Ravi Shastri ಈಗಾಗಲೇ ಭಾರತೀಯ ಕ್ರಿಕೆಟ್ ತಂಡ ಮೂರು ಫಾರ್ಮೆಟ್ ಗಳಲ್ಲಿ ಕೂಡ ರೋಹಿತ್ ಶರ್ಮ ರವರ ನಾಯಕತ್ವದಲ್ಲಿ ಮುಂದುವರೆಯುತ್ತದೆ. ಈಗಾಗಲೇ ಸಾಕಷ್ಟು ಐಸಿಸಿ ಟೂರ್ನಮೆಂಟ್ ಗಳಲ್ಲಿ ರೋಹಿತ್ ಶರ್ಮಾ(Rohit Sharma) ಅವರ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ನೀರಸವಾದ ಪ್ರದರ್ಶನವನ್ನು ನೀಡಿರುವುದು ನಿಮಗೆಲ್ಲರಿಗೂ ಗೊತ್ತಿದೆ.
ಇತ್ತೀಚಿಗೆ ನಡೆದಿರುವಂತಹ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್(WTC Final) ನಲ್ಲಿ ಕೂಡ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ನಲ್ಲಿ ಹೀನಾಯವಾಗಿ ಸೋತು ಬಂದಿದೆ ಭಾರತೀಯ ಕ್ರಿಕೆಟ್ ತಂಡ. ಈ ಮೂಲಕ ರೋಹಿತ್ ಶರ್ಮಾ ಅವರ ನಾಯಕತ್ವ ಭಾರತೀಯ ಕ್ರಿಕೆಟ್ ತಂಡದಲ್ಲಿ ಅತ್ಯಂತ ಕಳಪೆಯದ್ದಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಕ್ರಿಕೆಟ್ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ.
ಎಲ್ಲಕ್ಕಿಂತ ಪ್ರಮುಖವಾಗಿ ತಂಡದ ಮಾಜಿ ಕೋಚ್ ಹಾಗೂ 1983 ವರ್ಲ್ಡ್ ಕಪ್ ವಿಜೇತ ಭಾರತೀಯ ಕ್ರಿಕೆಟ್ ತಂಡದ ಸದಸ್ಯ ಆಗಿರುವಂತಹ ರವಿ ಶಾಸ್ತ್ರಿ(Ravi Shastri) ಅವರು ರೋಹಿತ್ ಶರ್ಮ ಅವರ ನಾಯಕತ್ವದ ಬಗ್ಗೆ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ರವಿಶಾಸ್ತ್ರಿ ಅವರು ಸಂಪೂರ್ಣವಾಗಿ ರೋಹಿತ್ ಶರ್ಮ ಅವರ ನಾಯಕತ್ವದ ಬಗ್ಗೆ ಪ್ರಶ್ನೆಯನ್ನು ಎತ್ತಿದ್ದಾರೆ ಎಂದು ಹೇಳಬಹುದಾಗಿದೆ.
ಒಂದು ವೇಳೆ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳು ಈ ಬಾರಿ ಭಾರತದಲ್ಲಿ ನಡೆಯಲಿರುವಂತಹ ವಿಶ್ವಕಪ್ ನಲ್ಲಿ ರೋಹಿತ್ ಶರ್ಮ(Rohit Sharma) ಅವರ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ಕಪ್ ಗೆಲಲ್ಲಿದೆ ಎಂಬುದಾಗಿ ಭಾವಿಸಿದ್ದರು ಯಾಕೆಂದರೆ ಅವರ ನಾಯಕತ್ವದಲ್ಲಿ ನಾನು ತಂಡ ಸೆಮಿಫೈನಲ್ ಹಂತಕ್ಕೆ ಹೋಗುತ್ತದೆ ಎಂಬುದನ್ನು ಕೂಡ ನಂಬಲು ಸಿದ್ದವಿಲ್ಲ ಎಂಬುದಾಗಿ ಹೇಳಿದ್ದಾರೆ.