇಕಿತ್ತು. ವೆಸ್ಟ್ ಇಂಡೀಸ್ ತಂಡದ ಪೊವೆಲ್ ಬ್ಯಾಟಿಂಗ್ ಮಾಡುತ್ತಿದ್ದ.

ಮೊದಲ 3 ಬಾಲುಗಳಿಗೆ ಸತತವಾಗಿ 3 ಸಿಕ್ಸರ್ ಗಳನ್ನು ಪೊವೆಲ್ ಬಾರಿಸಿದ್ದಾನೆ. ನಂತರ ಕೊನೆಯ 3 ಬಾಲ್ ಗಳಲ್ಲಿ 18 ರನ್ ಗಳನ್ನು ಹೊ’ಡೆಯಬೇಕಿತ್ತು. 4 ನೇ ಬಾಲ್ ಬ್ಯಾಟ್ಸ್ ಮೆನ್ ಸೊಂಟದ ಮೇಲೆ ಫುಲ್ ಟಾಸ್ ಆಗಿ ಹೋಗಿ ಬೀಳುತ್ತೆ. ಈ ಬಾಲ್ ಅನ್ನು ಅಂಪೈರ್ ನೋಬಾಲ್ ಎಂದು ಪರಿಗಣಿಸುವುದಿಲ್ಲ. ಇದರಿಂದ ರಿಷಬ್ ಪಂತ್ ಪಿತ್ತ ನೆತ್ತಿಗೇರುತ್ತದೆ. ಮೈದಾನದಿಂದ ಹೊರಗಡೆ ಕೂತಿದ್ದ ರಿಷಬ್ ಪಂತ್ ಅಂಪೈರ್ ಗೆ ಕೈ ತೋರಿಸಿ ಬಾಯಿಗೆ ಬಂದ ಹಾಗೆ ಬೈಯ್ದಿದ್ದಾರೆ. ರಿಷಬ್ ಪಂತ್ ಜೊತೆಗೆ ಶೇನ್ ವಾಟ್ಸನ್ ಶಾರ್ದೂಲ್ ಠಾಕೂರ್ ಕೂಡ ಅಂಪೈರ್ ಗೆ ಕೈ ತೋರಿಸಿ ಬೈದಿದ್ದಾರೆ.

ರಿಷಭ್ ಪಂತ್ ಅವರು ಅಂಪೈರ್ ಗೆ ಬೈದಿದ್ದಲ್ಲದೆ ಅಸಿಸ್ಟೆಂಟ್ ಕೋಚ್ ಬಳಿ ಮೈದಾನಕ್ಕೆ ಹೋಗಿ ಅಂಪೈರ್ ಜೊತೆ ಜಗಳವಾಡುವಂತೆ ಕಳಿಸಿದ್ದಾರೆ. ಅಷ್ಟೇ ಅಲ್ಲ ರಿಷಬ್ ಪಂತ್ ಅವರು ಮೈದಾನದಿಂದಲೇ ನಿಂತುಕೊಂಡು ಕೈಸನ್ನೆ ಮಾಡಿ ಬ್ಯಾಟ್ಸ್ ಮನ್ ಗಳಿಗೆ ಪಂದ್ಯವನ್ನು ನಿಲ್ಲಿಸಿ ಮೈದಾನದಿಂದ ಹೊರ ಬರುವಂತೆ ಹೇಳಿದ್ದಾರೆ. ಐಪಿಎಲ್ ಗೇಮ್ ನ ನೀತಿನಿಯಮಗಳನ್ನು ರಿಷಬ್ ಪಂತ್ ಅವರು ಮುರಿದಿರುವುದು ಹಲವರಿಗೆ ಬೇಸರ ತಂದಿದೆ. ಇನ್ನು ಕೆಲವರು ರಿಷಭ್ ಪಂತ್ ಅಂಪೈರ್ ಜೊತೆ ನಡೆದುಕೊಂಡಿದ್ದು ಸರಿಯಿದೆಯೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Leave a Comment