ಹದಿನೈದು ವರ್ಷ ಕಳೆದರೂ ಸಹ ಆರ್ ಸಿಬಿ ತಂಡದವರು ಇನ್ನೂ ಕೂಡ ಒಂದು ಬಾರಿ ಕಪ್ ಗೆದ್ದಿಲ್ಲ. ಇಷ್ಟು ವರ್ಷಗಳಿಂದ ಅಭಿಮಾನಿಗಳು ಸತತವಾಗಿ ಆರ್ ಸಿಬಿ ತಂಡಕ್ಕೆ ಸಪೋರ್ಟ್ ಮಾಡಿಕೊಂಡೇ ಬರುತ್ತಿದ್ದಾರೆ ಆದರೆ ಆರ್ ಸಿಬಿ ಅವರ ಕೈಯಲ್ಲಿ ಒಂದು ಕಪ್ ಅನ್ನು ಕೂಡ ಗೆಲ್ಲಲಾಗದೆ ಇರೋದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ ಇನ್ಮೇಲೆ ಆರ್ ಸಿಬಿ ತಂಡವನ್ನು ಬೆಂಬಲಿಸಬೇಕೋ ಬೇಡವೋ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.
ಈ ವರ್ಷವಂತೂ ಅಭಿಮಾನಿಗಳಿಗೆ ತುಂಬಾನೇ ಬೇಸರ ಮೂಡಿದೆ ಯಾಕೆಂದರೆ ಆರ್ ಸಿಬಿ ತಂಡದವರು ಈ ವರ್ಷ ಕೊನೆಯ ಹಂತಕ್ಕೆ ಬಂದು ಸೋತಿದ್ದಾರೆ. ಪ್ಲೇ ಆಫ್ ತಲುಪಿ ಕ್ವಾಲಿಫೈಯರ್ ಎರಡನೇ ಹಂತವನ್ನು ತಲುಪಿದ ಆರ್ ಸಿಬಿ ತಂಡ ಸೋಲನ್ನು ಕಂಡಿದೆ. ಇನ್ನು ಒಂದು ಪಂದ್ಯವನ್ನು ಗೆದ್ದಿದ್ದರೆ ಆರ್ ಸಿಬಿ ಐಪಿಎಲ್ 2022 ರ ಫೈನಲ್ ಪ್ರವೇಶ ಮಾಡುವ ಅವಕಾಶವಿತ್ತು.ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಆರ್ ಸಿಬಿ ತಂಡದವರು ಹೀನಾಯ ಸೋಲನ್ನು ಕಂಡು ಐಪಿಎಲ್ ನಿಂದ ನಿರ್ಗಮಿಸಿದ್ದಾರೆ.
ಆರ್ ಸಿಬಿ ತಂಡದವರು ಪ್ಲೇ ಆಫ್ ಹಂತವನ್ನು ತಲುಪಿ ಈ ಬಾರಿಯ ಐಪಿಎಲ್ ಸೀಸನ್ ನಲ್ಲಿ ಮೂರನೇ ಸ್ಥಾನವನ್ನು ಗಳಿಸಿರುವುದು ನಮಗೆಲ್ಲ ಸ್ವಲ್ಪಮಟ್ಟಿಗೆ ಸಂತಸ ತಂದಿದೆ. ಮೂರನೇ ಸ್ಥಾನ ಪಡೆದಿರುವ ಆರ್ ಸಿಬಿ ತಂಡದವರಿಗೆ ದೊಡ್ಡ ಮೊತ್ತದ ಬಹುಮಾನ ಕೂಡ ಸಿಕ್ಕಿದೆ ಈ ಬಾರಿ ಐಪಿಎಲ್ ನಲ್ಲಿ 3 ಮೂರನೇ ಸ್ಥಾನ ಪಡೆದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ನಾಲ್ಕನೇ ಸ್ಥಾನ ಪಡೆದಿರುವ ಲಕ್ನೋ ತಂಡಗಳಿಗೆ ದೊಡ್ಡ ಮಟ್ಟದ ಬಹುಮಾನ ನೀಡಿದ್ದಾರೆ. ಹಾಗಾದರೆ ಈ ತಂಡಗಳಿಗೆ ಸಿಕ್ಕ ಹಣವೆಷ್ಟು ನೋಡೋಣ ಮುಂದೆ ಓದಿ..
ಈ ವರ್ಷದ ಐಪಿಎಲ್ ಸೀಜನ್ ನಲ್ಲಿ ನಾಲ್ಕನೇ ಸ್ಥಾನ ಗಿಟ್ಟಿಸಿಕೊಂಡ ಲಕ್ನೋ ಸೂಪರ್ ಜಯಂಟ್ಸ್ ತಂಡಕ್ಕೆ ಆರೂವರೆ ಕೋಟಿ ರುಪಾಯಿಗಳ ಬಹುಮಾನ ಸಿಕ್ಕಿದೆ. ಹಾಗೆ ಮೂರನೇ ಸ್ಥಾನ ಗಿಟ್ಟಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಎಳು ಕೋಟಿ ರೂಪಾಯಿಯ ಬಹುದೊಡ್ಡ ಬಹುಮಾನ ಸಿಕ್ಕಿದೆ. ಒಂದು ಲೆಕ್ಕದಲ್ಲಿ ನೋಡಿದರೆ ಆರ್ ಸಿಬಿಗೆ ಎಳು ಕೋಟಿ ಯಾವ ಲೆಕ್ಕವು ಅಲ್ಲ ಯಾಕೆಂದರೆ ಆರ್ ಸಿಬಿ ಅವರ ಬಳಿ 2021 ರ ಸಮೀಕ್ಷೆಯ ಪ್ರಕಾರ 650 ಕೋಟಿ ರುಪಾಯಿಗಳ ಆಸ್ತಿ ಇದೆಯಂತೆ. ವಿರಾಟ್ ಕೊಹ್ಲಿ ಅವರಿಗೆ ವರ್ಷಕ್ಕೆ ಹದಿನೈದು ರಿಂದ ಇಪ್ಪತ್ತು ಕೋಟಿ ರುಪಾಯಿಗಳ ವೆಚ್ಚ ಮಾಡುತ್ತಾರೆ.