ಈ ವರ್ಷದ ಐಪಿಎಲ್ ಕೂಡ ಆರ್ ಸಿಬಿ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದೆ. ಕೊನೆಯ ಹಂತಕ್ಕೆ ಇನ್ನೇನು ಒಂದು ಮೆಟ್ಟಿಲು ಹತ್ತಬೇಕು ಎನ್ನುವಷ್ಟರಲ್ಲಿ ಆರ್ ಸಿಬಿ ಸೋತು ಸುಣ್ಣವಾಗಿದೆ. ಈ ವರ್ಷ ಏನೇ ಆದರೂ ಆರ್ ಸಿಬಿ ತಂಡದವರು ಕಪ್ ಗೆದ್ದೇ ಗೆಲ್ಲುತ್ತಾರೆ ಎಂಬ ನಿರೀಕ್ಷೆ ಬಲವಾಗಿ ಆರ್ ಸಿಬಿ ಅಭಿಮಾನಿಗಳಲ್ಲಿ ಮೂಡಿತ್ತು. ಪ್ಲೇ ಆಫ್ ತಲುಪಿದ ಕೂಡಲೇ ಆರ್ ಸಿಬಿ ಕಪ್ ಗೆದ್ದೇ ಗೆಲ್ಲುತ್ತೆ ಎಂಬ ಭರವಸೆ ಕೂಡ ಹುಟ್ಟಿತ್ತು.
ಪ್ಲೇ ಆಫ್ ಹಂತ ತಲುಪಿದ ಮೇಲೆ ಕ್ವಾಲಿಫೈಯರ್ ಮೊದಲನೇ ಹಂತದಲ್ಲಿ ಲಕ್ನೋ ತಂಡದ ವಿರುದ್ಧ ಆರ್ ಸಿಬಿ ತಂಡದವರು ಭರ್ಜರಿ ಗೆಲುವು ಸಾಧಿಸಿದ್ದರು. ಇದೇ ರೀತಿ ಕ್ವಾಲಿಫೈಯರ್ ಎರಡನೇ ಹಂತದಲ್ಲಿ ರಾಜಸ್ತಾನ್ ರಾಯಲ್ಸ್ ತಂಡದ ವಿರುದ್ಧ ಆರ್ ಸಿಬಿ ಗೆಲ್ಲುತ್ತಾರೆ ಎಂಬ ವಿಶ್ವಾಸ ನಮಗಿತ್ತು. ಆದರೆ ದುರದೃಷ್ಟವಶಾತ್ ಆರ್ ಸಿಬಿಯವರು ಕ್ವಾಲಿಫೈಯರ್ ಎರಡನೇ ಹಂತದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಭರ್ಜರಿ ಸೋಲನ್ನು ಕಂಡಿದ್ದಾರೆ. ಇದೀಗ ಆರ್ ಸಿಬಿ ಹೊರ ಈ ಸೋಲಿಗೆ ಕಾರಣ ಯಾರು ಎಂಬ ಚರ್ಚೆ ಹುಟ್ಟಿಕೊಂಡಿದೆ.
ನಿನ್ನೆ(ಮೇ 27) ನಡೆದ ಪಂದ್ಯದಲ್ಲಿ ಈ ಒಬ್ಬ ಆರ್ ಸಿಬಿ ಆಟಗಾರನಿಂದಲೇ ಪಂದ್ಯವನ್ನು ಸೋತಿದ್ದೇವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ ಹೌದು ಗೆಳೆಯರೆ ಈ ಆಟಗಾರ ಬೇರೆ ಯಾರು ಅಲ್ಲ ಆರ್ ಸಿಬಿ ತಂಡದ ಸ್ಟಾರ್ ಆಟಗಾರನಾಗಿರುವ ಮುಹಮ್ಮದ್ ಸಿರಾಜ್. ಸಿರಾಜ್ ಅವರ ಕಳಪೆ ಬೌಲಿಂಗ್ ಅಭಿಮಾನಿಗಳಲ್ಲಿ ಬೇಸರ ತರಿಸಿದೆ . ಹಾಕಿದ ಮೊದಲನೇ ಓವರ್ ನಲ್ಲಿಯೇ ಹದಿನೈದು ರನ್ ಗಳಿಗಿಂತಲೂ ಹೆಚ್ಚು ರನ್ ಗಳನ್ನು ಸಿರಾಜ್ ತಿನ್ನಿಸಿಕೊಂಡಿದ್ದರು .
ಹಾಕಿದ ಎರಡನೇ ಓವರ್ ನಲ್ಲಿ ಸಿರಾಜ್ 32 ರನ್ ಗಳನ್ನು ಹೊ’ಡೆ’ಸಿಕೊಂಡಿದ್ದ. 158 ರನ್ ಗಳ ಟಾರ್ಗೆಟ್ ಅನ್ನು ಕಟ್ಟಿ ಹಾಕಬೇಕೆಂದರೆ ಇಂತಹ ಕಳಪೆ ಬೌಲಿಂಗ್ ಉಪಯೋಗಕ್ಕೆ ಬರಲ್ಲ. ರಾಜಸ್ಥಾನ್ ರಾಯಲ್ಸ್ ತಂಡದ ಬೌಲರ್ ಪ್ರಸಿದ್ಧ್ ಕೃಷ್ಣ ಅವರು ಹಾಕಿದ ಲೈನ್ ಆಂಡ್ ಲೆಂತ್ ಬಾಲುಗಳನ್ನು ಆಡೋಕೆ ಆರ್ ಸಿಬಿ ಬ್ಯಾಟ್ಸ್ ಮನ್ ಗಳು ಪರದಾಡಿದರು. ಆರ್ ಸಿಬಿ ತಂಡದ ಬೌಲರ್ ಸಿರಾಜ್ ಪ್ರಸಿದ್ಧ್ ಕೃಷ್ಣ ಅವರ ಹಾಗೆ ಲೈನ್ &ಲೆಂತ್ ಬಾಲ್ ಗಳನ್ನು ಹಾಕಿಲ್ಲ. ಸ್ಟ್ರಾಂಗ್ ಬೌಲರ್ ಆಗಿದ್ದ ಸಿರಾಜ್ ವೀಕ್ ಬೌಲರ್ ಆಗಿದ್ದಕ್ಕೆ ಇದೀಗ ಟೀಕೆಗಳನ್ನು ಅನುಭವಿಸುತ್ತಿದ್ದಾರೆ.
ಬೇಸರದ ಸಂಗತಿಯೇನೆಂದರೆ ಆರ್ ಸಿಬಿ ಈ ವರ್ಷ ಐಪಿಎಲ್ ನಿಂದ ಹೊರ ಹೋಗಿರೋದಕ್ಕೆ ಕೇವಲ ಸಿರಾಜ್ ಅವರಷ್ಟೇ ಮುಖ್ಯ ಕಾರಣ ಅಲ್ಲ. ಅವರನ್ನ ಒಬ್ಬನೇ ಟಾರ್ಗೆಟ್ ಮಾಡುತ್ತಿರುವುದು ಸರಿಯಲ್ಲ. ಆರ್ ಸಿಬಿ ತಂಡವು ರಾಜಸ್ಥಾನ್ ರಾಯಲ್ಸ್ ಅವರೊಂದಿಗೆ ಸೋಲಲು ಪ್ರತಿಯೊಬ್ಬ ಆರ್ ಸಿಬಿ ಆಟಗಾರರನೂ ಕೂಡ ಕಾರಣ. ಆ ದಿನ ಸಿರಾಜ್ ಅವರ ಟೈಮ್ ಸರಿಯಾಗಿಲ್ಲ ಆಗಿತ್ತು ಅಷ್ಟೆ. ಸಿರಾಜ್ ಅವರು ಇನ್ಮೇಲೆ ಆದರೂ ತಮ್ಮ ಬೌಲಿಂಗ್ ಮೇಲೆ ಶ್ರದ್ಧೆಯಿಟ್ಟು ಕೆಲಸ ಮಾಡಿ ಕಂಬ್ಯಾಕ್ ಮಾಡಲಿ ಅನ್ನೋದು ಆರ್ ಸಿಬಿ ಅಭಿಮಾನಿಗಳ ಆಸೆ.