2022 ರ ಮುಕ್ಕಾಲು ಭಾಗದಷ್ಟು ಪಂದ್ಯಗಳು ಐಪಿಎಲ್ ಈಗಾಗಲೇ ಸಂಪೂರ್ಣಗೊಂಡಿದೆ. ಈ ಸಲ ಹತ್ತು ಟೀಮ್ ಗಳು ಮೈದಾನದಲ್ಲಿ ಸೆಣಸಾಡುತ್ತಿದ್ದಾರೆ. ಲಕ್ನೋ ಮತ್ತು ಗುಜರಾತ್ ಎಂಬ ಹೊಸ ಟೀಮ್ ಗಳು ಈ ವರ್ಷ ಸೇರ್ಪಡೆಗೊಂಡಿವೆ. ವಿಶೇಷ ಎಂದರೆ ಹೊಸದಾಗಿ ಸೇರ್ಪಡೆಗೊಂಡಿರುವ ಎರಡು ಟೀಮ್ ಗಳೇ ಮೊದಲ ಎರಡು ಸ್ಥಾನವನ್ನು ಗಳಿಸಿಕೊಂಡಿದ್ದಾರೆ. ಇದೀಗ ಯಾವ ನಾಲ್ಕು ಟೀಮ್ ಗಳು ಪ್ಲೇ ಆಫ್ ಹಂತವನ್ನು ತಲುಪುತ್ತದೆ ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ
ಆರ್ ಸಿಬಿ ಅವರು ಈ ವರ್ಷ ಕಪ್ ಕಪ್ ಗೆಲ್ಲುವುದು ಇರಲಿ. ನಮಗಂತೂ ಆರ್ ಸಿಬಿ ತಂಡದವರು ಈ ವರ್ಷ ಪ್ಲೇಆಫ್ ಹಂತವನ್ನು ತಲುಪಿದರೆ ಸಾಕು ಎನಿಸುವಷ್ಟು ಆಗಿದೆ. ಮೊದಮೊದಲು ಆರ್ ಸಿಬಿ ತಂಡದವರು ತುಂಬಾ ಚೆನ್ನಾಗಿ ಆಟವನ್ನು ಆಡುತ್ತಿದ್ದರು ಆದರೆ ಇದೀಗ ಕೊನೆಯ ಹಂತ ತಲುಪುತ್ತಿದ್ದಂತೆ ಆರ್ ಸಿಬಿಯವರು ತಮ್ಮ ಹಳೆಯ ಚಾಳಿಯನ್ನೇ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಪ್ರತಿ ಮ್ಯಾಚ್ ಅನ್ನು ಆರ್ ಸಿಬಿ ಸೋಲುತ್ತಿದ್ದಾರೆ. ಸತತವಾಗಿ ಕಳೆದ ಮೂರು ಮ್ಯಾಚ್ ಗಳನ್ನು ಸೋತಿದ್ದಾರೆ. ಹತ್ತು ಮ್ಯಾಚ್ ಗಳಲ್ಲಿ ಐದು ಮ್ಯಾಚ್ ಗಳನ್ನು ಸೋತು ಅಂಕಪಟ್ಟಿಯಲ್ಲಿ ಆರ್ ಸಿಬಿ ಐದನೇ ಸ್ಥಾನವನ್ನು ಪಡೆದುಕೊಂಡಿದೆ.
ಆರ್ ಸಿ ಬಿ ತಂಡದವರಿಗೆ ಇನ್ನೂ ಕೂಡ ಪ್ಲೇ ಆಫ್ ಹಂತವನ್ನು ತಲುಪುವ ಅವಕಾಶವಿರುವುದು ನಮಗೆಲ್ಲ ಖುಷಿಯ ಸಮಾಚಾರ. ಆದರೆ ಪ್ಲೇ ಆಫ್ಸ್ ಹಂತವನ್ನು ತಲುಪಲು ಆರ್ ಸಿಬಿ ಹರಸಾಹಸ ಮಾಡಬೇಕಿದೆ. ಪ್ಲೇ ಆಫ್ಸ್ ಹಂತವನ್ನು ತಲುಪಲಿಕ್ಕೆ ಆರ್ ಸಿ ಬಿ ಅವರಿಗೆ ಕೆಲವು ಅಡೆತಡೆಗಳಿವೆ. ಅದೇನೆಂದರೆ ಆರ್ ಸಿಬಿ ತಂಡದ ಇನ್ನೂ ಉಳಿದ ನಾಲ್ಕು ಮ್ಯಾಚ್ ಗಳಲ್ಲಿ ಕನಿಷ್ಠ ಮೂರು ಮ್ಯಾಚ್ ಗಳನ್ನಾದರೂ ಗೆಲ್ಲಲೇ ಬೇಕಾದ ಸಂದರ್ಭ ಒದಗಿದೆ. ಕಳೆದ ಮೂರಕ್ಕೆ ಮೂರು ಮ್ಯಾಚ್ ಗಳನ್ನು ಆರ್ ಸಿ ಬಿ ಅವರು ಸೋಲು ಕಂಡಿದ್ದರಿಂದ ಉಳಿದ ನಾಲ್ಕು ಮ್ಯಾಚ್ ಗಳಲ್ಲಿ ಮೂರು ಮ್ಯಾಚ್ ಗಳನ್ನು ವಿನ್ ಆಗುತ್ತಾರಾ ಎಂಬ ಪ್ರಶ್ನೆ ಮೂಡಿದೆ.
ಇಷ್ಟೇ ಅಲ್ಲ ಆರ್ ಸಿ ಬಿ ತಂಡದವರಿಗೆ ಇನ್ನೊಂದು ತಲೆನೋವಿನ ಚಿಂತೆ ಏನೆಂದರೆ ರನ್ ರೇಟ್. ಆರ್ ಸಿಬಿಯವರು ಸದ್ಯಕ್ಕೆ -0.558 ರನ್ ರೇಟ್ ನಲ್ಲಿ ಇದ್ದಾರೆ. ನೆಗೆಟಿವ್ ರನ್ ರೇಟ್ ನಲ್ಲಿ ಇರುವ ಆರ್ ಸಿಬಿ ಅವರು ಪಾಸಿಟಿವ್ ರನ್ ರೇಟ್ ಗೆ ಬರಬೇಕಾದ ಅನಿವಾರ್ಯತೆ ಇದೆ. ಆರ್ ಸಿಬಿಯವರು ರನ್ ರೇಟ್ ಹೆಚ್ಚಿಸಿಕೊಳ್ಳಬೇಕೆಂದರೆ ಮುಂದಿನ ಪಂದ್ಯಗಳಲ್ಲಿ ಎದುರಾಳಿ ತಂಡದವರನ್ನು ಆಲೌಟ್ ಮಾಡಬೇಕು ಅಥವಾ ಗರಿಷ್ಠ ರನ್ ಗಳ ಅಂತರದಿಂದ ಗೆಲುವು ಸಾಧಿಸಬೇಕು
ಆರ್ ಸಿಬಿ ಅವರ ಮುಂದಿನ 4 ಮ್ಯಾಚ್ ಗಳ ಲಿಸ್ಟ್ ಹೀಗಿವೆ. ಮೇ 6 ಕ್ಕೆ ಚೆನ್ನೈ ಮತ್ತು ಆರ್ ಸಿಬಿ. ಮೇ 8 ಕ್ಕೆ ಸನ್ ರೈಸರ್ಸ್ ಮತ್ತು ಆರ್ ಸಿಬಿ. ಮೇ 13 ಕ್ಕೆ ಆರ್ ಸಿಬಿ ಮತ್ತು ಪಂಜಾಬ್ ಕಿಂಗ್ಸ್. ಹಾಗೂ ಕೊನೆಯ ಮ್ಯಾಚ್ ಮೇ 19 ಕ್ಕೆ ಆರ್ ಸಿಬಿ ಮತ್ತು ಗುಜರಾತ್ ಟೈಟನ್ಸ್. ಈ 4 ನಾಲ್ಕು ಮ್ಯಾಚ್ ಗಳಲ್ಲಿ ಆರ್ ಸಿಬಿ ತಂಡದವರು 3 ಮ್ಯಾಚ್ ಗಳನ್ನು ಗೆಲ್ಲುತ್ತಾರಾ ಅಥವಾ ಗೆಲ್ಲುವ ಸಾಧ್ಯತೆಗಳು ಇದೆಯಾ ಎಂಬುದನ್ನು ಕಮೆಂಟ್ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ.